by athreebook | Nov 6, 2024 | ಪುಸ್ತಕೋದ್ಯಮ
(‘ಕರ್ನಾಟಕ’ ಸುವರ್ಣೋತ್ಸವಕ್ಕೆ ವಿಶೇಷ ಲೇಖನ) “ಮಾಡೋಕ್ ಬೇರೆ ಕೆಲಸವಿಲ್ಲಾ”, ಕನ್ನಡ ಪುಸ್ತಕ ಪ್ರಾಧಿಕಾರ ‘ವರ್ಷದ ಉತ್ತಮ ಪ್ರಕಾಶಕ’ ಪ್ರಶಸ್ತಿ ಪ್ರಸ್ತಾವನೆಯನ್ನು ಡೀವೀಕೇ ಮೂರ್ತಿ ನೋಡಿದಾಗ ಕೊಟ್ಟ ಪ್ರಥಮ ಉದ್ಗಾರ. (ಅವರು ಪ್ರಶಸ್ತಿ ಸ್ವೀಕರಿಸದೇ ಇನ್ನೂ ದೊಡ್ಡವರಾದರು) ನಾವು (ಪ್ರಜಾಪ್ರಭುಗಳು) ಸಾರ್ವಜನಿಕ...
by athreebook | Oct 5, 2023 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
( ಓದಿ: ಕಳೆದ ವರ್ಷದ ‘ಹಾಮಭ ಸ್ಮೃತಿದಿನ’ ) ಪುಸ್ತಕೋದ್ಯಮ ನಿಸ್ಸಂದೇಹವಾಗಿ ನನಗೆ ಬಹು ಪ್ರೀತಿಯ ವೃತ್ತಿ. ಅದು ನನಗೆ ಆದಾಯ ಮತ್ತು ಬಹಳ ಗೌರವಯುತ ಜೀವನವನ್ನು ಕೊಟ್ಟಿದೆ. ನಾನೂ ಅದನ್ನು ಅಷ್ಟೇ ಜವಾಬ್ದಾರಿಯಲ್ಲಿ ನಡೆಸಿದೆ, ಕೇವಲ ಹೊಟ್ಟೇಪಾಡು ಎಂದಲ್ಲ. ಹಾಗಾಗಿ ಮೂವತ್ತಾರು ವರ್ಷಗಳನಂತರ ಅದರ ಮೇಲಿನ ಪ್ರೀತಿ ಇಳಿಮುಖವಾದಾಗ, ನನ್ನ...
by athreebook | Sep 22, 2023 | ಅಭಯಾರಣ್ಯ, ಪರಿಸರ ಸಂರಕ್ಷಣೆ
ನಮ್ಮ ಮನೆಯ ಹಿತ್ತಿಲಿಗೇ ಇತ್ತು ಸುಬ್ಬಯ್ಯ ಹೆಗ್ಗಡೆ ಕಾಂಪೌಂಡ್ – ಸುಮಾರು ಒಂದೂ ಮುಕ್ಕಾಲೆಕ್ರೆ ವಿಸ್ತೀರ್ಣದ ವಠಾರ. ಹಳೆಗಾಲದ ವಸತಿ ರಚನೆಗಳು, ಕೆಲವು ಬಿಡಾರ ಮತ್ತು ಕೃಷಿಯ ಶಿಸ್ತೇನೂ ಇಲ್ಲದ ತೆಂಗು, ಹಲಸು, ಸಾಗುವಾನಿ, ಮುಳ್ಳುಪೊಂಗಾರೆ, ಅನಾಮಧೇಯ ಬಳ್ಳಿ ಪೊದರುಗಳ ಹಸಿರಿನದ್ದೇ ಸಾಮ್ರಾಜ್ಯ. ನಮ್ಮ ಒಲವಿಗೆ...
