by athreebook | Dec 4, 2017 | ಪ್ರವಾಸ ಕಥನ, ವೈಚಾರಿಕ
ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ – ಪುತ್ತೂರು ಮೂಲದ ಎಂ.ಎಸ್. ಭಟ್ಟರ ಮಗ, ಹಿರಿಯ ಉದ್ಯಮಿ ಶ್ಯಾಮಭಟ್, ಹೈದರಾಬಾದ್ ನಿವಾಸಿಗಳು. ಅವರ ಮಗಳು ಇಳಾ, ತನ್ನ ಬಿಟ್ಸ್ ಪಿಲಾನಿ ಸಹಪಾಠಿ ಋಷಿಲ್ ಜತೆ ಪರಸ್ಪರ ಅನುರಾಗದಲ್ಲಿ, ಮದುವೆಯ ಬಂಧ ಬಯಸಿದ್ದಳು. ಮಾರ್ವಾಡಿ ಸಂಪ್ರದಾಯದ...
by athreebook | Aug 2, 2017 | ಜಲಮುಖೀ ಹುಡುಕಾಟಗಳು, ದಾಖಲೀಕರಣ, ನೀನಾಸಂ, ರಂಗ ಸ್ಥಳ, ವೈಚಾರಿಕ
“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ...
by athreebook | Jul 12, 2017 | ಇತರ ಸಾಹಸಗಳು, ಮರ ಕೆತ್ತನೆ, ವೈಚಾರಿಕ
(ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೨) ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ ಕಡಿಮೆಯಾಗುತ್ತಿದ್ದಂತೇ `ರಕ್ಕಸ’ ಸಾಗುವಾನಿ ಬೊಡ್ಡೆಯೊಂದಿಗೆ ದೇವಕಿ ಹೋರಾಟ ಸುರುಮಾಡಿದ್ದಳು. ರಕ್ಕಸ ಸುಮಾರು ಹತ್ತಿಂಚು ವ್ಯಾಸದ ಇನ್ಯಾವುದೋ ಮರದ ಗುತ್ತಿ ಬೇರುಗಳನ್ನು ತನ್ನ ಬೇರಜಾಲದ ಮರಣಾಂತಿಕ...
by athreebook | Jul 5, 2017 | ಇತರ ಸಾಹಸಗಳು, ಮರ ಕೆತ್ತನೆ, ವೈಚಾರಿಕ
ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೧ ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ...
by athreebook | May 17, 2017 | ಪರಿಸರ ಸಂರಕ್ಷಣೆ, ವನ್ಯ ಸಂರಕ್ಷಣೆ, ವೈಚಾರಿಕ
ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು...
by athreebook | Apr 5, 2017 | ಅಭಯಾರಣ್ಯ, ಆತ್ಮಕಥಾನಕ, ಇತರ ಸಾಹಸಗಳು, ಪ್ರವಾಸ ಕಥನ, ವೈಚಾರಿಕ
[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ] ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ...