by athreebook | Jul 3, 2021 | ಗುಹಾ ಶೋಧನೆ, ಪ್ರವಾಸ ಕಥನ
ಮಂಗಳೂರಿನಲ್ಲಿ ನಾನು ವೃತ್ತಿಪರನಾಗಿ (ಪುಸ್ತಕೋದ್ಯಮಿ – ೧೯೭೫) ನೆಲೆಸಿದಂದಿನಿಂದ ‘ಸಾಹಸ’ದ ಹೊದಿಕೆಯಲ್ಲಿ ಪ್ರಾಕೃತಿಕ ಅನ್ವೇಷಣೆಯನ್ನು (ಬೆಟ್ಟ, ಕಾಡು, ಜಲಪಾತ ಇತ್ಯಾದಿ ಸೇರಿದಂತೆ) ಗಟ್ಟಿ ಹವ್ಯಾಸವಾಗಿ ರೂಢಿಸಿಕೊಂಡೆ. ಅದರಲ್ಲಿ ಗಳಿಸಿದ ಸಂತೋಷ ಇತರರಿಗೂ ಪ್ರೇರಕವಾಗಬೇಕೆಂಬ ಆಸೆಯಲ್ಲಿ ಯುಕ್ತ ಪ್ರಚಾರಕ್ಕೂ ಇಳಿದೆ. ಆ...
by athreebook | Jun 23, 2021 | ಗುಹಾ ಶೋಧನೆ, ಪ್ರವಾಸ ಕಥನ
ಉಡುಪಿ ಇಂದ್ರಾಳಿ ಸಮೀಪದ ಜಗನ್ನಾಥರಿಗೆ (ವೃತ್ತಿತಃ ಏನೋ ವರ್ಕ್ ಶಾಪ್ ಮಾಲಿಕ) ಮೂಡಬಿದ್ರೆಯ ಸೋನ್ಸರೊಂದಿಗೆ ಒಳ್ಳೆಯ ಸ್ನೇಹಾಚಾರವಿತ್ತು. ಅವರಂತೆ ಇವರೂ ಹವ್ಯಾಸೀ ಡೌಸರ್. ಜಗನ್ನಾಥರ ಇನ್ನೋರ್ವ ಗೆಳೆಯ ಕೃಷ್ಣ ಭಟ್. ಭಟ್ಟರು ಜಿಲ್ಲೆಗೆ ಬರುತ್ತಿದ್ದ ವಿದೇಶೀಯರೂ ಸೇರಿದಂತೆ ಜನಪದ ತಜ್ಞರಿಗೆ ಕ್ಷೇತ್ರಕಾರ್ಯದಲ್ಲಿ ಸಹಾಯಕನಾಗಿ,...
by athreebook | Jun 18, 2021 | ಗುಹಾ ಶೋಧನೆ, ಪ್ರವಾಸ ಕಥನ
೧೯೮೦ರ ದಶಕದಲ್ಲಿ ಬುಲ್ಡೋಜರ್ ಮತ್ತು ತೂತು ಭಾವಿಯ ಕ್ರಾಂತಿ ಚುರುಕಾಗಿತ್ತು. ಭೂಗರ್ಭದ ಜಲನಿಧಿ ಸರ್ವವ್ಯಾಪಿ ಮತ್ತು ಅಕ್ಷಯ ಎನ್ನುವ ಹುಚ್ಚಿನಲ್ಲಿ ಕೃಷಿಕರು ಎಲ್ಲೆಂದರಲ್ಲಿ ಗುಡ್ಡೆಗಳನ್ನು ತಟ್ಟಾಗಿಸುತ್ತ ತೋಟ ವಿಸ್ತರಣೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ಭೂಗರ್ಭ ಶಾಸ್ತ್ರಜ್ಞರು, ಮೂಲನೆಲದ ರಚನೆ ನೋಡಿ, ಕೆಲವು ಯಂತ್ರೋಪಕರಣಗಳ...
