by athreebook | Oct 5, 2023 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
( ಓದಿ: ಕಳೆದ ವರ್ಷದ ‘ಹಾಮಭ ಸ್ಮೃತಿದಿನ’ ) ಪುಸ್ತಕೋದ್ಯಮ ನಿಸ್ಸಂದೇಹವಾಗಿ ನನಗೆ ಬಹು ಪ್ರೀತಿಯ ವೃತ್ತಿ. ಅದು ನನಗೆ ಆದಾಯ ಮತ್ತು ಬಹಳ ಗೌರವಯುತ ಜೀವನವನ್ನು ಕೊಟ್ಟಿದೆ. ನಾನೂ ಅದನ್ನು ಅಷ್ಟೇ ಜವಾಬ್ದಾರಿಯಲ್ಲಿ ನಡೆಸಿದೆ, ಕೇವಲ ಹೊಟ್ಟೇಪಾಡು ಎಂದಲ್ಲ. ಹಾಗಾಗಿ ಮೂವತ್ತಾರು ವರ್ಷಗಳನಂತರ ಅದರ ಮೇಲಿನ ಪ್ರೀತಿ ಇಳಿಮುಖವಾದಾಗ, ನನ್ನ...
by athreebook | Sep 10, 2021 | ಪುಸ್ತಕೋದ್ಯಮ
ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿ-ಪ್ರಕಾಶನ(ಉಚಿತ) ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ ಬಿಡಿ ಮಾರಾಟಗಾರನಾಗಿ ಮತ್ತೆ ಪ್ರಕಾಶನವೇ ಮೊದಲಾದ ಕೆಲವು ಮುಖಗಳಲ್ಲಿ ಚೂರುಪಾರೆಂದು ಸುಮಾರು ಮೂವತ್ತಾರು ವರ್ಷ ಪ್ರಾಮಾಣಿಕ ದುಡಿದ ಅನುಭವ ನನ್ನದು. ಆ ಕೊನೆಯಲ್ಲಿ ಕನ್ನಡ ಮುದ್ರಣ-ಪ್ರಕಾಶನ ಮಾಧ್ಯಮದ ಹುಸಿತನಕ್ಕೆ...
by athreebook | Jul 3, 2021 | ಗುಹಾ ಶೋಧನೆ, ಪ್ರವಾಸ ಕಥನ
ಮಂಗಳೂರಿನಲ್ಲಿ ನಾನು ವೃತ್ತಿಪರನಾಗಿ (ಪುಸ್ತಕೋದ್ಯಮಿ – ೧೯೭೫) ನೆಲೆಸಿದಂದಿನಿಂದ ‘ಸಾಹಸ’ದ ಹೊದಿಕೆಯಲ್ಲಿ ಪ್ರಾಕೃತಿಕ ಅನ್ವೇಷಣೆಯನ್ನು (ಬೆಟ್ಟ, ಕಾಡು, ಜಲಪಾತ ಇತ್ಯಾದಿ ಸೇರಿದಂತೆ) ಗಟ್ಟಿ ಹವ್ಯಾಸವಾಗಿ ರೂಢಿಸಿಕೊಂಡೆ. ಅದರಲ್ಲಿ ಗಳಿಸಿದ ಸಂತೋಷ ಇತರರಿಗೂ ಪ್ರೇರಕವಾಗಬೇಕೆಂಬ ಆಸೆಯಲ್ಲಿ ಯುಕ್ತ ಪ್ರಚಾರಕ್ಕೂ ಇಳಿದೆ. ಆ...
by athreebook | Jun 23, 2021 | ಗುಹಾ ಶೋಧನೆ, ಪ್ರವಾಸ ಕಥನ
ಉಡುಪಿ ಇಂದ್ರಾಳಿ ಸಮೀಪದ ಜಗನ್ನಾಥರಿಗೆ (ವೃತ್ತಿತಃ ಏನೋ ವರ್ಕ್ ಶಾಪ್ ಮಾಲಿಕ) ಮೂಡಬಿದ್ರೆಯ ಸೋನ್ಸರೊಂದಿಗೆ ಒಳ್ಳೆಯ ಸ್ನೇಹಾಚಾರವಿತ್ತು. ಅವರಂತೆ ಇವರೂ ಹವ್ಯಾಸೀ ಡೌಸರ್. ಜಗನ್ನಾಥರ ಇನ್ನೋರ್ವ ಗೆಳೆಯ ಕೃಷ್ಣ ಭಟ್. ಭಟ್ಟರು ಜಿಲ್ಲೆಗೆ ಬರುತ್ತಿದ್ದ ವಿದೇಶೀಯರೂ ಸೇರಿದಂತೆ ಜನಪದ ತಜ್ಞರಿಗೆ ಕ್ಷೇತ್ರಕಾರ್ಯದಲ್ಲಿ ಸಹಾಯಕನಾಗಿ,...
by athreebook | Jun 18, 2021 | ಗುಹಾ ಶೋಧನೆ, ಪ್ರವಾಸ ಕಥನ
೧೯೮೦ರ ದಶಕದಲ್ಲಿ ಬುಲ್ಡೋಜರ್ ಮತ್ತು ತೂತು ಭಾವಿಯ ಕ್ರಾಂತಿ ಚುರುಕಾಗಿತ್ತು. ಭೂಗರ್ಭದ ಜಲನಿಧಿ ಸರ್ವವ್ಯಾಪಿ ಮತ್ತು ಅಕ್ಷಯ ಎನ್ನುವ ಹುಚ್ಚಿನಲ್ಲಿ ಕೃಷಿಕರು ಎಲ್ಲೆಂದರಲ್ಲಿ ಗುಡ್ಡೆಗಳನ್ನು ತಟ್ಟಾಗಿಸುತ್ತ ತೋಟ ವಿಸ್ತರಣೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ಭೂಗರ್ಭ ಶಾಸ್ತ್ರಜ್ಞರು, ಮೂಲನೆಲದ ರಚನೆ ನೋಡಿ, ಕೆಲವು ಯಂತ್ರೋಪಕರಣಗಳ...