ಭಗ್ತಿ ಮಾರ್ಗ, ಭಕ್ತಿ ಮಾರ್ಗ!

ಭಗ್ತಿ ಮಾರ್ಗ, ಭಕ್ತಿ ಮಾರ್ಗ!

ಆಕಾಶ ಇಲ್ಲಿ ಜಡಿಕುಟ್ಟಿ ಮಳೆ ಹೊಡೆಯುತ್ತಿರಬೇಕಾದರೆ ಕುಮಾರ ಪರ್ವತದ ಆಸುಪಾಸಿನ, ಕೊಡಗಿನ ಕಗ್ಗಾಡಮೂಲೆಯ ಭಗ್ತಿಯಲ್ಲಿ ಹೇಗಿರಬಹುದು? ಜನದೂರ, ನಾಗರಿಕ ಸೌಕರ್ಯದೂರ, ಮಂಗಳೂರಿನಿಂದ ನಾವು ಜೀಪು ಒಯ್ದರೂ ಪ್ರಯಾಣಿಸಲು ಕನಿಷ್ಠ ನಾಲ್ಕೈದು ಗಂಟೆಯ ಶ್ರಮಪೂರ್ಣ ಸವಾರಿದೂರವಾಗಿ ಅಲ್ಲಿರುವ ಒಂದೆರಡೇ ಒಕ್ಕಲಿನ ಜೀವನ ಹೇಗಿರಬಹುದು? ಒಂದೆರಡು...
ಚಿನ್ನದ ದಾರಿಯಿಂದ ಮೊದಲಳ್ಳಿಗೆ

ಚಿನ್ನದ ದಾರಿಯಿಂದ ಮೊದಲಳ್ಳಿಗೆ

(ಜಮ್ಮು ಕಾಶ್ಮೀರ ಪ್ರವಾಸ ೬) ಮೂರನೇ ದಿನದ ಕಲಾಪ – ಸೋನ್ಮಾರ್ಗ್ ಮತ್ತು ಅದಕ್ಕೊಂದು ಕೊಸರು – ಒಂದು ಕೊಂಡರೆ ಒಂದು ಉಚಿತ ಎನ್ನುವಂತೆ, ಕೀರ್ ಭವಾನಿ. ಒಂದು ಲಕ್ಷ್ಯ, ಅಂದರೆ ಶಿಖರ ಎಂದಿಟ್ಟುಕೊಳ್ಳಿ, ಅದರ ಸಾಧನಾ ಮಾರ್ಗದಲ್ಲಿ ನಾಲ್ಕೆಂಟು ಬೆಟ್ಟ ಕಣಿವೆಗಳನ್ನು ಕ್ರಮಿಸುವುದು ವೈವಿಧ್ಯಮಯ ಅನುಭವಗಳಿಗೆ ತೆರೆದುಕೊಳ್ಳುವುದು ಸಂತೋಷದ...
ಬಿಸಿಲೆ ಕಾಡಿನ ಕೊನೆಯ ದಿನಗಳು!

ಬಿಸಿಲೆ ಕಾಡಿನ ಕೊನೆಯ ದಿನಗಳು!

(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ) ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ “ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆ” ನನ್ನ ಸಮಾಧಾನ....
ಗೊಂಡೋಲಾ ನಿಸ್ಸತ್ತ್ವ ಸಂಭ್ರಮ

ಗೊಂಡೋಲಾ ನಿಸ್ಸತ್ತ್ವ ಸಂಭ್ರಮ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫) ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ, ಅರ್ಥಾತ್ ನೇರ ಹಿಮದ ಒಡನಾಟ. ವಿದ್ಯಾ ಮನೋಹರ ಉಪಾಧ್ಯ ದಂಪತಿಯನ್ನು ಇಲ್ಲಿನ ಹಿಮಮಹಿಮೆ ತುಂಬಾ ಪ್ರಭಾವಿಸಿತ್ತು. (ವಿವರಗಳನ್ನು ವಿದ್ಯಾ ಪ್ರತ್ಯೇಕ ಕಥನದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಇಲ್ಲೇ ಹಂಚಿಕೊಳ್ಳಲಿದ್ದಾರೆ!)...
ಜಲನಿಧಿಯ ಅವಹೇಳನ – ದಾಲ್ ಸರೋವರ

ಜಲನಿಧಿಯ ಅವಹೇಳನ – ದಾಲ್ ಸರೋವರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೪) ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್ ಲೇಕನ್ನು ರಾಜ್ಯದ ಎರಡನೇ ದೊಡ್ಡ ನಾಗರಿಕ ಸರೋವರ ಎಂದೇ ಗುರುತಿಸುತ್ತದೆ. ಮಹಿಮೆಯನ್ನು ಕೀರ್ತಿಸುವಾಗ, ಸುಮಾರು ಹದಿನೈದೂವರೆ ಕಿಮೀ ಸುತ್ತಳತೆ, ಹದಿನೆಂಟು ಚದರ ಕಿಮೀ ವಿಸ್ತೀರ್ಣ, ತೋರವಾಗಿ...
ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?

ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?

(ಜಮ್ಮು ಕಾಶ್ಮೀರ ಪ್ರವಾಸ ಕಥನ -೩) ನಾವು ತಡವಾಗಿ ಮಲಗಿದವರೆಂದು ಮುಂಬೆಳಕು ತಡವಾಗುವುದುಂಟೇ! ಮತ್ತೆ ನಮ್ಮ ಪ್ರಾಯಕ್ಕೆ ಸಹಜವಾಗಿ ಹಾಸಿಗೆ ಬಿಸಿ ಮಾಡುವುದು ಆಗಲೇ ಇಲ್ಲ. ಆರು ಗಂಟೆಗೆಲ್ಲ ನಾವು ಶೌಚ, ಬಿಸಿನೀರ ಸ್ನಾನವೆಲ್ಲ ಮುಗಿಸಿ ಯುದ್ಧಸನ್ನದ್ಧರಾಗಿದ್ದೆವು! ಹೋಟೆಲಿನ ಕೊನೆಯ ಮತ್ತು ನಾಲ್ಕನೇ ಮಾಳಿಗೆಯ ನಮ್ಮ ಕೋಣೆಯ...