ಬರ್ಕಣದಿಂದ ಹೊತ್ತು ತಂದ ಡೆಡ್ ಬಾಡಿ!

ಬರ್ಕಣದಿಂದ ಹೊತ್ತು ತಂದ ಡೆಡ್ ಬಾಡಿ!

ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ ಸೋಮೇಶ್ವರ ಕಾಡು ನುಗ್ಗಿತು. ಕುಗ್ರಾಮ ಮೂಲೆಯ ತಣ್ಣೀರಬೈಲು (ಸುಮಾರು ನಾಲ್ಕೂವರೆ ಕಿಮೀ) ಎಂಬ ಕೊನೆಯ ಒಕ್ಕಲು ಮನೆಯವರೆಗೆ ಹಳ್ಳಿಯ ಸಾಮಾನ್ಯ ಮಣ್ಣುದಾರಿಯಿತ್ತು. ಅನಂತರ ಸುಮಾರು ಒಂದೂವರೆ ಕಿಮೀಯಷ್ಟು ಕೂಪು...
ಬರ್ಕತ್ತಿಲ್ಲದ ಹುಡುಕಾಟದಲ್ಲಿ ಅಬ್ಬಿಗಳು

ಬರ್ಕತ್ತಿಲ್ಲದ ಹುಡುಕಾಟದಲ್ಲಿ ಅಬ್ಬಿಗಳು

ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು. ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ...
ಎದೆ ನಡುಗಿಸಿದ ಕೂಡ್ಲು ತೀರ್ಥ

ಎದೆ ನಡುಗಿಸಿದ ಕೂಡ್ಲು ತೀರ್ಥ

ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಎರಡು [ತಿಂಗಳೆ ಕಣಿವೆಯ ಕೂಡ್ಲು ತೀರ್ಥದ ದರ್ಶನ ಮತ್ತು ಬರ್ಕಣ ಅಬ್ಬಿಯ ತಳಶೋಧದ ನೆಪದಲ್ಲಿ ನಮ್ಮ ಬಳಗ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಅಸಂಖ್ಯ ಚಾರಣಗಳನ್ನು ನಡೆಸಿತ್ತು. ಅವುಗಳಲ್ಲಿ ಸ್ವಾರಸ್ಯವಾದದ್ದನ್ನು ಮಾತ್ರ ಇಲ್ಲಿ ಹಿಡಿದಿಡುವ ಕಥನ ಮಾಲಿಕೆಗೆ ತಿಂಗಳ ಹಿಂದೆಯೇ ಕಳೆದ ಕಂತು...
ಮಂಗಳೂರಿನ ಆದಿ ಉರಗೋದ್ಯಾನ!

ಮಂಗಳೂರಿನ ಆದಿ ಉರಗೋದ್ಯಾನ!

ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಒಂದು ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ ದಕ್ಷಿಣಕ್ಕೆ. ಬರ್ಕಣ ದೂರದರ್ಶನದಲ್ಲಿ ದಕ್ಕಿದ್ದರೂ ಅದರ ತಲೆ ತಳ ನೋಡಲು “ಇನ್ನೊಮ್ಮೆಬರ್ಕಣ್ಣಾ” ಎಂಬುದು ನಮ್ಮ ದೊಡ್ಡ ಯೋಜನೆಗೆ ಪಲ್ಲವಿಯೇ ಆಗಿತ್ತು. ಯಾಕೆಂದರೆ ಕಣ್ಣಿಗೆ ಕಾಣುವಂತೆಯೂ, ಸರ್ವೇಕ್ಷಣ ಭೂಪಟ...
ನಡೆದು ನೋಡೈ ನೀಂ ಶಿರಾಡಿ ಸೊಬಗಂ!

ನಡೆದು ನೋಡೈ ನೀಂ ಶಿರಾಡಿ ಸೊಬಗಂ!

(ಚಕ್ರವರ್ತಿಗಳು – ಏಳನೆಯ ಸುತ್ತು) [ಕರಾವಳಿ ಪ್ರದೇಶವಾದ ಅವಿಭಜಿತ ದಕ ಮತ್ತು ಉಕ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿ ಎನ್ನುವುದುಂಟು. ಕಿನಾರೆ ಮೇಲೆ ಕಡಲಿಗೆದುರಾಗಿ ನಿಂತ ಕೊಡಲಿಗೊರವ ಸಮುದ್ರರಾಜನ ಪ್ರತಾಪವನ್ನು ಧಿಕ್ಕರಿಸಿ ಕೋಪೋನ್ಮತ್ತತೆಯಿಂದ ತನ್ನ ಕುಠಾರಾಯುಧವನ್ನು ಶಕ್ತಿಮೀರಿ ಎಸೆದ. ಅದು ತಲಪಿದ ಬಿಂದುವಿನವರೆಗೆ...
ರೈಲೋಡಿದ ಬೈಕು

ರೈಲೋಡಿದ ಬೈಕು

(ಚಕ್ರವರ್ತಿಗಳು – ಆರನೆಯ ಸುತ್ತು) ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು?” ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ...