by athreebook | Jul 20, 2015 | ಅಶೋಕವನ, ಕಪ್ಪೆ ಶಿಬಿರಗಳು, ಬಿಸಿಲೆ, ಸೈಕಲ್ ಸಾಹಸಗಳು
(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ) ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ “ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆ” ನನ್ನ ಸಮಾಧಾನ....
by athreebook | Apr 10, 2015 | ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
(ಸೈಕಲ್ ಮಹಾಯಾನದ ಎರಡನೇ ಮತ್ತು ಅಂತಿಮ ಭಾಗ) ಮಹಾಯಾನ ಹೊರಡುವ ಹಿಂದಿನ ದಿನ ನನ್ನ ಚರವಾಣಿ `ಇನ್ಫಿ ಸಂದೀಪ್’ ಎಂದು ರಿಂಗಣಿಸಿತ್ತು. ಸಂದೀಪ್ ಇನ್ಫೋಸಿಸ್ಸಿನ ಮಂಗಳೂರು ಶಾಖೆಯಲ್ಲಿದ್ದಾಗ ನನಗೆ ಪರಿಚಯಕ್ಕೆ ಸಿಕ್ಕಿದವರು. ಐಟಿ ಅಂದರೆ ಹಣ, `ಮಝಾ’ ಎಂಬೆಲ್ಲ ಭ್ರಾಂತರಿಂದ ಈ ವ್ಯಕ್ತಿ ಭಿನ್ನ. ನಮ್ಮೊಟ್ಟಿಗೆ ಚಾರಣಕ್ಕೆ ಬಂದರು, ಅವರದೇ...
by athreebook | Apr 3, 2015 | ಪರಿಸರ ಸಂರಕ್ಷಣೆ, ಬೆಂಗಳೂರು, ಸೈಕಲ್ ಸಾಹಸಗಳು
(ಭಾಗ ಒಂದು) ಗಡಿಯಾರದ ಪ್ರತಿ ಮೈಮುರಿತಕ್ಕೂ ಅಲಾರಾಂ ಈಗ ಹೊಡೆಯುತ್ತದೆ, ಗಂಟೆ ಎರಡೂವರೆಯಾಗುತ್ತದೆ, ಏಳಬೇಕು, ಹೊರಡಬೇಕು, ಮೂರೂವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಪ್ರಾದೇಶಿಕ ಕಚೇರಿ ಎದುರು ಸೇರಬೇಕು ಎಂಬ ತಹತಹದಲ್ಲಿ ಮೊನ್ನೆ ಶುಕ್ರವಾರ (೧೩-೩-೧೫) ರಾತ್ರಿಯಿಡೀ ನಿದ್ದೆಯಿಲ್ಲ. ಇದು ನನ್ನೊಬ್ಬನ ಭ್ರಮೆಯಲ್ಲ, ಹೆಚ್ಚು...
by athreebook | Mar 13, 2015 | ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
ಗೆಳೆಯ ಕಾವೂರು ಪ್ರಸನ್ನನಿಗಿರುವ (ಗೊತ್ತಲ್ಲಾ ಸರ್ವೋ ಕೀಲೆಣ್ಣೆಗಳ ಪ್ರಾದೇಶಿಕ ವಿತರಕ) ಕಲ್ಲೆಣ್ಣೆ ಕಂಪೆನಿಗಳ ಸಂಪರ್ಕ ಬಲದಲ್ಲಿ `ಮಂಗಳೂರು ಬೆಂಗಳೂರು ಸೈಕಲ್ ಓಟ’ಕ್ಕೆ ಕರೆ ಕೊಟ್ಟ. ಮಾರ್ಚ್ ೧೪ ಶನಿವಾರ ಬೆಳೀಈಈಗ್ಗೆ ಶಿರಾಡಿ ದಾರಿಯಲ್ಲಿ ಗುಂಡ್ಯ (೯೩ ಕಿಮೀ). ಅಲ್ಲಿಂದ ಸಕಲೇಶಪುರದವರೆಗೆ ಹೆದ್ದಾರಿ ಬಂದಾಗಿರುವ ಕಾರಣ...
by athreebook | Feb 27, 2015 | ಪರಿಸರ ಸಂರಕ್ಷಣೆ, ಮಂಗಳೂರು, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೬) ಜಂಟಿ ಸೈಕಲ್ ಇನ್ನಿಲ್ಲ… “ಆನಂದನಿಗೆ ಬೇರೆ ಕೆಲಸವಿಲ್ಲ” ಎಂದು ಅರೆ-ಕೋಪದೊಡನೇ ಉಡುಪಿಯ ಮಿಂಚಂಚೆಗೆ ಉತ್ತರಿಸಿದೆ. “ನಿಮ್ಮ ಸಹಪಾಠಿಯ ಗಂಡ, ಅಂದರೆ ನನ್ನ ತಮ್ಮ ಆನಂದನಿಗೆ, ನಮ್ಮ ಜಂಟಿ ಸೈಕಲ್ ಮಾರಾಟಕ್ಕಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ನಾವದನ್ನು ಕೊಂಡು ಈ ಚೌತಿಗೆ ಎರಡು...