ಮೆಟ್ರೋದಲ್ಲಿ ಕಾಣೆಯಾದ ಮೂವರು!
ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು.ಮತ್ತೆ ನಿರ್ವಿಘ್ನವಾಗಿ…. ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ. ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ.
ಪ್ರಕೃತಿಯ ಮಡಿಲಲ್ಲಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೮ ನನ್ನ ಪತ್ರಲೇಖನ ಹವ್ಯಾಸ...
ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ
(ಧಾರಾವಾಹಿಯ ಮೊದಲ ಭಾಗ) ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ?...
ಕತ್ತಲಿನಿಂದ ಬೆಳಕಿನೆಡೆಗೆ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೭ ನಮ್ಮ ಮುತ್ತಜ್ಜನ ಮಕ್ಕಳಲ್ಲಿ ರಾವ್...
ಸೈಕಲ್ ಆಗಬೇಕು ಸರಳತೆಯ ಸಂಕೇತ
(ಚಕ್ರೇಶ್ವರ ಪರೀಕ್ಷಿತ ೧೨ ಅಥವಾ ದೈನಂದಿನ ಸೈಕಲ್ ಸರ್ಕೀಟಿನ ಹನ್ನೆರಡನೇ ಸಂಗ್ರಹ) ಸರಳ, ಆರೋಗ್ಯಪೂರ್ಣ, ಮಿತವ್ಯಯಿ...
ಯಕ್ಷಗಾನ ವಿಮರ್ಶೆಗಾಗಿ ದಾಕ್ಷಿಣ್ಯಬಿಟ್ಟವರು
“ಪ್ರದರ್ಶನದಲ್ಲಿ ಏನಾದರೂ ಹುರುಳುಂಟೇ ಅಥವಾ ಇದು ಕೇವಲ ನನ್ನೊಬ್ಬನ ಹಳವಂಡವೋ?” ಇದು ತನ್ನ ದೀವಟಿಗೆ ಪ್ರದರ್ಶನದ...
ಕಾಪಾಡಿ! ಬಲಕೊಡೀ!!
(ರಂಗನಾಥ ಸ್ತಂಭ ವಿಜಯ ಭಾಗ -೧) ಇಲ್ಲಿ ನನ್ನ ಲಕ್ಷದ್ವೀಪ ಕಥನ ಸಾಪ್ತಾಹಿಕ ಕಂತಿನಲ್ಲಿ ಸಾಗಿದ್ದಂತೆ ಲೋಕಮುಖದಲ್ಲಿ...
ನಿಮ್ಮನ್ನೇ ಕಾದಿದೆ ಲಕ್ಷ ದ್ವೀಪ!
(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ - ಮುಕ್ತಾಯ) ‘ದುಡ್ಡು ಬಿಸಾಡಿದರಾಯ್ತು, ಒಂದಷ್ಟು ದಿನ ಮಜವಾಗಿ ತಿಂದುಂಡು, ಕುಶಿ...
ಮಿನಿಕಾಯ್, ಕವರಟ್ಟಿ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ - ಭಾಗ ಐದು ಕೊಚ್ಚಿಯ ಉಬ್ಬೆಮನೆಯಿಂದ ಹವಾನಿಯಂತ್ರಿತ ಕವರಟ್ಟಿಯ ತಬ್ಬಿಗೆ ಬರುವಾಗ...
ಕಲ್ಪೆನಿಗೆ ವಿದಾಯ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ - ೪ ಸಾರೋಟು ಏರಿಸಿ, ಫಟ್ಫಟೀಂತ ಬಂದದ್ದೇ ‘ಹೆದ್ದಾರಿ’ಯಲ್ಲಿ ಇನ್ನಷ್ಟು...
ಲಗೂನ ಜಳಕಾನ ಮುಗಿಸೂಣ ಬಾ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ - ೩ ಕೋಟ್ಯಂತರ ಸೂಕ್ಷ್ಮಜೀವಿಗಳ OYHS - ಓನ್ ಯುವರ್ ಹೋಂ ಸ್ಕೀಂ, ಹವಳದ್ವೀಪದ...
ಕಲ್ಪನೆಯಿಂದೆದ್ದ ಕಲ್ಪೆನಿ
(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ - ೨) ಎಂ.ವಿ ಕವರಟ್ಟಿಯ ಮೂರನೆಯ ಮಾಳಿಗೆಯ (Deck. ಈ ಶಬ್ದಕ್ಕೆ ಮೈವಿವಿನಿಲಯದ...
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ
ಭಾಗ ಒಂದು - ಎಂ.ವಿ ಕವರಟ್ಟಿ “ಅಶೋಕೆರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ...
ಸಾವಿರಕಂಬದ ಊರಿನಲ್ಲಿ ಸಾವಿರದ ಸಂಭ್ರಮ
[ಪ್ರಿಯರಾದ ಶತಾವಧಾನಿ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರಿಗೆ ಒಂದು ತೆರೆದ ಪತ್ರ.] ಪೂರ್ವರಂಗ: ಮಂಗಳೂರಿನ ಪ್ರಥಮ...
ಯಕ್ಷ ದಾಖಲೀಕರಣದ ಫಲಶ್ರುತಿ
ಓ ಮೊನ್ನೆ ಕವಿ, ಕಲಾವಿದ ಕೆ.ವಿ ರಮಣ್ ಅನಿರೀಕ್ಷಿತವಾಗಿ ನನ್ನ ಅಂಗಡಿಗೆ ಬಂದು ನನ್ನ ಒಂದು ಮಿನಿಟಿನ ಬಿಡುವು ಕೇಳಿ...
ಪರಿಸರ ಮತ್ತು ಅಭಿವೃದ್ಧಿ
ನೀವೀಗ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸೇರಿಯೋ ರೈಲೇರಿಯೋ ಶಿರಾಡಿ ಘಾಟಿಯಲ್ಲಿ ಹೋಗುತ್ತಿದ್ದೀರಿ, ಎಂದು...
ಅಮರ್ತ್ಯರ ಆತಿಥ್ಯದಲ್ಲಿ (ತಾತಾರ್ ೬)
ಚಳಿ ತಡೆಯಲಾರದೆ ಸೂರ್ಯ ಆಗಲೇ ಗೃಹಾಭಿಮುಖನಾಗಿದ್ದ. ಸುಬ್ಬಯ್ಯನ್ ಅಲ್ಲಿದ್ದ ಊರ ದನಗಳು ಬಿಟ್ಟುಹೋದ ಜಾಡು ನೋಡಿ, ನಮಗೆ...
















ತುಂಬ ಉಪಯುಕ್ತ ಮಾಹಿತಿ.