by athreebook | Mar 11, 2016 | ಆತ್ಮಕಥಾನಕ, ಸೈಕಲ್ ಸಾಹಸಗಳು
ಎ.ಪಿ. ತಿಮ್ಮಪ್ಪಯ್ಯ, ಅಂದರೆ ಪುತ್ತೂರಿನಾಚಿನ ಹಳ್ಳಿ ಮರಿಕೆಯಲ್ಲಿದ್ದ ನನ್ನ ದೊಡ್ಡ ಸೋದರಮಾವ, ನಾನು ಸಂಬೋಧಿಸುತ್ತಿದ್ದಂತೆ ಅಣ್ಣ, ಸುಮಾರು ಎರಡು ವರ್ಷದ ಹಿಂದೆ ತೀರಿಹೋದದ್ದರ ನೆನಪಿನ ದಿನವದು (೨೫-೨-೨೦೧೬). (ನೋಡಿ: ಅಸಮ ಸಾಹಸಿ, ಮರಿಕೆಯ ಅಣ್ಣ) ಆ ನೆಪದಲ್ಲಿ ಬಾಲ್ಯದ ನೆನಪುಗಳನ್ನು ಮತ್ತೆ ಹೆಕ್ಕುವ, ಆಪ್ತರೊಡನೆ ಒಡನಾಡುವ...
by athreebook | Feb 1, 2016 | ಇತರ ಸಾಹಸಗಳು, ಸೈಕಲ್ ಸಾಹಸಗಳು
ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ “ರೊಂಯ್ ರೊಂಯ್, ರೊಂಯ್!” ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ – ಸಮಾಧಾನದ ಸವಾರಿಯ ನಾಲ್ಕು ಸೈಕಲ್ಲುಗಳು, ಮೇಲೆ ಸವಾರರು. ಮಾರ್ಗದಂಚಿನ ಬಿಳಿಗೀಟು...
by athreebook | Dec 24, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
(ನೀಲಗಿರಿಗೆ ಸೈಕಲ್ ಸವಾರಿ – ಅಂತಿಮ ಭಾಗ) ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ...
by athreebook | Dec 17, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು ಆಕರ್ಷಿಸಿತು: “ಡಿಸೆಂಬರಿನ ಚಳಿಯ ಐದು ದಿನಗಳಲ್ಲಿ ಬಿಸಿಯೇರಿಸಲು, ಹೊಡೆಯಿರಿ ಸೈಕಲ್ ಉದಕಮಂಡಲಕ್ಕೆ!” ಪ್ರವಾಸಿಗಳ ಸ್ವರ್ಗ ಅರ್ಥಾತ್ ಒಂದಕ್ಕೆ ನಾಲ್ಕರ ಬೆಲೆಯ ಲೂಟಿಯ ಊಟಿಯಲ್ಲೂ ಭಾಗಿಗಳಿಗೆ ವಾಸ, ತಿನಿಸು,...
by athreebook | Sep 3, 2015 | ಚಕ್ರವರ್ತಿಗಳು, ಪ್ರವಾಸ ಕಥನ, ಸೈಕಲ್ ಸಾಹಸಗಳು
(ಚಕ್ರವರ್ತಿಗಳು – ೩೪) [೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ] ಮೈಸೂರಿನಲ್ಲಿ ನನ್ನ ಮಹಾರಾಜ ಕಾಲೇಜಿನ ದಿನಗಳು ತೊಡಗುವ ಕಾಲಕ್ಕೆ ಅಲ್ಲಿನ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ), ಪರ್ಯಾಯವಾಗಿ ಸಾಹಸಿಯಾಗಿ ಬಹುಖ್ಯಾತರಾದ ವಿ.ಗೋವಿಂದರಾಜ್ ಪರಿಚಯವೂ ಆಗಿತ್ತು. ನಮ್ಮ ಬಳಗ ವಾರಾಂತ್ಯದ...