by athreebook | Dec 30, 2010 | ಕುಮಾರ ಪರ್ವತ, ಪರ್ವತಾರೋಹಣ
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೩) ಅವಿಭಜಿತ ದಕ ಜಿಲ್ಲೆಯ ಪಾದ ತೊಳೆಯಲು ಅರಬೀ ಸಮುದ್ರವಿದ್ದರೆ ನೆತ್ತಿಯ ಹಸುರಿನ ದಂಡೆ ಪಶ್ಚಿಮಘಟ್ಟ. ಸಹಜವಾಗಿ ಘಟ್ಟದ ಮೇಲಿನ ಕೆಲವು ಜಿಲ್ಲೆಗಳೊಡನೆ ಇವು ಕೆಲವು ಗಿರಿಶಿಖರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಕೊಡಚಾದ್ರಿ ಉಡುಪಿಯದ್ದೆಷ್ಟೋ ಶಿವಮೊಗ್ಗದ್ದೂ ಅಷ್ಟೇ. ವಾಲಿಕುಂಜ, ಕುದುರೆಮುಖ,...
by athreebook | Dec 25, 2010 | ಅನ್ಯರ ಬರಹಗಳು, ವೈಚಾರಿಕ
[ಉಂಡಬತ್ತಿ ಕೆರೆಯ ಸಾಮೂಹಿಕ ಕೊಲೆಯ ಬೊಜ್ಜದೂಟ ಮುಗಿಸಿದ ಮುಖ್ಯ ಮಂತ್ರಿಗಳ ಬಡಬಡಿಕೆಯ ಮುನ್ನೆಲೆಯಲ್ಲಿ ವರ್ಷದ ಹಿಂದೆ ಇಂಥದ್ದೇ ಇನ್ನೊಂದು ಸರಕಾರೀ ಪ್ರಾಯೋಜಿತ ದುರಂತದ ‘ಅಭಿವೃದ್ಧಿ ಕಲಾಪ’ದತ್ತ ಸ್ವಲ್ಪ ಕಣ್ಣು ಹಾಯಿಸುವ ಅವಕಾಶ ನನಗೊದಗಿತು. ಅದನ್ನು ಸಖೇದ ಸಾರ್ವಜನಿಕಗೊಳಿಸುತ್ತಿದ್ದೇನೆ.] ಆಂಧ್ರಪ್ರದೇಶದ ಕರ್ನೂಲಿನ ಮಾಜೀ...
by athreebook | Dec 23, 2010 | ಪ್ರವಾಸ ಕಥನ, ಸೈಕಲ್ ಸಾಹಸಗಳು
[ಎರಡು ವಾರದ ಹಿಂದೆ ಏರಿಸಿದ ಲೇಖನಕ್ಕೆ ‘ಏನ್ ಸೈಕಲ್ ಸಾ ಏನ್ ಸೈಕಲ್ಲ್’ಗೆ ಪೂರಕ ಬರಹ] ಬಳ್ಳಾರಿಯಲ್ಲಿ ನಾನು ಆರನೇ ತರಗತಿಯಲ್ಲಿದ್ದಾಗಿನ (೧೯೬೨-೬೩) ಕಥೆ. ಅಲ್ಲಿ ಪೂರ್ಣಾವಧಿ ಎನ್.ಸಿಸಿ ಅಧಿಕಾರಿಯಾಗಿದ್ದ ತಂದೆಗೆ ಸಂಜೆಯ ಕಾಫಿ ಒಯ್ಯಲು ದೂತ ಮೊಯ್ನುದ್ದೀನ್ ಸೈಕಲ್ ಏರಿ ಮನೆಗೆ ಬರುತ್ತಿದ್ದ. ತಾಯಿ ಬಿಸಿ ಕಾಫಿ ಫ್ಲಾಸ್ಕಿಗೆ...