by athreebook | May 28, 2021 | ವ್ಯಕ್ತಿಚಿತ್ರಗಳು
“ನಾನು ಜಯಂತ್+ಅ, ಜಯಂತ! ಏಗ್ನೆಸ್ (ಮಹಿಳಾ) ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕ. ನಮ್ಮದು ಮಹಿಳಾ ಕಾಲೇಜಾದ್ದರಿಂದ ಬರಿಯ ಹೆಸರು ಕೇಳಿದವರು ‘ಜಯಂತಿ’ ಮಾಡಿಬಿಡ್ತಾರೆ…” ಎಂದು ನನ್ನಂಗಡಿಯ ಹೊಸ ಕಾಲದಲ್ಲಿ ಬಂದಿದ್ದವರು (೧೯೭೬ರ ಸುಮಾರಿಗೆ) ಮುಕ್ತ ನಗೆಯೊಡನೆ, ನಾಲ್ಕು ಹನಿ ಕಣ್ಣೀರು ಒರೆಸಿಕೊಳ್ಳುತ್ತ...
by athreebook | Apr 29, 2021 | ಅಶೋಕವನ, ಎತ್ತಿನ ಹೊಳೆ ಯೋಜನೆ, ಪ್ರವಾಸ ಕಥನ, ಬಿಸಿಲೆ
೧. ಬಳಸು ದಾರಿಯಲ್ಲಿ ‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು. ಗಡಿಬಿಡಿಯಾಗಬೇಡಿ, ಇದು ಕೋವಿಡ್ ಸಂಬಂಧಿಯಲ್ಲ. ನಾನೇ ಹಿಂದೆ ಹೇಳಿದ್ದ ಕುಳ್ಕುಂದ – ಬಿಸಿಲೆ ನಡುವೆ ಬಾಕಿಯುಳಿದಿದ್ದ ಮೂರು ಕಿಮೀ ಕಾಂಕ್ರಿಟೀಕರಣ ಪೂರೈಕೆಗೆ. ಆದರೆ ಆರಂಭಕ್ಕೆ ತಡ, ಮುಕ್ತಾಯ ಎಂದೂ ಇಲ್ಲ...
by athreebook | Apr 14, 2021 | ಯಕ್ಷಗಾನ
“ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ, ಅಂದರೆ ಕರ್ನಾಟಕದ ಕರಾವಳಿ ಸೇರಿದಂತೆ ಸ್ವಲ್ಪ ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ಜನಪ್ರಿಯತೆ ಮಾತ್ರವಲ್ಲ, ಬಹುದೊಡ್ಡ ‘ಉದ್ಯಮ’ವೇ ಆಗಿ (ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳು) ಕಂಡ ಬೆಳವಣಿಗೆಗೆ ಮಾತ್ರ ಈ...
by athreebook | Apr 12, 2021 | ಗಿರೀಶ ಪಾಲಡ್ಕ, ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ [ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ, ಕೇಳಿದವರಿಗೆ “ನಿರ್ಜನ ದ್ವೀಪ – ಪೆರುಮಾಳ ಪಾರ” ಎಂದು ಸುಧಾರಿಸಿ ಮುಗಿಸುವುದರಲ್ಲಿದ್ದರು. ಆದರೆ ಈಗ ನನ್ನ ಒತ್ತಾಯಕ್ಕೆ, ಪುಟ್ಟ ಲೇಖನ ಮತ್ತು ಹೆಚ್ಚಿನ ಪಟಗಳನ್ನೂ ಪೂರೈಸಿದ್ದಾರೆ....
by athreebook | Apr 7, 2021 | ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
೧. ಕಥನಾರಂಭದಲ್ಲಿ ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ...
by athreebook | Feb 27, 2021 | ಅಶೋಕವನ, ಪ್ರವಾಸ ಕಥನ, ಬಿಸಿಲೆ
[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ – ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ. (ಬಿಸಿಲೆಯಲ್ಲಿ ಹೊಸಬೆಳಕು) ಈಗ ಕಲ್ಪನೆಯು ರೂಪ ಪಡೆದು ‘ಮೊದಲ ಅಳು’ ಕೊಡುವವರೆಗಿನ ವಿಕಾಸದ ಕತೆ] ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ...
by athreebook | Feb 2, 2021 | ಅಶೋಕವನ, ಬಿಸಿಲೆ
ಸ್ವಾಗತ: “ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು...