by athreebook | Feb 10, 2010 | ತಾತಾರ್ ಶಿಖರಾರೋಹಣ, ಪರ್ವತಾರೋಹಣ
ತೆಪ್ಪಕಾಡಿನಲ್ಲಿ ತೆಪ್ಪಗೆ ಬಿದ್ದವರ ಕಥೆಯಂತೂ ನಿಮಗೆ ಗೊತ್ತಾಯ್ತು. ಹಾಗೆಂದು ಮಸಣಿಗುಡಿಗೆ ಹೋದವರು ಹಿಂದಿನ ಯೋಚನೆಗಳನ್ನು ಇಟ್ಟುಕೊಳ್ಳುವುದು ಹೇಗೆ ಎಂದು ತಪ್ಪು ಭಾವಿಸಬೇಡಿ. ಅವರು ಮಸಣಿಗುಡಿ ತಲಪಿದ್ದೇ ಊರಬಾಗಿಲಿನಲ್ಲೇ ಇದ್ದ ಚೆಕ್ ಪೋಸ್ಟ್ ಬಳಿಯ ಮೈದಾನದಲ್ಲಿ ಬೀಡುಬಿಟ್ಟರು. ನಾಗರಾಜ್ ರೋಪಿಗೆ ಎಲ್ಲ ಗುಡಾರಗಳನ್ನು...
by athreebook | Jan 28, 2010 | ತಾತಾರ್ ಶಿಖರಾರೋಹಣ, ಪರ್ವತಾರೋಹಣ
(ತಾತಾರ್-೨) [ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ] ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ...
by athreebook | Jan 14, 2010 | ಪರ್ವತಾರೋಹಣ, ವನ್ಯ ಸಂರಕ್ಷಣೆ
(ತಾತಾರ್ ಶಿಖರವನ್ನು ಭೂತಕಾಲದಲ್ಲಿ ಹತ್ತುವ ಮುನ್ನ ವರ್ತಮಾನದ ಒಂದು ಜರೂರು, ಒಂದು ಅನುಭವ ಹೇಳಿಬಿಡುತ್ತೇನೆ. ನಿಮ್ಮುತ್ಸಾಹದ ಚಿಲುಮೆ ವಾರಕಾಲ ಬಾಳಲಿ!) ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ಹಾಯುವ ಸುಲಭ ಏರಿನ, ಅಂದದ ಬಳುಕಿನ ನುಣ್ಣನೆ ದಾರಿ ಅದರದ್ದಲ್ಲ; ಗಣಿಗಾರಿಕೆಯವರದ್ದು. ಕಬ್ಬಿಣ ಗಣಿಗಾರಿಕೆಯವರಿಗೆ ಅದು ಅವಶ್ಯವೇ ಸರಿ....
by athreebook | Jan 8, 2010 | ತಾತಾರ್ ಶಿಖರಾರೋಹಣ, ಪರ್ವತಾರೋಹಣ
“ಕ್ರಿಸ್ಮಸ್ ರಜೆಗೆ ಬಸ್ಸೇರಿ ರಾಮೋಜಿ ಸಿಟಿ ನೋಡಲು ಹೊರಟಿದ್ದೇವೆ” ಗೆಳೆಯ ಮನೋಹರ ಉಪಾಧ್ಯ ಹೇಳಿದ್ದರು. ಆದರೆ ತೆಲಂಗಾಣದ ಗದ್ದಲಕ್ಕೆ ಹೆದರಿ, ಕಡೇ ಮಿನಿಟಿಗೆ ಯೋಜನೆ ಬದಲಿಸಿ, ಸ್ವಂತ ವಾಹನದಲ್ಲಿ ಊಟಿಯನ್ನು ಮುಟ್ಟಿ ಬಂದರು. ಎರಡೂವರೆ ಜನ (ಹೆಂಡತಿ ವಿದ್ಯಾ ಮತ್ತು ಮಗ ಸುಧನ್ವ, ಸಣ್ಣವನಾದ್ದರಿಂದ ೧/೨) ಮಾತ್ರ ತುಂಬಿಕೊಂಡು ಎರಡು...
by athreebook | Oct 17, 2009 | ಪ್ರವಾಸ ಕಥನ, ಲಘು ಬರಹಗಳು
ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು ನನ್ನ ಹವ್ಯಾಸ ಬಲದಲ್ಲಿ. ದಕ್ಷಿಣ ಭಾರತದ ಒಂದು ಸಣ್ಣ ಅಂಶವನ್ನೂ ಸೇರಿಸಿದಂತೆ ಈ ವಲಯದ ನನ್ನ ಮೋಟಾರು ಸೈಕಲ್ ಪ್ರವಾಸ ಕಥನಗಳ ಸಂಕಲನವನ್ನು ನಾನೇ ‘ಚಕ್ರವರ್ತಿಗಳು’ ಎಂದು ಹೆಸರಿಸಿ, ಪ್ರಕಟಿಸಿದ್ದು (ಸದ್ಯ...
by athreebook | Sep 23, 2009 | ಅನ್ಯರ ಬರಹಗಳು, ಪ್ರವಾಸ ಕಥನ
ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ. (ಅ‘ತ್ರಿ’ಗಳಲ್ಲಿ ಇವನು ಮಧ್ಯಮ. ವೃತ್ತಿಯಲ್ಲಿ ಗಣಕತಂತ್ರಿ. ಜಯಶ್ರೀ ಹೆಂಡತಿ. ಅನರ್ಘ್ಯ, ಐಶ್ವರ್ಯ ಮಕ್ಕಳು.) ಅವನ ಹವ್ಯಕ ಗಿವ್ಯಕ, ತುಳು ಗಿಳು ಬೆರೆತ ಭಾಷಾ ಪ್ರಯೋಗ ನಿಮ್ಮ ಓದುವ ಆನಂದಕ್ಕೆ ಬಿಟ್ಟಿದ್ದೇನೆ. ಕೇವಲ...