by athreebook | Nov 21, 2008 | ಅಶೋಕವನ, ಎತ್ತಿನ ಹೊಳೆ ಯೋಜನೆ, ಬಿಸಿಲೆ, ವನ್ಯ ಸಂರಕ್ಷಣೆ
ಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ ಸುಮಾರು ಇಪ್ಪತ್ಮೂರು ಕಿ.ಮೀ ಕಂಡಷ್ಟು ಮುಗಿಯದ ಪ್ರಾಕೃತಿಕ ಅನಾವರಣಗಳ ಸರಣಿ. ಎತ್ತೆತ್ತರದ ಮರಗಳ ನೆತ್ತಿಯಿಂದ ನಮ್ಮನ್ನು ಇಣುಕಿ ನೋಡುವ ಕಲ್ಲುಗುಡ್ಡ, ಪಶ್ಚಿಮದ ಧಾಳಿಗೆ ಎದೆಗೊಟ್ಟ ಕನ್ನಡಿಗಲ್ಲು, ಕುಮಾರಧಾರೆಯ...
by athreebook | Nov 7, 2008 | ಜಿ.ಟಿ. ನಾರಾಯಣ ರಾವ್, ವೈಚಾರಿಕ
ನನ್ನ ತಂದೆ (ಜಿ.ಟಿ. ನಾರಾಯಣ ರಾವ್) ತಾಯಿಯರು (ಲಕ್ಷ್ಮಿ ದೇವಿ) ವೈದಿಕ ಸಂಸ್ಕಾರಗಳು ಮತ್ತು ಸಾಂಪ್ರದಾಯಿಕ ಆಚರಣೆಗಳು ಇರುವ ಕುಟುಂಬಗಳಿಂದಲೇ ಬಂದವರು. ತಂದೆಗೆ ಬಾಲ್ಯದಲ್ಲಿ ವೇದಪಾಠವೂ ಆಗಿತ್ತು (ನೋಡಿ ಅವರ ಆತ್ಮಕಥೆ – ಮುಗಿಯದ ಪಯಣ*). ತಂದೆ ವೃತ್ತಿ ಜೀವನಕ್ಕೆ ಇಳಿದು ಆರ್ಥಿಕ ಸ್ವಾತಂತ್ರ್ಯಪಡೆದ ಮೇಲೆ ವೈಚಾರಿಕ...
by athreebook | Nov 2, 2008 | ಲಘು ಬರಹಗಳು
ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ…’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ ಆದ್ದರಿಂದ ನಿರ್ಲಿಪ್ತನಾಗಿಯೇ ಓದುತ್ತಿದ್ದೆ. `…ನಾಲ್ವರು ಗಾಯಾಳುಗಳು. ವೈದೇಹಿ...
by athreebook | Oct 29, 2008 | ಪುಸ್ತಕೋದ್ಯಮ
೨೦೦೮ರ ಏಪ್ರಿಲ್ ತಿಂಗಳ ಒಂದು ದಿನ ಈ ಬಿಳೀಹುಲಿ ನನ್ನಂಗಡಿ ಹೊಕ್ಕಿತು. ಬೆಂಗಳೂರಿನ ವಿನಾಯಕ ಬುಕ್ ಡಿಸ್ಟ್ರಿಬ್ಯೂಟರ್ಸ್ ಎಂದಿನಂತೆ ಹೊಸತುಗಳಲ್ಲಿ ಒಂದಾಗಿ The White Tiger ಒಂದು ಪ್ರತಿ ಕಳಿಸಿದ್ದರು. ನನ್ನ ವನ್ಯದ ಗುಂಗಿನಲ್ಲಿ ಇದೇನಾದರೂ ಮಧ್ಯಪ್ರದೇಶದಲ್ಲಿ ಸೆರೆಯಲ್ಲಿರುವ ಆಲ್ಬಿನೋ ಹುಲಿಗಳ ಕಥೆಯೋ ಎಂದು ಪುಸ್ತಕವನ್ನು...
by athreebook | Oct 18, 2008 | ಪುಸ್ತಕೋದ್ಯಮ
ಯಾವುದೇ ಸಾಹಿತ್ಯ ಸಮ್ಮೇಳನದ ಅಬ್ಬರಕ್ಕೆ ಕಡಿಮೆಯಿಲ್ಲದಂತೆ (ಪ್ರಥಮ?) ಗ್ರಂಥಾಲಯ ಸಮ್ಮೇಳನ ಕಳೆದ ಜುಲೈಯ ೧೯ ಮತ್ತು ೨೦ರಂದು ಧಾರವಾಡದಲ್ಲಿ ನಡೆದಿತ್ತು. ಅಲ್ಲಿ ನಾನು ಮಂಡಿಸಿದ ಪ್ರಬಂಧ – ಗ್ರಂಥಾಲಯದ ಆರೋಗ್ಯಕ್ಕೊಂದಿಷ್ಟು ಕಷಾಯ ನೀವು ಎಂದಿನ ವಿಶ್ವಾಸದೊಡನೆ ಓದಿದ್ದೀರಿ. ಸಭೆಯಲ್ಲಿ ಮತ್ತು ಸಂಘಟನೆಯಲ್ಲಿ ಮಂತ್ರಕ್ಕಿಂತ...
by athreebook | Oct 7, 2008 | ಲಘು ಬರಹಗಳು
ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಹೊಸ ಪುಸ್ತಕ (- ಗುಜರಾತಿನ ವ್ಯಂಗ್ಯ ಕಿರುಗತೆಗಳು – ಅನುವಾದಕ ಡಿ.ಎನ್ ಶ್ರೀನಾಥ್) ಅನಾವರಣದ ಆಮಂತ್ರಣ ಬಂದಿತ್ತು. ಮಾಲಿಕ ಪ್ರಕಾಶ್ ಕಂಬತ್ತಳ್ಳಿ ವಿಳಾಸ ಬರೆಯುವಲ್ಲಿ ನನ್ನ ಹೆಸರಿನ ಇನಿಶಿಯಲ್ಸ್ನಲ್ಲಿ `ಎನ್’ ಅಕ್ಷರ ಬಿಟ್ಟಿದ್ದರು. ಅದಕ್ಕೆ ಕೂಡಲೇ ಅದೇ ಕವರಿನ ಮೇಲೆ ನಾನು ಗೀಚಿದ್ದರ...
by athreebook | Sep 15, 2008 | ಪುಸ್ತಕೋದ್ಯಮ, ಲಘು ಬರಹಗಳು
ಅದೊಂದು ಬೆಳಿಗ್ಗೆ ನನ್ನ ಪುಸ್ತಕ ಮಳಿಗೆಯಲ್ಲಿ ಒಮ್ಮೆಲೆ ನಾಲ್ಕೈದು ಜನ, ಅದರಲ್ಲೂ ಕೆಲವು ಎರಡು ಮೂರು ಜನರ ಗುಂಪುಗಳು ನನ್ನ ಮೇಜನ್ನು ಬಿಲ್ಲಿಗಾಗಿ ಮುತ್ತಿಗೆ ಹಾಕಿದ್ದವು. ಇವುಗಳ ಎಡೆಯಲ್ಲಿ ನನ್ನಿಂದಲೇ ಬಲಕ್ಕೆ ಅಂದರೆ ಶೋಕೇಸಿನ ಕನ್ನಡಿಯ ಆಚೆಗೆ ಏನೋ ಅಸಹಜ ಚಲನೆ ಕಂಡಂತಾಗಿ ತಿರುಗಿ ನೋಡಿದೆ. ಎಂದಿನ ಪರಿಚಿತ ಮುಖ –...
by athreebook | Sep 3, 2008 | ಅಶೋಕವನ, ಎತ್ತಿನ ಹೊಳೆ ಯೋಜನೆ, ಬಿಸಿಲೆ, ವನ್ಯ ಸಂರಕ್ಷಣೆ
ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸದ್ಯ ಪಶ್ಚಿಮಘಟ್ಟದ ಪರಿಸರವನ್ನು ಅದರಲ್ಲೂ ಮುಖ್ಯವಾಗಿ ವನ್ಯ ಪರಿಸರವನ್ನು ಜಲವಿದ್ಯುತ್ತು ಯೋಜನೆಗಳು ಅಪಾರವಾಗಿ ಹಾಳುಗೆಡವುತ್ತಿವೆ. ಇಲ್ಲಿ ಪ್ರಧಾನ ಉತ್ಪನ್ನಕ್ಕಿಂತ...
by athreebook | Aug 7, 2008 | ಪುಸ್ತಕೋದ್ಯಮ
ಪೀಠಿಕೆ : ಹಾಡಿದ್ದೇ ಹಾಡು ಕನ್ನಡ ಪುಸ್ತಕೋದ್ಯಮದ ಸರಕಾರೀಕರಣವನ್ನು ಸದಾ ಕಟುವಾಗಿ ಟೀಕಿಸುತ್ತಾ ಬಂದವನು ನಾನು. ಸೇವೆಗಿಂತ ಸಾರ್ವಜನಿಕ ಹಣದ ಸ್ವಾಹಾ ಹೆಚ್ಚಾದ ವಿವಿಧ ವಿವಿನಿಲಯಗಳ, ಅಕಾಡೆಮಿಗಳ, ಪ್ರಾಧಿಕಾರಗಳ, ಇಲಾಖೆಗಳ, ಕನ್ನಡ ಸಾಹಿತ್ಯ ಪರಿಷತ್ತಿನಂತ ಸ್ವಾಯತ್ತ ಸಂಸ್ಥೆಗಳ ಪ್ರಕಟಣಾಂಗಗಳನ್ನಾದರೂ ಬರ್ಖಾಸ್ತುಗೊಳಿಸಿ...
by athreebook | Jun 18, 2008 | ಪುಸ್ತಕೋದ್ಯಮ
ಬುದ್ಧಿವಂತ ಕೇಳಿದ “ಕಲ್ಪಿಸಿಕೋ – ಅತ್ತ ದರಿ, ಇತ್ತ ಕಮರಿ, ಬೆನ್ನಟ್ಟುತ್ತಿದೆ ಕರಿ, ಎದುರಿಗೊಂದು ಹರಿ! ಪಾರಾಗುವ ಪರಿ?” ದಡ್ಡ ಉತ್ತರಿಸಿದ “ಡೋಂಟ್ ವರಿ, ಕಲ್ಪನೆಯನ್ನು ಹರಿ.” ನನಗೆ ತಿಳಿದಂತೆ ಸುಮಾರು ಎರಡೂವರೆ ವರ್ಷಗಳ ಹಿಂದೆ ಕನ್ನಡಕ್ಕೊಂದು ಪುಸ್ತಕ ನೀತಿಯಾಗಬೇಕೆಂಬ ಸೊಲ್ಲು ಅಂಕೋಲಾದ...