ಋಷ್ಯಶೃಂಗನ ತಪೋಮಣೆ

ಋಷ್ಯಶೃಂಗನ ತಪೋಮಣೆ

(ತಪೋಮಣೆಯಿಂದ ಸರ್ವಜ್ಞನ ಪೀಠಕ್ಕೆ ಭಾಗ-೨ ಚಕ್ರವರ್ತಿಗಳು ಸುತ್ತು ೧೫) ಮಳೆಗಾಲದಲ್ಲಿ ಮೂರು ಹಗಲು, ಎರಡು ರಾತ್ರಿಗಳ ಸಾಹಸೀ ಪ್ರಾಕೃತಿಕ ಒಡನಾಟದ ಮೊದಲ ಭಾಗ ೬-೧೨-೨೦೧೩ರಂದು ಇಲ್ಲೇ ಪ್ರಕಟವಾಗಿದೆ ಗಮನಿಸಿ. ಹಾಗೇ ಚಕ್ರವರ್ತಿಗಳು ಪುಸ್ತಕದ ವಿ-ಧಾರಾವಾಹಿಯ ಹಿಂದಿನ ಎಲ್ಲ ೧೪ ಸುತ್ತುಗಳನ್ನೂ ಇಲ್ಲೇ ಆಯ್ದುಕೊಂಡು ನೋಡಲೂಬಹುದು....
ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

(ಸೈಕಲ್ ಅಭಿಯಾನ ೨೦೧೩) ಜಂಟಿ ಸೈಕಲ್ ಬಳಸುತ್ತ ನಾವು ವರ್ಷವೇನೋ ಕಳೆದೆವು. ಆದರೆ ಒಂಟಿಯಾಗಿ ನನಗೆ ಎರಡೆರಡು ಬಾರಿ ಸೈಕಲ್ ರ‍್ಯಾಲೀ ಅನುಭವ ಕೊಟ್ಟ ಆರೆಕ್ಸ್ ಲೈಫ್ ಬಳಗದ ವರ್ಷಾವಧಿ ಸೈಕಲ್ ರ‍್ಯಾಲೀಯಲ್ಲಿ ಭಾಗವಹಿಸಲಾಗದ ಬೇಸರವುಳಿದೇ ಇತ್ತು. ಅದು ಇಂದು (೨೦೧೩ ಡಿಸೆಂಬರ್ ೮) ತೀರಿತು. ಸುಮಾರು ಒಂದು ಸಾವಿರದ...
ಭಗವತಿ ಘಾಟಿ

ಭಗವತಿ ಘಾಟಿ

(ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೧) (ಚಕ್ರವರ್ತಿಗಳು ಸುತ್ತು ಹದಿನಾಲ್ಕು) [ವಾಗ್ರೂಪದಮಲಲ್ಲಿ ವಾಸ್ತವವನಾಮೂಲಾಗ್ರ ಮರೆತು ಕುಳಿತರೆ ಭಾರಿ ಆರಾಮು: ಕೈಕಾಲನಾಡಿಸುವ ಅಗತ್ಯ, ಬೆವರಿನ ಅಸಹ್ಯ ಇಲ್ಲ. ಕುಳಿತಲ್ಲೆ ಬೇಕಾದಷ್ಟು ಮಂಡಿಗೆಯನಾಕಂಠ ಮನಸಿನಲ್ಲೇ ತಿಂದು ತೇಗಬಹುದು -ಗೋಪಾಲಕೃಷ್ಣ ಅಡಿಗ ಭಾರತ ಹಳ್ಳಿಗಳ ನಾಡು ಎನ್ನುವುದು...
ಮಂತ್ರಸ್ನಾನ? ವನವಾಸ!

ಮಂತ್ರಸ್ನಾನ? ವನವಾಸ!

(ಕೊಡಚಾದ್ರಿಯ ಸುತ್ತ ಮುತ್ತ ನಾಲ್ಕನೆಯ ತುಣುಕು) (ಚಕ್ರವರ್ತಿಗಳು ಸುತ್ತು ಹದಿಮೂರು) [೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ – ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ...
ಅವರೋಹಣ ಪರ್ವ

ಅವರೋಹಣ ಪರ್ವ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು ಅಧ್ಯಾಯ ಐವತ್ತೇಳು ಹನ್ನೆರಡು ಗಂಟೆಗೆ ನಾವು ಕುದುರೆಮುಖದ ಕೊನೆಯೂಟ ಮುಗಿಸಿದೆವು. ಮಲಗು ಮಗುವೆ! ಮಲಗು ಕುದುರೆಮೊಗವೆ ಅಲುಗದಿರು ಅಗಲದಿರು ಇ- ನ್ನೊಮ್ಮೆ ಬರುವವರೆಗೆ ಎಂದು ಸಾಮೂಹಿಕ ಗಾನ ಹಾಡಿದೆವು. ಮತ್ತೆ ಅವರೋಹಣ, ಕಡಿಮೆ ಭಾರ. ನ್ಯೂಟನ್ನನ ಸಹಕಾರ,...
ಗುಂಡಿಗೆ ಬಿದ್ದರು ಶೇಷಯ್ಯ

ಗುಂಡಿಗೆ ಬಿದ್ದರು ಶೇಷಯ್ಯ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ನಾಲ್ಕು ಅಧ್ಯಾಯ ಐವತ್ನಾಲ್ಕು ಕಡಿದಾದ ಬೆಟ್ಟಗಳ ನಡುವೆ ಈ ಸೀದಾ ಮಾರ್ಗಗಮನ ಎನ್ನುವುದೊಂದು ಬಿಸಿಲ್ಗುದುರೆ. ಬೆಟ್ಟದ ಮೈಯಲ್ಲಿ ಬಳಸಿ ನಡೆದು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ತಗ್ಗಾಗಿರುವಲ್ಲಿ ದಾಟಬೇಕೇ ವಿನಾ ಶಿಖರದಿಂದ ಶಿಖರಕ್ಕೆ ಜಿಗಿಯುವುದಲ್ಲ. ಹೀಗೆ...