by athreebook | May 8, 2023 | ಪುಸ್ತಕ ಮಾರಾಟ ಹೋರಾಟ, ಲಘು ಬರಹಗಳು
ಅತ್ರಿ ಬುಕ್ ಸೆಂಟರಿಗೆ ೩೫ ವರ್ಷಗಳಾಗಿದ್ದಾಗ, ಅಂದರೆ ೨೦೧೧ರಲ್ಲಿ ನಾನು ನನ್ನ ಪ್ರಕಾಶನ ವಿಭಾಗವನ್ನು ಮುಚ್ಚಿದ್ದನ್ನು ಜಾಲತಾಣದಲ್ಲಿ ಸಕಾರಣ ಘೋಷಿಸಿಕೊಂಡಿದ್ದೆ. (ನೋಡಿ: ಅತ್ರಿ, ಪುಸ್ತಕ ಪ್ರಕಾಶನವನ್ನು ಮುಚ್ಚಿದೆ) ಆ ಕಾಲಕ್ಕೆ ನಾನು ಫೇಸ್ ಬುಕ್ಕಿನಲ್ಲಿ ಹೆಚ್ಚು ಸಕ್ರಿಯನಾಗಿರಲಿಲ್ಲ. ಆದರೂ ಅನಿರೀಕ್ಷಿತವಾಗಿ ನೇರ ಜಾಲತಾಣಕ್ಕೇ...
by athreebook | Apr 29, 2023 | ಪುಸ್ತಕ ವಿಮರ್ಶೆ
ಪ್ರವಾಸಿ, ತಾನು ಭೇಟಿಕೊಟ್ಟ ಸ್ಥಳ ಚರಿತ್ರೆಯೊಡನೆ ತನ್ನ ಭಾವ ಸಂಬಂಧವನ್ನು ಸೇರಿಸಿದರಷ್ಟೇ ಪ್ರವಾಸ ಕಥನ, ಎಂದು ನಂಬಿದವ ನಾನು. ಆದರೆ ಇಲ್ಲೊಂದು ಕಾದಂಬರಿ – ಬೆಳಗಿನೊಳಗು, ಲೇಖಕಿ ಎಚ್.ಎಸ್. ಅನುಪಮಾ (ಲಡಾಯಿ ಪ್ರಕಾಶನ, ಗದಗ. ಚರವಾಣಿ, ೯೪೮೦೨೮೬೮೪೪, ಬೆಲೆ ರೂ ೬೫೦) ನನಗಂತೂ ಪರಮಾದ್ಭುತ ಪ್ರವಾಸ ಕಥನವೇ ಆಗಿದೆ. ಸರಳವಾಗಿ...
by athreebook | Apr 13, 2023 | ನೀನಾಸಂ, ಪ್ರವಾಸ ಕಥನ
(ನೀನಾಸಂ ಕಲೆಗಳ ಸಂಗಡ ಮಾತುಕತೆ-೪) ತೊಟ್ಟ ಬಾಣವನ್ನು ಮರಳಿ ತೊಡೆ… ಶಿಬಿರ ಮುಗಿದ ಮೇಲೆ ‘ಅಲ್ಲಿರುವುದು ಸುಮ್ಮನೆ’ ಎಂದು ಬೆಳಿಗ್ಗೆ (೧೦/೧೧) ಏಳು ಗಂಟೆಗೇ ಬೈಕೇರಿದ್ದೆವು. ಹೊಸ ಅನುಭವದ ಹುಡುಕಾಟದಲ್ಲಿ ನನ್ನದೊಂದು ಸಣ್ಣ ನಿರ್ಧಾರ – ಒಮ್ಮೆ ಬಳಸಿದ ದಾರಿಯನ್ನು ವಿಶೇಷ ಕಾಲಾಂತರವಲ್ಲದೇ (ಮತ್ತು ...
