ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ಅಂಡಮಾನ್

ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ಅಂಡಮಾನ್

ಪ್ರಿಯಾನಂದಾ ನಿಂಗೆ ಬೇಕೋ ಬೇಡವೋ ಎಂಬ ಪ್ರಶ್ನೆ ಇಲ್ಲ, ನನಗೆ ಪುರ್ಸೊತ್ತಾಗಿದೆ, ಅಂಡಮಾನ್ ಪ್ರವಾಸದ ಅನುಭವ (೨೦೦೭ ಏಪ್ರಿಲ್ನಿಂದ) ವರ್ಷಕ್ಕೂ ಮಿಕ್ಕು ಕಾಲದಿಂದ ಒತ್ತಡ ಹಾಕುತ್ತಲೇ ಇದೆ. ಈಗ ಇಳಿಸ್ಕೊಳ್ಳಲು ನಿನ್ನ ಹೆಸರಿನಲ್ಲಿ ಒಂದಷ್ಟು ಕುಟ್ಟಿ ಕಂತುಗಳಲ್ಲಿ ಬ್ಲಾಗಿಗೇರಿಸಿ ಒಂದಷ್ಟು ಜನರನ್ನು ಗೋಳುಹೊಯ್ಕೊಳ್ತೇನೆ. ಸಿಂಡಿಕೇಟ್...
ಜಿಟಿ ನಾರಾಯಣರಾಯರಿಗೊಂದು ನುಡಿನಮನ

ಜಿಟಿ ನಾರಾಯಣರಾಯರಿಗೊಂದು ನುಡಿನಮನ

ಜಿಟಿನಾ ನನ್ನ ತಂದೆ. ಈಚಿನ ವರ್ಷಗಳಲ್ಲಿ ಅವರ ಮಾತಿನಲ್ಲಿ ಆಗಾಗ ನಮಗೆ (+ನನ್ನ ಹೆಂಡತಿ) ಆಪ್ತವಾಗಿ ಕೇಳುತ್ತಿದ್ದ ಹೆಸರು ಪ್ರೊ| ಶ್ರೀಕಂಠಕುಮಾರಸ್ವಾಮೀ. ಇವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಎಂಜಿನಿಯರಾಗಿ, ಮದ್ರಾಸಿನ ಐಐಟಿ ಸಂಸ್ಥೆಯಲ್ಲಿ ತಂತ್ರಜ್ಞಾನದ ಪ್ರಾಧ್ಯಾಪಕರಾಗಿ ದುಡಿದವರು....
ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ

ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ

ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್...
ಗೋವಾ ಚಿತ್ರೋತ್ಸವ ಭಾಗ – ೩

ಗೋವಾ ಚಿತ್ರೋತ್ಸವ ಭಾಗ – ೩

ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ ಹಸನ್ಮುಖಿಗಳಾಗಿ ನಿಂತು ಸ್ವಾಗತಿಸಿದ್ದರು. ನಿಗದಿತ ಸಮಯಕ್ಕೆ ಒಂದೆರಡು ಮಿನಿಟು ಮೊದಲೇ ಕಾರ್ಯಕರ್ತನೊಬ್ಬ ಅಂದಿನ ಚಿತ್ರದ ಕಿರು ಜಾತಕ ಘೋಷಿಸಿ ನೇರ `ರೀಲು’ ಬಿಚ್ಚಲು ಅನುವುಮಾಡಿಕೊಟ್ಟ! (ನಮ್ಮಲ್ಲಿ ನಾಲ್ಕಾಣೆ...
ಗೋವಾ ಚಿತ್ರೋತ್ಸವ ಭಾಗ – ೨

ಗೋವಾ ಚಿತ್ರೋತ್ಸವ ಭಾಗ – ೨

ಉಡ್‌ಲ್ಯಾಂಡ್ಸ್‌ನಲ್ಲಿ ಪುತ್ತಪ್ಪ ಬ್ಯಾರಿ! ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ ಐವರನ್ನೇ ಉತ್ಸವಾಂಗಣಕ್ಕೆ ಒಯ್ದು ಬಿಟ್ಟಿತು. ಉತ್ಸವದ ಪ್ರಧಾನ ಆಡಳಿತ ಕಚೇರಿ ಬದಿಯ ಹಳೆಯ ಕಟ್ಟಡದಲ್ಲಿತ್ತು (ಅಲ್ಲಿ ಹಿಂದೆ ವೈದ್ಯಕೀಯ ಕಾಲೇಜ್ ಇತ್ತು). ಉತ್ಸವದ ಅತಿಥಿಗಳಿಗೆ ತಲಾ ನಾಲ್ಕು `ಉಪ...
ಗೋವಾ ಚಿತ್ರೋತ್ಸವ ಭಾಗ – ೧

