by athreebook | Oct 30, 2011 | ಇತರ ಸಾಹಸಗಳು, ಹ್ಯಾಂಗ್ ಗ್ಲೈಡಿಂಗ್
(ಕರಾವಳಿಗೆ ಹೊಸ ಸಾಹಸ ಕ್ರೀಡೆ – ಭಾಗ ಒಂದು) ೧೯೮೦ರ ದಶಕದ ಮೊದಲ ಭಾಗದಲ್ಲಿ ಸ್ಕೈ ರೈಡರ್ಸ್ ಎಂಬ ಇಂಗ್ಲಿಷ್ ಸಿನಿಮಾ ನೋಡಿದಾಗ ಒಮ್ಮೆಲೇ ನನಗೆ ಬಗಲಲ್ಲಿ ರೆಕ್ಕೆ ಮೊಳೆಯುವ ನೋವು ಶುರುವಾಗಿತ್ತು. ಗಡಿಬಿಡಿಯಾಗಬೇಡಿ, ಅದು ಹ್ಯಾಂಗ್ ಗ್ಲೈಡಿಂಗ್ ಅಥವಾ ನೇತು ತೇಲಾಟದ ಹುಚ್ಚು. ಯಾವುದೇ ಕೋಡುಗಲ್ಲ ನೆತ್ತಿ, ಶಿಖರಾಗ್ರಕ್ಕೆ...
by athreebook | Oct 11, 2011 | ಯಕ್ಷಗಾನ
ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು ವಿಚಾರಿಸಿದೆ, “ಕಾರಂತ ಪ್ರಯೋಗದ ಸಮರ್ಥ ಪ್ರದರ್ಶನ ಅಥವಾ ಪ್ರಾತ್ಯಕ್ಷಿಕೆಯನ್ನು ಕೊಡಬಹುದಾದ ಏಕೈಕ ತಂಡ ಉಡುಪಿಯ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ....
by athreebook | Oct 1, 2011 | ಪ್ರವಾಸ ಕಥನ, ಲಘು ಬರಹಗಳು
ಪ್ರಿಯ ನಾರಾಯಣಾ, ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ತಾಳಿ, ಸೀರೆ, ಪಂಚೆ ಕೊಟ್ಟು ಉಚಿತ ವಿವಾಹಯೋಗ ಕಲ್ಪಿಸುವುದು ಯಾರಿಗೆ ಗೊತ್ತಿಲ್ಲ. ಮತ್ತೆ ಯಾವುದೇ ನೋಂದಣಿ ಇಲಾಖೆಯಲ್ಲಿ ಧರ್ಮನಿರಪೇಕ್ಷವಾಗಿ, ಕಾನೂನು ಪ್ರಕಾರ ದಾಂಪತ್ಯ ಸಂಬಂಧ ಕುದುರಿಸುವುದು ನಮಗೆ ತಿಳಿಯದ್ದೂ ಅಲ್ಲ, ತಿರಸ್ಕಾರವೂ ಇಲ್ಲ. (ಇಂಥವೇ ಆಶಯಗಳ ಒಂದು ಪರಿಷ್ಕೃತ ರೂಪ...
by athreebook | Sep 24, 2011 | ಪ್ರವಾಸ ಕಥನ, ಲಘು ಬರಹಗಳು
ಪ್ರಿಯ ನಾರಾಯಣ (-ರಾವ್, ನನ್ನ ಓರ್ವ ಚಿಕ್ಕಪ್ಪ) `ರಾಮುಗೆ (ನಾರಾಯಣನ ಹಿರಿಯ ಮಗ – ರಾಮಚಂದ್ರ ರಾವ್ ದ ಸೆಕೆಂಡ್!) ಹುಡುಗಿ ನಿಶ್ಚಯವಾಯ್ತಂತೆ, ಸದ್ಯದಲ್ಲೇ ಬದ್ಧವಂತೆ, ಅಜ್ಜಿಯ ವರ್ಷಾಂತಿಕವಾಗದೇ ಮದುವೆ ಇಲ್ಲ್ವಂತೆ…’ ಹೀಗೇ ಯೋಚನೆಗಳು ರೂಪುಗೊಳ್ಳುವ ಹಂತದಲ್ಲೇ (ಸೂಕ್ಷ್ಮ ಸಂದೇಶ, ಚರವಾಣಿ, ಮುಖವಾಣಿಗಳ...
by athreebook | Aug 30, 2011 | ಪುಸ್ತಕೋದ್ಯಮ
ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ ಯಥಾಪ್ರತಿ: ಯಾವುದೇ ಪುಸ್ತಕದ ಚರಮಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು...