by athreebook | Mar 2, 2023 | ಅಭಯಾರಣ್ಯ, ವನ್ಯ ಸಂರಕ್ಷಣೆ
ಪೀಠಿಕೆ: [ಈಚೆಗೆ ‘ಕುತ್ಲೂರು ಕಥನ’ ಪುಸ್ತಕದ ಲೋಕಾರ್ಪಣಕ್ಕೆ ನಾನು ಹೋಗಿದ್ದೆ. ಸಭೆ ತಡವಾಗಿ ಶುರುವಾಯ್ತು. ಹಾಗಾಗಿ ನನಗೆ ಸಭೆಯಲ್ಲಿ ಪ್ರಕಾಶಕಿ – ಅಕ್ಷತಾ ಹುಂಚದ ಕಟ್ಟೆ, ಲೇಖಕ – ನವೀನ್ ಸೂರಿಂಜೆ ಮತ್ತು ವಕೀಲ – ದಿನೇಶ್ ಉಳೇಪಾಡಿಯವರ ಮಾತುಗಳನ್ನಷ್ಟೇ ಕೇಳಲು ಸಾಧ್ಯವಾಯ್ತು. ಅನ್ಯ ಕಾರ್ಯ ಒತ್ತಡದಿಂದ...
by athreebook | Jan 30, 2023 | ಜಿ.ಟಿ. ನಾರಾಯಣ ರಾವ್
‘ಜಿಟಿಎನ್’ ಎಂದೇ ಕರ್ನಾಟಕದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾದ ಗುಡ್ಡೆ ಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ (ಗುತಿನಾ) ಹೆಸರಾಂತ ವಿಜ್ಞಾನ ಲೇಖಕರು. ಮಡಿಕೇರಿಯ ಜಿ.ಟಿ.ನಾರಾಯಣರಾವ್ ಅವರು 1926ರ ಜನವರಿ 30ರಂದು ಜನಿಸಿದರು. ತಂದೆ ಗುಡ್ಡೆಹಿತ್ಲು ತಿಮ್ಮಪ್ಪಯ್ಯನವರು. ತಾಯಿ ವೆಂಕಟಲಕ್ಷ್ಮಿ. ರಾಯರು ಮದ್ರಾಸು...
by athreebook | Jan 4, 2023 | ನೀನಾಸಂ, ರಂಗ ಸ್ಥಳ
(ನೀನಾಸಂ ಕಲೆಗಳ ಸಂಗಡ ಮಾತುಕತೆ – ೩) ಅಂಗಳದ ‘ಅಸಂಗತ ಸಂಗತಿ’ಗಳ ಕಲೆ ನೀನಾಸಂ ವಠಾರದಲ್ಲಿ ಹೀಗೇ ಕಣ್ಣೋಡಿಸಿದಾಗ ಉತ್ಸವ ಕಾಲವೆಂದು ನಾಟಕೀಯ ಸಂಭ್ರಮಗಳು ಕಾಣಿಸುವುದೇ ಇಲ್ಲ. ಆದರೆ ಪ್ರತಿ ಪರ್ವ ಕಾಲದಲ್ಲೂ ನವಿರಾದ ಸಣ್ಣ ಪುಟ್ಟ ಬದಲಾವಣೆಗಳಲ್ಲಿ ಸಂದೇಶವಂತೂ ಸ್ಪಷ್ಟವಿರುತ್ತದೆ. ಹಾಗೇ ಈ ಬಾರಿ, ಅಂಗಳದಲ್ಲಿ ಅಡಿಕೆ ಸೋಗೆ,...
by athreebook | Dec 24, 2022 | ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨) ವಾಸ, ಊಟ ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ ಕಟ್ಟಡದ ಕೋಣೆಯನ್ನು ಕೊಟ್ಟಿದ್ದರು. ವಠಾರದ ಹೆಚ್ಚಿನಕಟ್ಟಡಗಳಂತೆ ಇದೂ ಹಳತು. ಆದರೆ ಎರಡು ಮಂಚ, ಹಾಸಿ ಹೊದೆಯುವುದು, ಫ್ಯಾನ್, ಸ್ನಾನಕ್ಕೆ ಬಿಸಿನೀರು, ಸ್ವತಂತ್ರ ಶೌಚ ವ್ಯವಸ್ಥೆ, ‘ಆಹಾರ್ಯ’ದ ನೆರೆಮನೆ...