by athreebook | Mar 15, 2020 | ಗುಹಾ ಶೋಧನೆ, ಪ್ರವಾಸ ಕಥನ, ಮೇಘಾಲಯ
ಮೇಘಾಲಯದ ಗಿರಿಕೊಳ್ಳಗಳಲ್ಲಿ – ೩ ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ, ರೋದನದ ತೀವ್ರತೆಯಲ್ಲಿ ಏರಿಳಿತವಿರಬಹುದು. ಹಾಗೆಂದು ಭರಿಸಿ ಸಮಾಧಾನಿಸುವ ಸುವಿಸ್ತಾರ ಹಸಿರು ಕಣಿವೆಯ ಔದಾರ್ಯ, ಮನ ಮಿಡಿದು ಎಲ್ಲೆಲ್ಲಿಂದಲೂ ಕಾಣ ಬರುವವರ ಸಂದಣಿ ಎಂದೂ ಕಡಿಮೆಯಾದದ್ದಿಲ್ಲ. ಮೂರನೇ ದಿನದ...
by athreebook | Mar 13, 2020 | ಗುಹಾ ಶೋಧನೆ, ಪ್ರವಾಸ ಕಥನ, ಮೇಘಾಲಯ
ಮೇಘಾಲಯದ ಗಿರಿಕೊಳ್ಳಗಳಲ್ಲಿ – ೨ ಲೈಟ್ರಿಂಗ್ಲ್ಯು (Laitrynglew) ಶಿಬಿರತಾಣ – ಶಾಲಾವಠಾರವನ್ನು, ಕಳಚಿಕೊಳ್ಳುವಾಗ ಗಂಟೆ ಎಂಟೂವರೆ ಕಳೆದಿತ್ತು. ಅಂದು ಚಾರಣದಿನ. ಮೊದಲ ಸುಮಾರು ಕಾಲು ಗಂಟೆಯಷ್ಟೇ ನಾವು ಜನವಸತಿಯ ಹಿಂಚುಮುಂಚು ನಡೆದಿದ್ದೆವು. ಹಿಂದಿನ ದಿನ ಬಸ್ ಬಂದಿದ್ದ ಕಾಂಕ್-ಡಾಮರ್ ದಾರಿಯಲ್ಲಿ ನೇರ ಊರಿಗೇ...
by athreebook | Dec 27, 2019 | ಅಶೋಕವನ, ಪ್ರವಾಸ ಕಥನ, ಬಿಸಿಲೆ
ಮೋಹಕ ಪಯಣ ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ ಕೇಂದ್ರ. ಆದರೆ ನನಗಿದು (ತಮ್ಮ ಅನಂತವರ್ಧನ ಮತ್ತು ರುಕ್ಮಿಣಿಮಾಲಾ ದಂಪತಿಗಳ) ಮಗಳು – ಅಕ್ಷರಿ, ಅಳಿಯ – ಮಹೇಶ ಮತ್ತು ಪುಳ್ಳಿ ಆರುಷರ ಹೊಸ ಊರು. ಅವರ ಪ್ರೀತಿಗೆ ನನ್ನ ಹೊಸತೊಂದು ‘ಸಾಹಸ’ ಅಗತ್ಯವನ್ನು...
by athreebook | Oct 29, 2019 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ನೀನಾಸಂ, ಕಥನ ಮಾಲಿಕೆ ೧) ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್ ವಿಡಿಯೋ ದಾಖಲೀಕರಣಕ್ಕೊಳಪಡಿಸಿ, ಯೂ ಟ್ಯೂಬ್ ಮೂಲಕ ಉಚಿತವಾಗಿ ಲೋಕಾರ್ಪಣಗೊಳಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ದಾಖಲೆಗಳು ಸಾರ್ವಕಾಲಿಕವಾಗುಳಿಯುತ್ತವೆ ಎನ್ನುವ ಎಚ್ಚರದೊಡನೆ ಸಂಚಿ ದುಡಿದರೆ, ಆಯಾ...
by athreebook | Dec 20, 2018 | ಪ್ರವಾಸ ಕಥನ, ವನ್ಯ ಸಂರಕ್ಷಣೆ, ಸೈಕಲ್ ಸಾಹಸಗಳು
ಹೊಸ್ತಿಲಲ್ಲಿ ಮುಗ್ಗರಿಸಿದವ! ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ – ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ “ಸೈಕಲ್ಲೇರಿ ನಾನು ನೀವು ವನಕೆ...