ಫಲ್ಗುಣಿಯ ಮೇಲೊಂದು ಪಲುಕು…..

ಫಲ್ಗುಣಿಯ ಮೇಲೊಂದು ಪಲುಕು…..

ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ “ಅದರ ಬಳಕೆ ಮಾತ್ರ ಕಡಿಮೆ” ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ ‘ಆದಿತ್ಯವಾರ (೨೯-೪-೧೮) ಕೂಳೂರು –...
ತುಳುಕಿದ ಸಾಗರ ಮತ್ತು ಅಂಚಿನ ನರಹುಳು

ತುಳುಕಿದ ಸಾಗರ ಮತ್ತು ಅಂಚಿನ ನರಹುಳು

ಬೆಳಗ್ಗೆ ಪತ್ರಿಕೆ ನೋಡಿದ್ದೇ ಉಚ್ಚಿಲದತ್ತ ಸೈಕಲ್ಲೋಡಿಸಿದೆ (೨೩-೪-೧೮ ಸೈಕಲ್ ಸರ್ಕೀಟ್ ೪೦೧). ಭೂಕಂಪ, ಮಳೆ, ಚಂಡಮಾರುತಗಳ ಪ್ರಭಾವವಿಲ್ಲದೆಯೂ ಸಾಗರಬೋಗುಣಿ ಯಾಕೋ ತುಸು ಅಂಡು ಕುಸುಕಿತ್ತು. ಪರಿಣಾಮವಾಗಿ ಎರಡು ಆವರ್ತಗಳಲ್ಲಿ ತುಳುಕಿದ ಕಡಲು ಎಂದಿನಂತಲ್ಲದೆ ಈ ವಲಯದ ಮೀನುಗಾರಿಕಾ ದಾರಿಯವರೆಗೂ ನೆಲ ನೆಕ್ಕಿತ್ತು. ಆ ಅಗಾಧತೆಯ...
‘ಸಮುದ್ರ’ದ ತಡಿಯಲ್ಲಿ…. ನೊರೆತೆರೆಗಳಿಗಂಜಿದೊಡೆಂತಯ್ಯಾ

‘ಸಮುದ್ರ’ದ ತಡಿಯಲ್ಲಿ…. ನೊರೆತೆರೆಗಳಿಗಂಜಿದೊಡೆಂತಯ್ಯಾ

(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೪) ‘ಪಡ್ಡಾಯಿ’ (ಪಶ್ಚಿಮ) – ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು...
ಸೈಕಲ್ಲಿನಿಂದ ಸಕಲ ಸಂಚಾರಿವರೆಗೆ

ಸೈಕಲ್ಲಿನಿಂದ ಸಕಲ ಸಂಚಾರಿವರೆಗೆ

(ಚಕ್ರೇಶ್ವರ ಪರೀಕ್ಷಿತ ೨೩) ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ ಛಲ ಬಿಡದ ತ್ರಿವಿಕ್ರಮನಂತೆ ಸರ್ಕೀಟಿಗೆ ಸಜ್ಜುಗೊಂಡು ನಾನು ಸೈಕಲ್ ಕೊಟ್ಟಿಗೆಗೆ ಹೋದೆ. ಸೈಕಲ್ ಕತ್ತಲ ಮೂಲೆಯಲ್ಲಿ ಶೀರ್ಷಾಸನ ಮಾಡಿತ್ತು. ದೀಪ ಹಾಕಿ, ಕೀಲೆಣ್ಣೇ ಬಿಟ್ಟು ಸಮಾಧಾನಿಸಿದೆ. ಹೊರಗೆ ಆಕಾಶರಾಯ ಉತ್ತರಿಸಿದ “ಟ-ಠ-ಡ-ಢ-ಣ!” ಅರ್ಥವಾಗಲಿಲ್ವಾ –...
ಮೂರು ಮೂರುಕಣ್ಣರ ಭೇಟಿ, ಮೊ.ಸೈಕಲ್ ಸರ್ಕೀಟಿನಲ್ಲಿ!

ಮೂರು ಮೂರುಕಣ್ಣರ ಭೇಟಿ, ಮೊ.ಸೈಕಲ್ ಸರ್ಕೀಟಿನಲ್ಲಿ!

ಜಂಟಿ ಸೈಕಲ್ ಮಾರಿಹೋದ ಮೇಲೆ, ಒಂಟಿ ಸೈಕಲ್ಲೇರಿ ನಾ ಕಂಡ ಲೋಕದ ‘ಪ್ರಥಮಾನುಭವ ವರದಿ’ ದೇವಕಿಗೆ ಸಾಕಾಗುತ್ತಿರಲಿಲ್ಲ. ಅದನ್ನು ಸ್ವಲ್ಪ ತುಂಬಿಕೊಡುವಂತೆ ಕಳೆದ ವರ್ಷ (೭-೩-೨೦೧೭) ಇಂಥದ್ದೇ ಉರಿಬಿಸಿಲಿನಲ್ಲಿ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ನಾವಿಬ್ಬರು ಮನೆಯಲ್ಲೇ ತಿಂಡಿ ಮುಗಿಸಿ ಮೋಟಾರ್ ಸೈಕಲ್ ಏರಿದೆವು. ತೊಕ್ಕೋಟು, ಕಿನ್ಯ...