by athreebook | Dec 16, 2010 | ಕುಮಾರ ಪರ್ವತ, ಪರ್ವತಾರೋಹಣ
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೨) [ಮಡೆಸ್ನಾನ, ಉರುಳುಸೇವೆ ಸುದ್ದಿಗಳ ಕೊಂಡಿ ಬಳಸಿ ಸೈಕಲ್ ಅಭಿಯಾನದ ಕಥನಕ್ಕೆ ನುಗ್ಗಿದವ ನಿಜದ ಸುಬ್ರಹ್ಮಣ್ಯ, ಕುಮಾರಪರ್ವತದಿಂದ ಹಳಿತಪ್ಪಿದನೇ ಎಂದು ಭಾವಿಸಬೇಡಿ. ಮಡಿಕೇರಿ-ಸುಬ್ರಹ್ಮಣ್ಯದ ಗಾಳಿಬೀಡು, ಕಡಮಕಲ್ಲಿನ ಮೂಲಕದ ಒಳದಾರಿಯಲ್ಲಿ ಬೇಸ್ತುಬಿದ್ದು ಅಂತೂ ಸುಬ್ರಹ್ಮಣ್ಯ ತಲಪಿದ…]...
by athreebook | Dec 10, 2010 | ಮಂಗಳೂರು, ಸೈಕಲ್ ಸಾಹಸಗಳು
[ಕುಮಾರಧಾರಾವಾಹಿಯ ಎರಡನೇ ಮುಳುಗಿಗೆ ಮೊದಲು ಇಲ್ಲೊಂದು ಹೊರಳು ಸೇವೆಯ (ಮಡೆಸ್ನಾನ?) ವರ್ತಮಾನ ತುರ್ತಾಗಿ ಒದಗಿದೆ. ಇದುಮುಗಿಸಿ ಅಲ್ಲಿಗೆ ಹೋದರಾಗದೇ?] ಉಯ್ಯಾಲೆಯಾಡಿಸುವ ಮಣ್ಣ ಜಾಡುಗಳಲ್ಲಿ, ಹೊಂಡ ಬಿದ್ದ ದಾರಿಗಳಲ್ಲಿ, ಅಂಚುಗಟ್ಟೆಗಳು ಮೊಳೆಯದ ಕಾಂಕ್ರೀಟ್ ಹಾಸುಗಳಲ್ಲಿ ಹರಿದು ಬಂದವೋ ಬಂದವು. ಝಗಮಗಾಯಿಸುವ ದೀಪಗಳ ಬೆಳಕಿನಲ್ಲಿ,...
by athreebook | Nov 29, 2010 | ಕುಮಾರ ಪರ್ವತ, ಪರ್ವತಾರೋಹಣ
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೧) ೧೯೭೪ರ ಅಪರಾರ್ಧದಲ್ಲಿ ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ಶುರು ಮಾಡುವುದೆಂದು ಸಂಕಲ್ಪಿಸಿ, ಪುತ್ತೂರಿನಿಂದಮಾ ಉಡುಪಿವರೆಗಿರ್ದ (ನನ್ನ ಮಿತಿಯ) ದಕ್ಷಿಣ ಕನ್ನಡ ನಾಡಿನಲ್ಲಿ ಓಡಾಡಿಕೊಂಡಿದ್ದೆ. ಅದೊಂದು ಶನಿವಾರ ಮೈಸೂರಿನಿಂದ ಹೀಗೇ ಪುತ್ತೂರಿಗೆ ಬಂದ ನನ್ನ ಪರ್ವತಾರೋಹಿ ಗೆಳೆಯ...
by athreebook | Nov 22, 2010 | ತೀರ್ಥ ಯಾತ್ರೆ, ಪ್ರವಾಸ ಕಥನ
(ತೀರ್ಥಯಾತ್ರೆ ಭಾಗ-೪ ಮಂಗಳ) ಕಾಸರವಳ್ಳಿ ಮನೆ ಕಾಷ್ಠ ವೈಭವಕ್ಕೆ, ವಾಸ್ತು ಸುಸಂಬದ್ಧತೆಗೆ, ಶತಮಾನಕ್ಕು ಮಿಕ್ಕು ಹಳಗಾಲದ ರಚನೆಯೇ ಆದರೂ ಮುಂದುವರಿದ ವಾಸಯೋಗ್ಯತೆಗೆ ನಾನು ಬಹು ಮೂಲಗಳಿಂದ ತಿಳಿದಿದ್ದೆ, ಪತ್ರಿಕಾ ಲೇಖನಗಳಲ್ಲೂ ಓದಿದ್ದೆ. ಮಣಿಪಾಲದ ವಿಜಯನಾಥ ಶೆಣೈಯವರು ತನ್ನ ಹಸ್ತಶಿಲ್ಪ ಕಟ್ಟುತ್ತಿದ್ದ ಕಾಲಕ್ಕೆ ಕಾಸರವಳ್ಳಿ ಮನೆ...