by athreebook | Aug 13, 2011 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ವೈಚಾರಿಕ, ವ್ಯಕ್ತಿಚಿತ್ರಗಳು
ಜಿಟಿಎನ್ ಅವರ ಬಗ್ಗೆ ನಾನೀಗ ಏಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಅವರ ಬಗ್ಗೆ ಇತರರೊಡನೆ ಮಾತನಾಡುವಾಗ, ಅವರ ಕೃತಿಗಳನ್ನು ಓದುವಾಗ, ನಾನು ಅವರೊಡನೆ ಕಳೆದ ಅನೇಕ ಸ್ವಾರಸ್ಯಪೂರ್ಣ ಸಂದರ್ಭಗಳು ನೆನಪಿಗೆ ನುಗ್ಗಿ ಬರುತ್ತವೆ; ಅವುಗಳಿಂದ ಬಿಡುಗಡೆ ಪಡೆಯಲು ಅವನ್ನು ಮೂರ್ತ ಲಿಖಿತ ರೂಪಕ್ಕೆ ತರುವುದೇ ಮಾರ್ಗ ಎಂದೆಣಿಸಿ, ಈ...
by athreebook | Aug 9, 2011 | ವೈಚಾರಿಕ, ವ್ಯಕ್ತಿಚಿತ್ರಗಳು
ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ – ಶೋಧವನ್ನು ನಾನು ಮಾರಿದವನೇ ಆದರೂ ಕನ್ನಡದ ವಿಮರ್ಶಕರಲ್ಲಿ ಇವರು ಗಣ್ಯರೆಂದು ತಿಳಿದವನೇ ಆದರೂ ಅವರು ಮಂಗಳೂರು ವಿವಿನಿಲಯಕ್ಕೆ (ಸ್ನಾತಕೋತ್ತರ ಕೇಂದ್ರದ) ಇಂಗ್ಲಿಶ್ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ...
by athreebook | Jul 31, 2011 | ಲಘು ಬರಹಗಳು
[ತೆರೆ ಸರಿಯುತ್ತಿರುವಂತೆ ಖಾಲೀ ಮುಖ ಹೊತ್ತ ತರುಣನೊಬ್ಬ ಪುಸ್ತಕ ವ್ಯಾಪಾರಿಯೊಬ್ಬನ ಗಲ್ಲಾದ ಎದುರು ಬಂದು ನಿಲ್ಲುತ್ತಾನೆ. ವ್ಯಾಪಾರಿ ‘ಏನ್ ಕೊಡ್ಲೀ’ ಎನ್ನುವಂತೆ ಹುಬ್ಬು ಹಾರಿಸುತ್ತಾನೆ. ತರುಣ ಏನೋ ಹುಡುಕುವವನಂತೆ ಆ ಈ ಕಿಸೆ ತಡಕಾಡುತ್ತಾ] ತರುಣ: ಅತ್ರಿ ಬುಕ್ ಹೌಸ್! ವ್ಯಾಪಾರಿ: ಹೂಂ, ಹೌಸ್ ಅಲ್ಲ ಸೆಂಟರ್. ಬಂದಾಯಿತಲ್ಲ,...
by athreebook | Jul 24, 2011 | ಆತ್ಮಕಥಾನಕ, ವೈಚಾರಿಕ
[ರಕ್ತ ಸಂಬಂಧ ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ಜೀನುಗಳ ಬಂಧ ಹೇಳುವ ಸತ್ಯ ಏನೇ ಇದ್ದರೂ ಸಾಮಾಜಿಕ ಮನ್ನಣೆ ಇರುವುದು ನಾವು ವಿಭಿನ್ನ ಕಾರಣಗಳಿಗಾಗಿ ಬೆಳೆಸಿಕೊಂಡ ಕೆಲವು ಶಾಸನಾತ್ಮಕ (ತಂದೆ, ತಾಯಿ, ಮಗ ಇತ್ಯಾದಿ) ಮತ್ತು ವಿಸ್ತೃತವಾಗಿ ಭಾವನಾತ್ಮಕ (ಕುಟುಂಬ, ಜಾತಿ, ಧರ್ಮ ಇತ್ಯಾದಿ) ಸಂಬಂಧಗಳಿಗೆ ಮಾತ್ರ. ಇವುಗಳ ಮೂಲ ರಕ್ತ...
by athreebook | Jul 12, 2011 | ಅಭಯಾರಣ್ಯ, ವನ್ಯ ಸಂರಕ್ಷಣೆ, ವೈಚಾರಿಕ
ಮೂರನೇ ಬೆಳಿಗ್ಗೆಯ ಉದಯರಾಗ – ಜಲಸಂರಕ್ಷಣೆ ಮತ್ತು ಮರುಪೂರಣದ ಪ್ರಾತ್ಯಕ್ಷಿಕೆ. ಇದಕ್ಕೆ ನಾಯಕತ್ವ ಎಡೆಂಬಳೆಯ ಸತ್ಯನಾರಾಯಣನದ್ದೇ. ಎಡೆಂಬಳೆ ಕೃಷಿಕ್ಷೇತ್ರ ವ್ಯಾಪ್ತಿಯಲ್ಲಿ ಐವತ್ತು ಎಕ್ರೆಗೂ ಮಿಕ್ಕ ನೆಲವಾದರೂ ಅಂದು ಸ್ಪಷ್ಟ ಕೃಷಿಗೆ ಒಡ್ಡಿಕೊಂಡ ಜಾಗ ಎರಡು ಮೂರೆಕ್ರೆ ಮಾತ್ರ. ಉಳಿದವು ಮುರಕಲ್ಲಿನ ಹಾಸು, ಮುಳಿಗುಡ್ಡೆ...