ಹಂಪಿ, ದುರ್ಗ, ಜಯ ಮಂಗಳಂ
ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ ಡಾರ್ಜಿಲಿಂಗ್, ಕಾನ್ಹಾಗಳಂತೆ ಕಾಶಿ, ಗಯಾಗಳನ್ನೂ ಪಟ್ಟಿ ಮಾಡಿ ನೋಡಿದ್ದೆ. ಅಲ್ಲಿ ದೇವ ಬಿಂಬದ ದರ್ಶನ, ಔಪಚಾರಿಕ ನಮನ, ತೀರ್ಥ ಪ್ರಸಾದಗಳಿಗೆ ನಾನು ಅಂಟಿಕೊಂಡದ್ದಿಲ್ಲ. ಉದಾಹರಣೆಗೆ, ತಿರುಮಲೆಯಲ್ಲಿ ಎರಡು ದಿನವಿದ್ದೂ ವೆಂಕಟ್ರಮಣನ ದರ್ಶನ ಮಾಡಲೇ ಇಲ್ಲ. ಆದರೆ ಎಲ್ಲೂ ಅವಾಗಿ ಒದಗಿದಾಗ ಭಾವ ತುಮುಲಗಳೇನೂ ಇಲ್ಲದೇ ತೀರ್ಥ, ಗಂಧ, ಹೂ, ತುಳಸಿ ಇತ್ಯಾದಿಗಳನ್ನು ವಸ್ತು ನಿಷ್ಠವಾಗಿ ಗ್ರಹಿಸುತ್ತ ಬಂದಿದ್ದೇನೆ. ತಿರುಪತಿಯ ಲಡ್ಡು, ಮಧೂರಿನ ಅಪ್ಪ, ಕಾಶ್ಮೀರದ ಖೀರು, ಅನ್ನಾವರಂನ ಸಪಾದಭಕ್ಷ್ಯ, ಕೃಷ್ಣಮಠದ ಮಡ್ಡಿ, ಶರವಿನ ಪಂಚಕಜ್ಜಾಯ, ಅನೇಕಾನೇಕ ದೇವಳಗಳ ಊಟ ಮುಂತಾದವನ್ನು ಮನಮೆಚ್ಚಿ ಸ್ವೀಕರಿಸಿದ್ದೇನೆ.
ಬಹುಭಾಷಾ ಭಾರತಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೯ ಮೈಸೂರು ಮಹಾರಾಜರ ಸೇವೆಯಲ್ಲಿ ರೇಂಜರ್...
ಚಾಮುಂಡಿ ಬೆಟ್ಟದಿಂದ ರಂಗನತಿಟ್ಟಿಗೆ
ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೩೮ ಏಳೆಂಟು ವರ್ಷದವಳಿದ್ದಾಗ ನೋಡಿದ...
ಕಬಿನಿಯಲ್ಲೊಂದು ಅಮೃತಮಥನ
ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು....
ಸಾಧನೆ, ಸಿದ್ಧಿಯ ದಾರಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೩೭ `ಗಾನ್ ವಿದ್ ದ ವಿಂಡ್'ನಂತೆಯೇ...
ಘಾಟಿ ಪಳಗಿಸಿದ ನೋಟ
(ಚಕ್ರವರ್ತಿಗಳು - ಎಂಟನೆಯ ಸುತ್ತು) ಶನಿವಾರ ಸಂಜೆ ಹಿಡಿದ ಮಳೆ ರಾತ್ರಿ ಪೂರಾ ಹೊಡೆದೇ ಹೊಡೆಯಿತು. ಬೆಳಿಗ್ಗೆ ಅಲಾರಾಂ...
ಮೂಕ ನಿರ್ಝರಿಣಿ – ಏಳು
[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ...
ಮಂಗಳೂರಿನ ಆದಿ ಉರಗೋದ್ಯಾನ!
ತಿಂಗಳೆ ಕಣಿವೆಯ ಜಲಪಾತಗಳು - ಭಾಗ ಒಂದು ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ...
ಪರಿಸರದರ್ಶನ – ಮೂರು
[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ...
ನಡೆದು ನೋಡೈ ನೀಂ ಶಿರಾಡಿ ಸೊಬಗಂ!
(ಚಕ್ರವರ್ತಿಗಳು - ಏಳನೆಯ ಸುತ್ತು) [ಕರಾವಳಿ ಪ್ರದೇಶವಾದ ಅವಿಭಜಿತ ದಕ ಮತ್ತು ಉಕ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿ...
ಭವಿಷ್ಯ ವಿಜ್ಞಾನ
ಲೇಖಕ: ಜಿ.ಟಿ. ನಾರಾಯಣ ರಾವ್ [ಮೊದಲ ಕಂತು] [೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ. ಮೊದಲ ಮುದ್ರಣ ೧೯೮೧. ಪುಟ ಸುಮಾರು...
ಶತಾವಧಾನ ನೂರ್ಮಡಿ ಬೆರಗು!
ಶತಾವಧಾನಿ ರಾ. ಗಣೇಶ ತುಂಬುಗನ್ನಡದ ಶತಾವಧಾನ ನಡೆಸುತ್ತಿದ್ದಾರೆ (ಬೆಂಗಳೂರು, ನವೆಂಬರ್ ೩೦ ಮತ್ತು ಡಿಸೆಂಬರ್ ೧, ೨,...
ಎಂದೂ ಮುಗಿಯದ ಕಥಾಸರಣಿ!
ಕೂಸಿಗಿಂತ ದೊಡ್ಡ ಕುಲಾವಿ ಅರ್ಥಾತ್ ಪೀಠಿಕೆ: ಅಭಯಸಿಂಹ (ಮಗ) ‘ಸಕ್ಕರೆ’ ಹಿಡಿದುಕೊಂಡು (ಅವನ ನಿರ್ದೇಶನದ ಹೊಸ ಚಿತ್ರ)...
ಪ್ರಜಾಸತ್ತೆಗೆ ಅವಮಾನ – ಪ್ರಶಸ್ತಿ, ಸಮ್ಮಾನ
(ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿತನ ಹಳವಂಡ) “ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭುಗಳು ನಮ್ಮ ನೆಲವನ್ನು...
ಕಾಗದ ಮಡಚೋಣ
ಓರಿಗೆಮಿ - ಕಾಗದ ಮಡಚಿ ಆಕೃತಿ ಮೂಡಿಸುವ ಕಲೆ, ಇಂದು ನಮ್ಮ ಬಾಲಲೋಕದಲ್ಲಿ ಪಠ್ಯದ ಭಾಗವೇ ಆಗಿರುವ ಕ್ರೀಡೆಗೆ ಜಪಾನೀ...
ರೈಲೋಡಿದ ಬೈಕು
(ಚಕ್ರವರ್ತಿಗಳು - ಆರನೆಯ ಸುತ್ತು) ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ...
ಜಲಜಾಗೃತಿಗೊಂದು ಬೀದಿ ನಾಟಕ
ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕೊಳಗೆ ಆ ಸಂಜೆ, ಹಿರಿಯರು ಹರಡಿ ಬಿದ್ದ ಬೆಂಚು ಬಿಸಿಮಾಡಿ, ಎಂದಿನ ಶುದ್ಧ ಹವಾ...
















I went through your (better say "our") travelogue with utmost enthusiasm as it brought to my mind vivid scenes and…