by athreebook | Jul 5, 2017 | ಇತರ ಸಾಹಸಗಳು, ಮರ ಕೆತ್ತನೆ, ವೈಚಾರಿಕ
ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೧ ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ...
by athreebook | Jul 2, 2017 | ಒಡಿಶಾದ ಒಡಲೊಳಗೆ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೨) ನವೆಂಬರ ೨೨ ರ ಬೆಳಗ್ಗಿನಿಂದ ಆರಂಭವಾಗುವ ನಮ್ಮ ತಿರುಗಾಟ ಮಂಗಲಕರವಾಗಿರಲೆಂದು ಅದನ್ನು ಮಂಗಲಜೋಡಿಯಿಂದಲೇ ಆರಂಭಿಸಿದೆವು. ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಈ ಪಕ್ಷಿಧಾಮ ನಮ್ಮ ವೀಕ್ಷಣಾಸ್ಥಳಗಳ ಪಟ್ಟಿಗೆ ಸೇರ್ಪಡೆಯಾದದ್ದೇ ಒಂದು ಆಕಸ್ಮಿಕ. ಪ್ರವಾಸದಲ್ಲಿ...
by athreebook | Jun 25, 2017 | ಒಡಿಶಾದ ಒಡಲೊಳಗೆ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ – ಒಡಿಶಾದ ಒಡಲೊಳಗೆ (೧) ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ (ಡಿಡಿಭಾರತಿ) ನೃತ್ಯೋತ್ಸವವೊಂದರ ನೇರ ಪ್ರಸಾರವಾಗುತ್ತಿತ್ತು. ಲಗುಬಗೆಯಲ್ಲಿ ಮನೆ ಕೆಲಸಗಳನ್ನು ಅರ್ಧಂಬರ್ಧ ಮಾಡಿ ಬಂದು ಕೂತವಳಿಗೆ ಸುಂದರ ಕೆತ್ತನೆಗಳ ದೇಗುಲದ ಹಿನ್ನೆಲೆಯಲ್ಲಿ, ನೂರಾರು ಸಭಿಕರ...
by athreebook | Jun 20, 2017 | ಅಶೋಕವನ, ಕಪ್ಪೆ ಶಿಬಿರಗಳು, ಕುಮಾರ ಪರ್ವತ, ಬಿಸಿಲೆ, ವನ್ಯ ಸಂರಕ್ಷಣೆ
“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ….” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ...
by athreebook | Apr 30, 2017 | ಆತ್ಮಕಥಾನಕ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೩) [ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ. ಆಕೆಯನ್ನು ಖಾಯಂ ಎನ್ನುವಂತೆ ಮೈಸೂರಿನ ಮನೆ – ಅತ್ರಿಯಲ್ಲಿ, ತಮ್ಮ – ಅನಂತವರ್ಧನ ಮತ್ತು ಅವನ ಹೆಂಡತಿ – ರುಕ್ಮಿಣಿಮಾಲಾ, ಉತ್ತಮ ವೈದ್ಯಕೀಯ ನೆರವಿನೊಡನೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ....
by athreebook | Apr 5, 2017 | ಅಭಯಾರಣ್ಯ, ಆತ್ಮಕಥಾನಕ, ಇತರ ಸಾಹಸಗಳು, ಪ್ರವಾಸ ಕಥನ, ವೈಚಾರಿಕ
[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ] ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ...