ಮತ್ತೆ ತುಮರಿಗೆ….

ಮತ್ತೆ ತುಮರಿಗೆ….

ಗುರಿಯಷ್ಟೇ ದಾರಿಯೂ ಮುಖ್ಯ… ಕಾಲತಪ್ಪಿದ ಮಳೆರಾಯನಿಗೆ ಹೆದರಿ ನಾವಿಬ್ಬರು (ದೇವಕಿ ಸಹಿತ) ಈ ವರ್ಷವೂ ಕಾರು ಹೊರಡಿಸಿದ್ದೆವು. ಅನಿವಾರ್ಯವಾಗಿ ಉರಿಸುವ ಪೆಟ್ರೋಲಿಗೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಲು, ಕಾರು ತುಂಬುವ ಜವಾಬ್ದಾರಿಯನ್ನು ರಘು ಅವರಿಗೇ ವಹಿಸಿದ್ದೆ. ಹಾಗೆ ದಕ್ಕಿದವರು – ನನಗೆ ಪೂರ್ವ ಪರಿಚಯದ ವಿಲ್ಸನ್...
ಮಾರ್ಗದ ಸಂಗಡ ಮಾತುಕತೆ

ಮಾರ್ಗದ ಸಂಗಡ ಮಾತುಕತೆ

(ನೀನಾಸಂ ಕಲೆಗಳ ಸಂಗಡ ಮಾತುಕತೆ-೪) ತೊಟ್ಟ ಬಾಣವನ್ನು ಮರಳಿ ತೊಡೆ…   ಶಿಬಿರ ಮುಗಿದ ಮೇಲೆ ‘ಅಲ್ಲಿರುವುದು ಸುಮ್ಮನೆ’ ಎಂದು ಬೆಳಿಗ್ಗೆ (೧೦/೧೧) ಏಳು ಗಂಟೆಗೇ ಬೈಕೇರಿದ್ದೆವು. ಹೊಸ ಅನುಭವದ ಹುಡುಕಾಟದಲ್ಲಿ ನನ್ನದೊಂದು ಸಣ್ಣ ನಿರ್ಧಾರ – ಒಮ್ಮೆ ಬಳಸಿದ ದಾರಿಯನ್ನು ವಿಶೇಷ ಕಾಲಾಂತರವಲ್ಲದೇ (ಮತ್ತು ...
ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ

ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ

(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨) ವಾಸ, ಊಟ ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ ಕಟ್ಟಡದ ಕೋಣೆಯನ್ನು ಕೊಟ್ಟಿದ್ದರು. ವಠಾರದ ಹೆಚ್ಚಿನಕಟ್ಟಡಗಳಂತೆ ಇದೂ ಹಳತು. ಆದರೆ ಎರಡು ಮಂಚ, ಹಾಸಿ ಹೊದೆಯುವುದು, ಫ್ಯಾನ್, ಸ್ನಾನಕ್ಕೆ ಬಿಸಿನೀರು, ಸ್ವತಂತ್ರ ಶೌಚ ವ್ಯವಸ್ಥೆ, ‘ಆಹಾರ್ಯ’ದ ನೆರೆಮನೆ...
ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨

ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨

(ಭಾಗ ೧) ನಾನು ನೀನು ಸೇರಿಕೊಂಡೂ…. ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು...
ತುಮರಿಯ ದಾರಿಯಲ್ಲಿ…

ತುಮರಿಯ ದಾರಿಯಲ್ಲಿ…

ಹಾಮ ಭಟ್ಟ ಸ್ಮೃತಿ ಹಬ್ಬ – ೨೦೨೨ ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ (ನೋಡಿ: ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು, ೧೯೮೮) ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ...
ಮಡಿಕೇರಿ ಟಿಪ್ಪಣಿಗಳು

ಮಡಿಕೇರಿ ಟಿಪ್ಪಣಿಗಳು

[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು – ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ ಸಾಮಯಿಕ ಟಿಪ್ಪಣಿಗಳನ್ನು ಫೇಸ್ ಬುಕ್ಕಿನಲ್ಲಿ ಪ್ರಕಟಿಸುತ್ತ ಬಂದಿದ್ದೆ. ಇಲ್ಲಿ ಅವುಗಳನ್ನು ಪರಿಷ್ಕರಿಸಿ, ಕಾಲಾನುಕ್ರಮದಲ್ಲೇ ಸಂಕಲಿಸಿದ್ದೇನೆ.] ೧....