ಅವಶ್ಯ ಹೊಳಪು ನೀಡಬೇಕಾದ ಕಚ್ಚಾ ವಜ್ರವೊಂದರ ಸಮೀಕ್ಷೆ

ಅವಶ್ಯ ಹೊಳಪು ನೀಡಬೇಕಾದ ಕಚ್ಚಾ ವಜ್ರವೊಂದರ ಸಮೀಕ್ಷೆ

ಕಲಂಕ್‍ದ ನೀರ್ ೧೯೭೦ರ ದಶಕದ ಮೊದಲ ಭಾಗದಲ್ಲೆಲ್ಲೋ ನನ್ನ ಮನೋಭಿತ್ತಿಗೆ ಹತ್ತಿದ ಚಿತ್ರಕ್ಕೆ ಒಪ್ಪಕೊಡುತ್ತಿದ್ದೇನೆ. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮುಗ್ಧಗಣ್ಣಿನ ಪ್ರೇಕ್ಷಕ ನಾನು. ಸರಸ್ವತೀಪುರಂ ಮಧ್ಯದ ತೆಂಗಿನ ತೋಪಿನ (ಸಮತೆಂತೋ) ಹವ್ಯಾಸಿ ಕಲಾವಿದರ ಬಳಗದ ಪ್ರಸ್ತುತಿ. ಭಾರತದ ಸ್ವಾತಂತ್ರ್ಯ ಹೋರಾಟದ...
ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ

ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ

ಮಲೆಗಳಲ್ಲಿ ಮದುಮಗಳು – ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು...
ಯಕ್ಷ ದಾಖಲೀಕರಣದ ಫಲಶ್ರುತಿ

ಯಕ್ಷ ದಾಖಲೀಕರಣದ ಫಲಶ್ರುತಿ

ಓ ಮೊನ್ನೆ ಕವಿ, ಕಲಾವಿದ ಕೆ.ವಿ ರಮಣ್ ಅನಿರೀಕ್ಷಿತವಾಗಿ ನನ್ನ ಅಂಗಡಿಗೆ ಬಂದು ನನ್ನ ಒಂದು ಮಿನಿಟಿನ ಬಿಡುವು ಕೇಳಿ ಹೇಳಿದ ಮಾತಿನ ಸಾರ, “ಯಕ್ಷಗಾನ ಎಂದರೆ ವೀರರಸ, ಅಬ್ಬರ (ಒರಟು), ಪುರುಷಕಲೆ ಎನ್ನುವ ಗ್ರಹಿಕೆ ನನ್ನಲ್ಲಿ ಬೇರೂರಿತ್ತು. ಇದನ್ನು ದೀವಟಿಗೆ ಬೆಳಕಿನ ಹಿಡಿಂಬಾ ವಿವಾಹ ಡಿವಿಡಿ ವೀಕ್ಷಣೆಯಲ್ಲಿ ನಾನು ಗುಣಾತ್ಮಕವಾಗಿ...