by athreebook | Jun 25, 2019 | ಬಿಸಿಲೆ, ಸೈಕಲ್ ಸಾಹಸಗಳು
‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್ ರಾಮರಾಜ ಮೊನ್ನೆ ಆದಿತ್ಯವಾರ ಸೈಕಲ್ಲಿನಲ್ಲಿ ಕೇವಲ ಬಿಸಿಲೆ ಘಾಟಿ ಏರುವ ಯೋಜನೆ ಸಂಘಟಿಸಿದ್ದರು. ಹಾಗೆ ಬೆಳೀಗ್ಗೆ ಮಂಗಳೂರಿನಿಂದ ನಾಲ್ಕು, ಉಡುಪಿಯಿಂದ ಒಂದು ಕಾರನ್ನೇರಿ ಹನ್ನೊಂದು ಸೈಕಲ್ ಮತ್ತು ಸವಾರರು...
by athreebook | Jun 13, 2019 | ವ್ಯಕ್ತಿಚಿತ್ರಗಳು
ಎ.ಪಿ. ಗೌರೀಶಂಕರ ಇನ್ನಿಲ್ಲ – ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ ಸೋದರ ಮಾವ ಎ.ಪಿ. ಗೌರೀಶಂಕರ (ಶ್ರೀಶೈಲ) ಹಾಗೂ ನನ್ನ (ಅಭಯಾದ್ರಿ) ಮನೆಗಳು ಸ್ವತಂತ್ರವೇ ಇದ್ದರೂ ರೂಢಿಯಲ್ಲಿ ಒಂದೇ ವಠಾರ ಎಂಬಂತೇ ಇವೆ. ಎರಡೂ ಮನೆಗೆ ನಂದಿನಿ ಹಾಲು ತಂದು ಕೊಡುವ ಜವಾಬ್ದಾರಿ ನನ್ನದು....
by athreebook | May 20, 2019 | ವ್ಯಕ್ತಿಚಿತ್ರಗಳು
ಎ.ಪಿ. ರಮಾನಾಥ ರಾವ್ – ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ (೧೬-೫-೧೯) ತನ್ನ ೮೨ರ ಹರಯದಲ್ಲಿ, ತೀರಿಹೋದರು. ಬಳಕೆಯ ಸರಳತೆಯಲ್ಲಿ – ‘ರಾಮನಾಥ’, ವಿದ್ಯಾ ದಿನಗಳಲ್ಲಿ ಬಯಸಿ, ಮದ್ರಾಸಿನ (ಇಂದಿನ ಚೆನ್ನೈ) ಪಶುವೈದ್ಯಕೀಯ ಕಾಲೇಜು ಸೇರಿದ್ದ. ಆದರೆ...
by athreebook | May 15, 2019 | ಕಯಾಕ್, ಜಲಮುಖೀ ಹುಡುಕಾಟಗಳು, ದೋಣಿಯಾನ, ಪರಿಸರ ಸಂರಕ್ಷಣೆ
ಅದೊಂದು ಶುಕ್ರವಾರ “ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್” ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ “ಶೆರಿ, ಶಿರಿಯಾಕ್ಕೆ ಶಲೋ…” ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ...
by athreebook | Apr 30, 2019 | ಎತ್ತಿನ ಹೊಳೆ ಯೋಜನೆ, ಪರಿಸರ ಸಂರಕ್ಷಣೆ, ರಂಗ ಸ್ಥಳ, ವನ್ಯ ಸಂರಕ್ಷಣೆ
‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ...
by athreebook | Mar 24, 2019 | ಸೈಕಲ್ ದಿನಚರಿ, ಸೈಕಲ್ ಸಾಹಸಗಳು
(ಸೈಕಲ್ ಸರ್ಕೀಟ್ – ೪೬೩) ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು (೨೪-೩-೨೦೧೯) ನನ್ನ ಸೈಕಲ್ ಸವಾರಿ ಒಂಟಿಯಲ್ಲ, ಮಂಗಳೂರು ಬೈಸಿಕಲಿಗರ ಸಂಘಕ್ಕೆ ಜಂಟಿ. ತಂಡದ ಲಕ್ಷ್ಯ – ಬಂಟ್ವಾಳದಾಚಿನ ನರಹರಿಪರ್ವತ. ದಿನದ ಬೆಳಕು ಹರಿಯುವ ಮುನ್ನ, ಮೊದಲ ಪಾದದಲ್ಲೇ ಕಂಬಳದ...
by athreebook | Feb 4, 2019 | ಪರಿಸರ ಸಂರಕ್ಷಣೆ, ವನ್ಯ ಸಂರಕ್ಷಣೆ, ವೈಚಾರಿಕ, ಸೈಕಲ್ ದಿನಚರಿ
[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಆಕಾಶವಾಣಿ ಮಂಗಳೂರು ಜಂಟಿಯಾಗಿ ಆಯೋಜಿಸಿ ಸಂತ ಏಗ್ನೆಸ್ ಕಾಲೇಜಿನಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ, ನಾನು ಮಂಡಿಸಿದ ಆಶಯ ಭಾಷಣ.] ಮಿತ್ರರೇ, ನಾನು ಔಪಚಾರಿಕ ಭಾಷಣಕಾರನಲ್ಲ....
by athreebook | Dec 30, 2018 | ಪ್ರವಾಸ ಕಥನ, ವನ್ಯ ಸಂರಕ್ಷಣೆ, ಸೈಕಲ್ ಸಾಹಸಗಳು
(ಸೈಕಲ್ಲೇರಿ ವನಕೆ ಪೋಗುವಾ – ೨) ಜೈಸಮಂಡ್, ಹವಾಮಹಲ್ ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ ಢಮ್ಮ ಢಕ್ಕದ ಗದ್ದಲ, ತಿಲಕ, ಹಾರಗಳ ಸ್ವಾಗತ ಸಜ್ಜುಗೊಳಿಸಿತ್ತು. ಭಾಗ್ದೋರಾದಲ್ಲಿ ತೊಡಗಿದ್ದ ಈ ನಾಟಕ, ಅಲ್ಲಲ್ಲಿ ಮರುಕಳಿಸಲಿದೆ ಎಂಬ ಸೂಚನೆ ನನಗೆ ಹಿಡಿಸಲಿಲ್ಲ, ನಾನು (ಇನ್ನೂ ಕೆಲವರು)...
by athreebook | Dec 20, 2018 | ಪ್ರವಾಸ ಕಥನ, ವನ್ಯ ಸಂರಕ್ಷಣೆ, ಸೈಕಲ್ ಸಾಹಸಗಳು
ಹೊಸ್ತಿಲಲ್ಲಿ ಮುಗ್ಗರಿಸಿದವ! ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ – ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ “ಸೈಕಲ್ಲೇರಿ ನಾನು ನೀವು ವನಕೆ...
by athreebook | Nov 26, 2018 | ಜಲಪಾತಗಳು, ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ಬಲ್ಲಾಳರಾಯನ ದುರ್ಗ
(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೨) ದುರ್ಗಕ್ಕೆ ನಾವು ಹತ್ತಿದ ಸಾಹಸವನ್ನು ರೋಮಾಂಚಕ ಕಥನ ಮಾಡಿ, ಅದೇ ಡಿಸೆಂಬರಿನಲ್ಲಿ ನಡೆದ ಪರ್ವತಾರೋಹಣ ಸಪ್ತಾಹದಲ್ಲಿ ಗೆಳೆಯ ಸಮೀರರಾವ್ ಪ್ರಸರಿಸಿದ್ದಾಯ್ತು. ನನಗೆ ಮಾತ್ರ ಬಂಡಾಜೆ ಅಬ್ಬಿ ನೋಡಲಿಲ್ಲ ಎನ್ನುವ ಕೊರಗು ಕಾಡುತ್ತಲೇ ಇತ್ತು. ಮುಂದೊಂದು ದಿನ ಅದಕ್ಕೂ ದಾರಿಯನ್ನು ಹೇಳಿದವರು...