ಗೋವಾ ಚಿತ್ರೋತ್ಸವ ಭಾಗ – ೧

ಮೂಡಿತು ಗರಿ ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ) `ಗುಬ್ಬಚ್ಚಿಗಳು’ ಸಾರ್ವಜನಿಕಕ್ಕೆ ಬರುವ ಮೊದಲು ಅಲ್ಲಲ್ಲಿ ಕುಪ್ಪಳಿಕೆಗಳನ್ನು ನಡೆಸಿತು. ಲಾಸ್ ಎಂಜಲೀಸ್, ನ್ಯೂಯಾರ್ಕ್, ಟೊರೊಂಟೋ, ಕೋಲ್ಕೊತ್ತಾಗಳಲ್ಲಿ ಚೂರುಪಾರು ಕುಕ್ಕಿ, ಹೆಕ್ಕಿ ಭಾರತೀಯ ಚಿತ್ರೋತ್ಸವಕ್ಕಾಗುವಾಗ...
ಯಕ್ಷೋಪಾಸನೆ

ಯಕ್ಷೋಪಾಸನೆ

(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ...
ರಾಧಾಪ್ರಿಯ ಕೃಷ್ಣನಲ್ಲಿ ಲೀನ!

ರಾಧಾಪ್ರಿಯ ಕೃಷ್ಣನಲ್ಲಿ ಲೀನ!

ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಕನ್ನಡ ಜನಪ್ರಿಯ ಕಾದಂಬರಿಗಳನ್ನು ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾ ನವರತ್ನರಾಂ ಅಕ್ಷರಶಃ ಆಳುತ್ತಿದ್ದ ಕಾಲ. ಆಗೊಬ್ಬ ನಗುಮುಖದ, ಮಿನುಗು ಕಣ್ಣಿನ ಹುಡುಗ, ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ನನ್ನಲ್ಲಿಗೆ ಖಾಯಂ ಬರುತ್ತಿದ್ದ. ಪುಸ್ತಕಗಳ ಬಗ್ಗೆ ತುಂಬಾ ಸಂಭ್ರಮಿಸುತ್ತಿದ್ದ ಆತ...
ಬಿಳಿಹುಲಿಗೊಂದು ಬಾಲ

ಬಿಳಿಹುಲಿಗೊಂದು ಬಾಲ

ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಟೀಚರಮ್ಮಂದಿರು ಆರಿಸಿಟ್ಟ ಪುಸ್ತಕಗಳನ್ನು ನಾನು ಬಿಲ್ಲು ಮಾಡುತ್ತಿದ್ದೆ. ಅವರು ನನ್ನ ಮೇಜಿನ ಅಂಚುಗಟ್ಟಿ ನಿಂತ ಹಾಗೇ ಮೇಜಿನ ಕನ್ನಡಿಯಡಿಯಲ್ಲಿ ನಾನಿಟ್ಟಿದ್ದ ಎರಡು ವ್ಯಂಗ್ಯ ಚಿತ್ರಗಳನ್ನು ಗಮನಿಸಿದರು. ಮೊದಲು ಟೈಮ್ಸ್ ಆಫ್ ಇಂಡಿಯಾದ್ದು, ಕಲಾವಿದ – ಪೊನ್ನಪ್ಪ. ಅರವಿಂದ ಅಡಿಗರ...
ಯಕ್ಷಗಾನ ಕಲಾರಂಗದ ಮೂರು ಬೈಠಕ್

ಯಕ್ಷಗಾನ ಕಲಾರಂಗದ ಮೂರು ಬೈಠಕ್

ಪ್ರಿಯ ಮುರಳಿ ಕಡೇಕಾರರೇ, ಪದಾಧಿಕಾರಿಗಳ ಭಾರಕ್ಕೆ ಕುಸಿಯುವ, ಸ್ಥಾವರ ಕಟ್ಟುವ (ಕಛೇರಿ, ಸಭಾಭವನ ಇತ್ಯಾದಿ) ಹುಚ್ಚಿನಲ್ಲಿ ಆಶಯ ಸಮಾಧಿಸುವ ಸಂಘಟನೆಗಳ (ಹೆಚ್ಚಾಗಿ ಸರಕಾರೀ) ನಡುವಣ ಕಮಲ ನಿಮ್ಮ (ಉಡುಪಿಯ) ಯಕ್ಷಗಾನ ಕಲಾರಂಗ (ರಿ). ಅಂದಿನ (೯-೧೧-೨೦೦೮ ಆದಿತ್ಯವಾರ) ಸಭಾಸದರ ಸಂಖ್ಯೆಗೆ ಕಲಾರಂಗದ ಕಛೇರಿ ಕಿಷ್ಕಿಂಧೆಯೇ ಆಯ್ತು. ಆದರೆ...