ಬದರೀನಾಥದೊಡನೆ ಯಾತ್ರಾ ಫಲಶ್ರುತಿ

ಬದರೀನಾಥದೊಡನೆ ಯಾತ್ರಾ ಫಲಶ್ರುತಿ

(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! – ಉತ್ತರಾರ್ಧ) ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ ಹೆದ್ದಾರಿಗಳಲ್ಲೇ ಇತ್ತು. ಅಂದರೆ ನಾವು ಬಂದಿದ್ದ ಹೆದ್ದಾರಿ ೧೦೭ರಲ್ಲಿ ರುದ್ರಪ್ರಯಾಗಕ್ಕೆ ಮರಳಿ, ಡೆಹ್ರಾಡೂನಿನಿಂದ ಬಂದಿದ್ದ ಹೆದ್ದಾರಿ ೭ರಲ್ಲಿ ಎಡ ತಿರುವು ತೆಗೆದುಕೊಂಡು, ಕರ್ಣಪ್ರಯಾಗ್ ಎಂದೆಲ್ಲ...
ಕೇದಾರನಾಥ – ಇಪ್ಪತ್ತೆಂಟು ವರ್ಷಗಳ ಮೇಲೆ

ಕೇದಾರನಾಥ – ಇಪ್ಪತ್ತೆಂಟು ವರ್ಷಗಳ ಮೇಲೆ

(ಪೂರ್ವಾರ್ಧ) ‘ಪುರಾಣ ಜಪ’ದಲ್ಲಿ ನನಗೆ ದೊಡ್ಡ ಕುಖ್ಯಾತಿ ಇದೆ. ಅಂತರ್ಜಾಲದಲ್ಲಿ ಯಾರೇನು ಕಥಿಸಿದರೂ ಕೆಲವೊಮ್ಮೆ ತಡವಾಗಿ ನನಗೇ ಮುಜುಗರವುಂಟಾಗುವಂತೆ “ನಾನೂ…..” ಬರೆಯುತ್ತಲೇ ಇರುತ್ತೇನೆ, ಪ್ರಕಟಿತ ಲೇಖನಗಳಿಗೆ ಸೇತು ತುರುಕುತ್ತಿರುತ್ತೇನೆ. ಇದರ ಪುಣ್ಯ ಫಲವಾಗಿ, ಇಪ್ಪತ್ತೆಂಟು ವರ್ಷಗಳ ಹಿಂದೆ ನಾನು,...
ಕಾಸರವಳ್ಳಿ ಮನೆ

ಕಾಸರವಳ್ಳಿ ಮನೆ

(ತೀರ್ಥಯಾತ್ರೆ ಭಾಗ-೪ ಮಂಗಳ) ಕಾಸರವಳ್ಳಿ ಮನೆ ಕಾಷ್ಠ ವೈಭವಕ್ಕೆ, ವಾಸ್ತು ಸುಸಂಬದ್ಧತೆಗೆ, ಶತಮಾನಕ್ಕು ಮಿಕ್ಕು ಹಳಗಾಲದ ರಚನೆಯೇ ಆದರೂ ಮುಂದುವರಿದ ವಾಸಯೋಗ್ಯತೆಗೆ ನಾನು ಬಹು ಮೂಲಗಳಿಂದ ತಿಳಿದಿದ್ದೆ, ಪತ್ರಿಕಾ ಲೇಖನಗಳಲ್ಲೂ ಓದಿದ್ದೆ. ಮಣಿಪಾಲದ ವಿಜಯನಾಥ ಶೆಣೈಯವರು ತನ್ನ ಹಸ್ತಶಿಲ್ಪ ಕಟ್ಟುತ್ತಿದ್ದ ಕಾಲಕ್ಕೆ ಕಾಸರವಳ್ಳಿ ಮನೆ...
ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!

ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!

(ತೀರ್ಥಯಾತ್ರೆ ಭಾಗ ಮೂರು) [ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು ನೆನಪಿನ ಹಂಡೆಯ ಕೊನೆಯ ಎರಡು ಚೊಂಬು ಮೊಗೆದು “ತೀರ್ಥಳ್ಳಿ ಗೋವಿಂದಾನೆ ಗೋವಿಂದಾ ಗೋsssssವಿಂದಾ” ಎಂದು ಕಥೆ ಮುಗಿಸುವುದರಲ್ಲಿದ್ದಾಗ ಗಣಕಕ್ಕೆ ಕಣ್ಣು ಕತ್ತಲಿಟ್ಟಿತು. ಯುಕ್ತ ಚಿಕಿತ್ಸೆ ಮುಗಿಯುವಾಗ...
ಅಪ್ಪಟ ಜವಳಿ, ಹೊಳೆಯುವ ರತ್ನ

ಅಪ್ಪಟ ಜವಳಿ, ಹೊಳೆಯುವ ರತ್ನ

ತೀರ್ಥಯಾತ್ರೆ (ಭಾಗ ಎರಡು) ಶಿಕಾರಿ’ ಅಭಯನ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎರಡು-ಮೂರನೇ ಚಿತ್ರ! (ಹೌದು, ಇದು ಏಕಕಾಲಕ್ಕೆ ಕನ್ನಡ ಮತ್ತು ಮಲಯಾಳಗಳ ಸ್ವತಂತ್ರ ಚಿತ್ರೀಕರಣ ನಡೆಯುತ್ತಿದೆ (ವಿವರಗಳಿಗೆ ಇಲ್ಲಿ ನಿಮ್ಮ ಇಲಿಯ ಬಾಲ ತಿರುಚಿರಿ! ಏನು ಯೋಚಿಸ್ತೀರಿ, ಚಿಟಿಕೆ ಹೊಡೀರಿ ಅರ್ಥಾತ್ ಇಲ್ಲಿ ನಿಮ್ಮ ಮೌಸ್ ಕ್ಲಿಕ್ ಮಾಡೀ!!)...
ದಾರಿ ತಪ್ಪಿದ ದಾರಿ

ದಾರಿ ತಪ್ಪಿದ ದಾರಿ

(ತೀರ್ಥ ಯಾತ್ರೆ ಭಾಗ ೧) ನಾನು ಗೆಳೆಯರೊಡನೆ ವನ್ಯ ರಕ್ಷಣೆ ಬಗ್ಗೆ ಭಯಂಗರ ಮಾತಾಡುತ್ತಾ ಚೂರುಪಾರು ಕೆಲಸ ಮಾಡುತ್ತಾ ಇದ್ದರೆ, ಮಗ – ಅಭಯ ತಣ್ಣಗೆ ಮಲೆನಾಡಿನಲ್ಲಿ (ತೀರ್ಥಳ್ಳಿ ಆಸುಪಾಸು) ಶಿಕಾರಿ ನಡೆಸಲು ಹೊರಟಿದ್ದ! ಅದೂ ನಮ್ಮ ಪೂರ್ಣ ಮಾನಸಿಕ ಸಹಮತದೊಡನೆ ಎಂದರೆ ಆಶ್ಚರ್ಯಚಿಹ್ನೆ!! ಇದಕ್ಕೆಲ್ಲಾ ನಾನು ಸ್ಪಷ್ಟೀಕರಣ ಕೊಡುವ...