by athreebook | Mar 14, 2013 | ನಂದಿ ಬೆಟ್ಟ, ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಬೆಂಗಳೂರು
ಅಭಯನಿಗೀಗ ಕತೆ ಹೇಳುವ ವೃತ್ತಿ. ನಟರಾಜನಿಂದ ತೊಡಗಿ, ಝಣ ಝಣ ಲಕ್ಷ್ಮೀಪುತ್ರನಿಗೆ, ಕಟಿಪಿಟಿ ನಟೀಮಣಿಗೆ, ಕಾವ್ಯಶ್ರೀಗೆ, ವಿಶ್ವಕರ್ಮನಿಗೆ, ಕಂಠಶ್ರೀಗೆ ಮುಂತಾದವರಿಗೆ ಹೊಸಹೊಸದಾಗಿ ಬರೆದು ಓದುತ್ತಿರುತ್ತಾನೆ. ಕೆಲವೊಮ್ಮೆ ಇವರನ್ನೆಲ್ಲ ಸೇರಿಸಿ ಸಮೂಹ ಘೋಷದಲ್ಲಿ ಸಾರ್ವಜನಿಕಕ್ಕೂ ಇವನು ಹೇಳುವುದು ಕಥೆಯನ್ನೇ. (ಹಾಗೆ ಬಂದವುಗಳೆ...
by athreebook | Mar 8, 2013 | ಇತರ ಸಾಹಸಗಳು, ಚಕ್ರವರ್ತಿಗಳು
(ಚಕ್ರವರ್ತಿಗಳು – ಹತ್ತನೇ ಸುತ್ತು) [ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ ಪರಾಕಾಷ್ಠೆಗೊಂದು ನಿದರ್ಶನ ಮೋಟಾರ್ ರ‍್ಯಾಲಿ: ಅರಾಜ ಮಾರ್ಗದಲ್ಲಿ ಅಶಿಸ್ತಿನ ಗೊಂದಲದಲ್ಲಿ ಅಸ್ಥಿರ ಮನಸ್ಕನಾಗದೇ ಲಕ್ಷ್ಯಚ್ಯುತನಾಗದೇ ನಿಶ್ಚಿತ ಮುಹೂರ್ತದಲ್ಲಿ ಗುರಿ ತಲಪಬಲ್ಲ ಅದಟಿನ ಪ್ರತ್ಯಕ್ಷ ರೂಪ, ಅರ್ಜುನ...
by athreebook | Feb 7, 2013 | ಚಕ್ರವರ್ತಿಗಳು, ಪರಿಸರ ಸಂರಕ್ಷಣೆ, ಪ್ರವಾಸ ಕಥನ
(ಚಕ್ರವರ್ತಿಗಳು – ಒಂಬತ್ತನೆಯ ಸುತ್ತು) ಜೀವನ ವ್ಯಾಪಾರದಲ್ಲಿ ನಾವು ಪ್ರಕೃತಿ – ಸಹಜ ಪರಿಸರವನ್ನು ಜೀವಿ ಪರಿಸರಕ್ಕೆ ಸದಾ ಪಳಗಿಸುತ್ತಲೇ ಇರುತ್ತೇವೆ, ಅದೇ ಸಂಸ್ಕೃತಿ. ಈ ಹೋರಾಟದಲ್ಲಿ ವಿವೇಚನೆ ತಗ್ಗಿದ್ದೆಲ್ಲಾ ವಿಕೃತಿ, ಪರಿಸರ ಮಾಲಿನ್ಯ. ಇಲ್ಲಿ ಆಗುವ ಹಾನಿ ವ್ಯಕ್ತಿ ಮಿತಿಯನ್ನು ಮೀರುತ್ತದೆ, ಜೀವಿ ಪರಿಸರಕ್ಕೆ...
by athreebook | Jan 24, 2013 | ಜಲಪಾತಗಳು, ಪರ್ವತಾರೋಹಣ
ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ ಸೋಮೇಶ್ವರ ಕಾಡು ನುಗ್ಗಿತು. ಕುಗ್ರಾಮ ಮೂಲೆಯ ತಣ್ಣೀರಬೈಲು (ಸುಮಾರು ನಾಲ್ಕೂವರೆ ಕಿಮೀ) ಎಂಬ ಕೊನೆಯ ಒಕ್ಕಲು ಮನೆಯವರೆಗೆ ಹಳ್ಳಿಯ ಸಾಮಾನ್ಯ ಮಣ್ಣುದಾರಿಯಿತ್ತು. ಅನಂತರ ಸುಮಾರು ಒಂದೂವರೆ ಕಿಮೀಯಷ್ಟು ಕೂಪು...
by athreebook | Jan 17, 2013 | ಜಲಪಾತಗಳು, ಪರ್ವತಾರೋಹಣ
ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು. ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ...
by athreebook | Jan 11, 2013 | ಜಲಪಾತಗಳು, ಪರ್ವತಾರೋಹಣ
ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಎರಡು [ತಿಂಗಳೆ ಕಣಿವೆಯ ಕೂಡ್ಲು ತೀರ್ಥದ ದರ್ಶನ ಮತ್ತು ಬರ್ಕಣ ಅಬ್ಬಿಯ ತಳಶೋಧದ ನೆಪದಲ್ಲಿ ನಮ್ಮ ಬಳಗ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಅಸಂಖ್ಯ ಚಾರಣಗಳನ್ನು ನಡೆಸಿತ್ತು. ಅವುಗಳಲ್ಲಿ ಸ್ವಾರಸ್ಯವಾದದ್ದನ್ನು ಮಾತ್ರ ಇಲ್ಲಿ ಹಿಡಿದಿಡುವ ಕಥನ ಮಾಲಿಕೆಗೆ ತಿಂಗಳ ಹಿಂದೆಯೇ ಕಳೆದ ಕಂತು...