ನನ್ನದೇ ಮರಣವಾರ್ತೆ ಓದಿದಂತೆ!

ನನ್ನದೇ ಮರಣವಾರ್ತೆ ಓದಿದಂತೆ!

ಅತ್ರಿ ಬುಕ್ ಸೆಂಟರಿಗೆ ೩೫ ವರ್ಷಗಳಾಗಿದ್ದಾಗ, ಅಂದರೆ ೨೦೧೧ರಲ್ಲಿ ನಾನು ನನ್ನ ಪ್ರಕಾಶನ ವಿಭಾಗವನ್ನು ಮುಚ್ಚಿದ್ದನ್ನು ಜಾಲತಾಣದಲ್ಲಿ ಸಕಾರಣ ಘೋಷಿಸಿಕೊಂಡಿದ್ದೆ. (ನೋಡಿ: ಅತ್ರಿ, ಪುಸ್ತಕ ಪ್ರಕಾಶನವನ್ನು ಮುಚ್ಚಿದೆ) ಆ ಕಾಲಕ್ಕೆ ನಾನು ಫೇಸ್ ಬುಕ್ಕಿನಲ್ಲಿ ಹೆಚ್ಚು ಸಕ್ರಿಯನಾಗಿರಲಿಲ್ಲ. ಆದರೂ ಅನಿರೀಕ್ಷಿತವಾಗಿ ನೇರ ಜಾಲತಾಣಕ್ಕೇ...
ಬದಲಾದ ಬಣ್ಣಗಳು

ಬದಲಾದ ಬಣ್ಣಗಳು

ಶ್ಯಾಮಲಾ ಮಾಧವ, ಮುಂಬೈ ಎಷ್ಟೊಂದು ಸರಳವೂ ಸಹಜವೂ ಆಗಿದ್ದ ದಿನಗಳವು! ಕಾಲ ಕಾಲಕ್ಕೆ ಮಳೆ, ಚಳಿ, ಸೆಕೆ ಎಂದು ನಿಯಮಿತವಾಗಿದ್ದ ಋತುಮಾನ. ಅಂತೆಯೇ ಆವರ್ತನ ಗೊಳ್ಳುತ್ತಿದ್ದ ಕಾಲಯಾನ; ಸಹಜವಾಗಿಯೇ ತೆರೆದು ಕೊಳ್ಳುತ್ತಿದ್ದ ದಿನಮಾನ; ಅವರವರ ವೃತ್ತಿಯಲ್ಲಿ ವ್ಯಸ್ತರಾಗಿಯೂ, ಬಿಡುವಾಗಿಯೂ ಇರುತ್ತಿದ್ದ ಜನರ ಸರಳ ಜೀವನ. ಈ ಸರಳತೆಯೆಂಬುದು...
ನಾಲ್ಕು ಸಕ್ಕರೆ ಹನಿಗಳು

ನಾಲ್ಕು ಸಕ್ಕರೆ ಹನಿಗಳು

ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು ಈಗಾಗಲೇ ಮೂರು ಸಿನಿಮಾಗಳಲ್ಲಿ (ಗುಬ್ಬಚ್ಚಿಗಳು, ಶಿಕಾರಿ – ಕನ್ನಡ ಮತು ಮಲಯಾಳದಲ್ಲಿ) ಗಳಿಸಿದ ಗಟ್ಟಿ ಅನುಭವದ ಮುನ್ನೆಲೆಯಲ್ಲಿ ಸ್ವಂತ ಕತೆ ಹಾಗೂ ನಿರ್ದೇಶನದಲ್ಲಿ ಕಥಾಚಿತ್ರ ‘ಸಕ್ಕರೆ’ ಅಚ್ಚನ್ನು...
ಎಂದೂ ಮುಗಿಯದ ಕಥಾಸರಣಿ!

ಎಂದೂ ಮುಗಿಯದ ಕಥಾಸರಣಿ!

ಕೂಸಿಗಿಂತ ದೊಡ್ಡ ಕುಲಾವಿ ಅರ್ಥಾತ್ ಪೀಠಿಕೆ: ಅಭಯಸಿಂಹ (ಮಗ) ‘ಸಕ್ಕರೆ’ ಹಿಡಿದುಕೊಂಡು (ಅವನ ನಿರ್ದೇಶನದ ಹೊಸ ಚಿತ್ರ) ಮಡಿಕೇರಿ ಚಿತ್ರೀಕರಣದ ಮೊಕ್ಕಾಂ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಅವನ ನೇರ ಭಾಗವಹಿಸುವಿಕೆಯ ಕಲಾಪಗಳ ಒತ್ತಡ ಕಡಿಮೆಯಾಗಿ, ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಇತ್ತ ಉದಯ...
ಕಾಗದ ಮಡಚೋಣ

ಕಾಗದ ಮಡಚೋಣ

ಓರಿಗೆಮಿ – ಕಾಗದ ಮಡಚಿ ಆಕೃತಿ ಮೂಡಿಸುವ ಕಲೆ, ಇಂದು ನಮ್ಮ ಬಾಲಲೋಕದಲ್ಲಿ ಪಠ್ಯದ ಭಾಗವೇ ಆಗಿರುವ ಕ್ರೀಡೆಗೆ ಜಪಾನೀ ಹೆಸರು. ಇದರಲ್ಲಿ ನನಗೆ ಬಾಲ್ಯದಿಂದಲೂ ತಕ್ಕಮಟ್ಟಿಗೆ ಆಸಕ್ತಿ ಇತ್ತು. (ಶಿವರಾಮ ಕಾರಂತರು ತಾವು ಸೇದಿ ಬಿಟ್ಟ ಸಿಗರೇಟ್ ಪ್ಯಾಕಿನ ಡಬ್ಬಿ, ಸೀಸದಲ್ಲಿ ವಿವಿಧ ಆಕೃತಿಗಳನ್ನು ಮಾಡಿಕೊಟ್ಟು ಮಕ್ಕಳನ್ನು...
ಬತ್ತಿಯ ಬೆಂಬತ್ತಿ!

ಬತ್ತಿಯ ಬೆಂಬತ್ತಿ!

ತಲೆಗೆರಡು ತಟ್ಟಿ ಗುಂಡಿ ಅದುಮಿದಾಗ, ನನ್ನ ಹತ್ತು ವರ್ಷ ಹಳೆಯ ಮರುಪೂರಣ ತಾಕತ್ತಿನ ಟಾರ್ಚ್ ಮಿಣಕು ಬೆಳಕೇನೋ ಕೊಟ್ಟಿತು. ಅದರ ಅವನತ ಪ್ರಕಾಶ ಶೂನ್ಯ ಮುಟ್ಟುವ ಮೊದಲು ನಮ್ಮ ಕಾಡ್ಮನೆಯ ಅಡುಗೆಮನೆ ಮೂಲೆಯಲ್ಲಿ ಮಂಕಳಂತೆ ಕೂತ ಬುಡ್ಡೀದೀಪ ಗುರುತಿಸಿಕೊಂಡೆ. (ಪದಮೂಲ ಹುಡುಕುವವರು ಇದು ಬೆಡ್ ಲ್ಯಾಂಪಿನ ತದ್ಭವ ಎನ್ನಬಹುದೋ ಏನೋ. ಆದರೆ...