by athreebook | Nov 15, 2010 | ತೀರ್ಥ ಯಾತ್ರೆ, ಪ್ರವಾಸ ಕಥನ, ವೈಚಾರಿಕ, ವ್ಯಕ್ತಿಚಿತ್ರಗಳು
(ತೀರ್ಥಯಾತ್ರೆ ಭಾಗ ಮೂರು) [ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು ನೆನಪಿನ ಹಂಡೆಯ ಕೊನೆಯ ಎರಡು ಚೊಂಬು ಮೊಗೆದು “ತೀರ್ಥಳ್ಳಿ ಗೋವಿಂದಾನೆ ಗೋವಿಂದಾ ಗೋsssssವಿಂದಾ” ಎಂದು ಕಥೆ ಮುಗಿಸುವುದರಲ್ಲಿದ್ದಾಗ ಗಣಕಕ್ಕೆ ಕಣ್ಣು ಕತ್ತಲಿಟ್ಟಿತು. ಯುಕ್ತ ಚಿಕಿತ್ಸೆ ಮುಗಿಯುವಾಗ...
by athreebook | Oct 31, 2010 | ತೀರ್ಥ ಯಾತ್ರೆ, ಪ್ರವಾಸ ಕಥನ, ವ್ಯಕ್ತಿಚಿತ್ರಗಳು
ತೀರ್ಥಯಾತ್ರೆ (ಭಾಗ ಎರಡು) ಶಿಕಾರಿ’ ಅಭಯನ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎರಡು-ಮೂರನೇ ಚಿತ್ರ! (ಹೌದು, ಇದು ಏಕಕಾಲಕ್ಕೆ ಕನ್ನಡ ಮತ್ತು ಮಲಯಾಳಗಳ ಸ್ವತಂತ್ರ ಚಿತ್ರೀಕರಣ ನಡೆಯುತ್ತಿದೆ (ವಿವರಗಳಿಗೆ ಇಲ್ಲಿ ನಿಮ್ಮ ಇಲಿಯ ಬಾಲ ತಿರುಚಿರಿ! ಏನು ಯೋಚಿಸ್ತೀರಿ, ಚಿಟಿಕೆ ಹೊಡೀರಿ ಅರ್ಥಾತ್ ಇಲ್ಲಿ ನಿಮ್ಮ ಮೌಸ್ ಕ್ಲಿಕ್ ಮಾಡೀ!!)...
by athreebook | Oct 27, 2010 | ವ್ಯಕ್ತಿಚಿತ್ರಗಳು
ಹೌದು, ಇಂದು ಸಂಜೆ ಏಳು ಗಂಟೆಗೆ ತೀರಿಹೋದ (ಪ್ರಾಯ ತೊಂಬತ್ತೊಂದು) ಸಂಬಂಧದಲ್ಲಿ ನನ್ನ ಚಿಕ್ಕಜ್ಜಿ (ತಂದೆಯ ಚಿಕ್ಕಪ್ಪ, ಮಡಿಕೇರಿಯ ವೈದ್ಯ ಶ್ರೀಶ್ರೀ ಜಿ.ಎನ್.ರಾಮಚಂದ್ರ ರಾಯರ ಹೆಂಡತಿ, ಶ್ರೀಮತಿ ವಿರಿಜಾಭವಾನಿ) ಭಾವನಾತ್ಮಕವಾಗಿ ನನಗೆ ಸದಾ ಅಜ್ಜಿಯಾದಷ್ಟೇ ‘ಸಾಕುತಾಯಿ’ಯ ಸ್ಥಾನದಲ್ಲೂ ಕಾಣುತ್ತಿದ್ದವರು. ನಾನಿನ್ನೂ ಆರೇಳು ತಿಂಗಳ...