by athreebook | Aug 7, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೧೧) ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ...
by athreebook | Aug 5, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೧೦) ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು...
by athreebook | Aug 4, 2020 | ಪರ್ವತಾರೋಹಣ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೯) ಕಾಗೆ ಹಾರಿದಂತೆ ಡೆಹ್ರಾಡೂನ್ – ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ – ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು...
by athreebook | Jul 28, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೮) ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ...
by athreebook | Jul 26, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೭) ‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ...
by athreebook | Jul 24, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೬) ಬಳಲಿಕೆಯೋ ತಿನಿಸಿನ ಎಡವಟ್ಟೋ ರಾತ್ರಿ ದೇವಕಿ ಒಂದೆರಡು ಬಾರಿ ವಾಂತಿ ಮಾಡಿದ್ದಳು. ಧಾರಾಳ ನೀರು ಮತ್ತು ಗೆಳೆಯ ಡಾ| ಕೃಷ್ಣಮೋಹನ್ ಕಟ್ಟಿಕೊಟ್ಟಿದ್ದ ಪ್ರಥಮ ಚಿಕಿತ್ಸೆ ಕಟ್ಟಿನಿಂದ ಒಂದು ಗುಳಿಗೆಯಲ್ಲಿ ಸುಮಾರು ಸುಧಾರಿಸಿದಳು. ಹಾಗೆಂದು ಬೆಳಗ್ಗಿನ (೪-೫-೯೦) ನಮ್ಮ ದಿನಚರಿಗೇನೂ ಬದಲಾವಣೆ...
by athreebook | Jul 21, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೫) ಅಂಗಡಿಯಲ್ಲಿ ಹಲವು ನಕ್ಷಾಪುಸ್ತಕಗಳಿಂದ ನಮ್ಮ ಸ್ವಾರ್ಥಾನುಕೂಲಿಯಾದ ಗೀಟುಗಳನ್ನು ಹೆಕ್ಕಿದ ಮಿಶ್ರಣವೇ ನನ್ನ ನಕಾಶೆ. ಆ ಲೆಕ್ಕದಲ್ಲಿ ನಮ್ಮ ಹೊಸದಿನದ (೧-೫-೯೦) ಲಕ್ಷ್ಯ – ರಾಣೀ ರೂಪಮತಿಯ ಅಮರ ಪ್ರೇಮ ಕತೆಗೂ ಸಾಕ್ಷಿಯಾದ ಮಾಂಡವಘಡ್ ಅಥವಾ ಮಾಂಡು. ಹಕ್ಕಿ ಹಾರಿದಂತೆ ಇದು...
by athreebook | Jul 19, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೪) ಪ್ರವಾಸ ಕಥನವೆಂದರೆ ತಿರುಗಾಡೀ ದಿನಚರಿಯ ಪುಟವಲ್ಲ, ಭೇಟಿ ಕೊಟ್ಟ ಸ್ಥಳಗಳ ಪುರಾಣವಲ್ಲ, ಓಡಿದ ದಾರಿಯಲ್ಲ, ಕಂಡ ಚಿತ್ರವಲ್ಲ, ತಿನಿಸುಗಳ ಪಟ್ಟಿಯಲ್ಲ, ….ಅಲ್ಲ, ಅಲ್ಲ! ಅಷ್ಟನ್ನೇ ಕೊಟ್ಟರೆ ಒಳ್ಳೆಯ ಮಾಹಿತಿ, ವರದಿ ಆಗಬಹುದು. ಒಂದು ಕಾಲಕ್ಕೆ ಅಂಥವು ಅವಶ್ಯವಿದ್ದದ್ದೂ ಸರಿಯೇ...
by athreebook | Jul 17, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೩) ವಿಜಯಪುರ – ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ, ಚಾಲುಕ್ಯರ ಆಡಳಿತದಲ್ಲಿ ಗಟ್ಟಿಯಾಗಿ ರೂಪು ಪಡೆದ ನಗರ. ಮುಘಲ್, ಬಹಮನೀ, ಆದಿಲ್ ಶಾಹೀ, ಹೈದರಾಬಾದ್ ನಿಜಾಂ, ಮರಾಠ, ಬ್ರಿಟಿಶ್…… ಆಡಳಿತಗಳ ಸುಳಿಗಳಲ್ಲಿ ಬೆಳೆದಿದೆ, ಬಳಲಿದೆ....
by athreebook | Jul 15, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೨) ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ ನಮ್ಮನ್ನು ಕಾಡದಂತೆ ನೋಡಿಕೊಂಡೆವು. ನಾಲ್ಕೈದು ಗಂಟೆಗೇ ಎದ್ದು ಪ್ರಾತಃ ಕರ್ಮಗಳನ್ನು ಮುಗಿಸಿ, ಉಷಃ ಕಾಲದಲ್ಲೇ ಬೈಕ್‍ಗಳು ಗುಡುಗುಡಿಸುವುದನ್ನು ರೂಢಿಸಿಕೊಂಡೆವು. ಇದಕ್ಕೆ ಹುಬ್ಬಳ್ಳಿಯ ಮುಂಜಾವೇ...