by athreebook | Sep 17, 2020 | ವೈಚಾರಿಕ, ವ್ಯಕ್ತಿಚಿತ್ರಗಳು, ಹೊಂಡೆಲ್ ಪ್ರಸನ್ನ
[ಅಮೆರಿಕಾದಲ್ಲಿರುವ ನನ್ನ ತಮ್ಮ – ಆನಂದವರ್ಧನ ಓದಿ, ಭಾರೀ ಕುಶಿಪಟ್ಟು “ನೋಡೋ” ಎಂದು ನನಗೂ ದೂಡಿದ ಲೇಖನವಿದು. ಪ್ರಸ್ತುತ ವೃತ್ತಿ, ವಾಸ್ತವ್ಯಗಳಲ್ಲಿ ನ್ಯೂ ಜೆರ್ಸಿಯ ಹೊಂಡೆಲ್ಲಿನಲ್ಲಿರುವ ಬಿ.ಎಸ್. ಪ್ರಸನ್ನ ಅಥವಾ ಬಾಲ ಪ್ರಸನ್ನರು ನಮಗೆ ಪೂರ್ವಪರಿಚಿತರಲ್ಲ. ಅವರು ವಿದ್ಯಾರ್ಥಿ ದೆಸೆಯಲ್ಲಿ (೧೯೬೦ರ ದಶಕ)...
by athreebook | Aug 15, 2020 | ಪುಸ್ತಕ ವಿಮರ್ಶೆ, ವ್ಯಕ್ತಿಚಿತ್ರಗಳು
ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ…) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ....
by athreebook | Aug 12, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೧೩) ಪ್ರಾಕೃತಿಕ ಭಾರತದ ಸೀಳೋಟ ಯೋಜನೆಯಲ್ಲಿ ಆರಂಭದ ೨೫-೪-೯೦ ಮತ್ತು ಕೊನೆಯ ೨೭-೫-೯೦ ದಿನಾಂಕಗಳನ್ನು ಖಚಿತವಾಗಿಯೇ ನಿಶ್ಚೈಸಿದ್ದೆ. ಕಾರಣ ಸರಳ – ಹುಬ್ಬಳ್ಳಿ, ಭೋಪಾಲ ಮುಂತಾದ ಸ್ಥಳಗಳಲ್ಲಿ ನಮ್ಮನ್ನು ಕಾದು ಕುಳಿತವರನ್ನು ನಿಗದಿತ ದಿನಕ್ಕೆ ಮುಟ್ಟದೇ ಅಗೌರವಿಸಬಾರದು. ಮತ್ತು...
by athreebook | Aug 9, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೧೨) ಕೇದಾರ ನಾಥದ ‘ವಿಜಯ’ಕ್ಕೆ ನಾನು ಅನುಭವಿಸಿದ ನೋವು ಹೆಚ್ಚೇ ಆಗಿತ್ತು. ಹಾಗಾಗಿ ಮರುದಿನದ ಬದರೀ ಯಾನದ ಯೋಚನೆಯನ್ನು ನಾನು ಮತ್ತು ದೇವಕಿ ಕೈ ಬಿಟ್ಟೆವು. ಸೋನ್ ಪ್ರಯಾಗಿನಿಂದ ಬದರಿಗೆ ಹೋಗಿ ಮರಳುವಲ್ಲಿ ಕವಲೂರಾಗಿ ಸಿಗುವ ಊರು ಕರ್ಣಪ್ರಯಾಗ್. ಅಲ್ಲಿ ನಮಗೆ ಎರಡು ದಿನದ ವಿಶ್ರಾಂತಿ, ಇತರರು...
by athreebook | Aug 7, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೧೧) ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ...
by athreebook | Aug 5, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೧೦) ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು...
by athreebook | Aug 4, 2020 | ಪರ್ವತಾರೋಹಣ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೯) ಕಾಗೆ ಹಾರಿದಂತೆ ಡೆಹ್ರಾಡೂನ್ – ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ – ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು...
by athreebook | Jul 28, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೮) ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ...
by athreebook | Jul 26, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೭) ‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ...
by athreebook | Jul 24, 2020 | ಪ್ರವಾಸ ಕಥನ, ಪ್ರಾಕೃತಿಕ ಭಾರತ ಸೀಳೋಟ
(ಪ್ರಾಕೃತಿಕ ಭಾರತ ಸೀಳೋಟ – ೬) ಬಳಲಿಕೆಯೋ ತಿನಿಸಿನ ಎಡವಟ್ಟೋ ರಾತ್ರಿ ದೇವಕಿ ಒಂದೆರಡು ಬಾರಿ ವಾಂತಿ ಮಾಡಿದ್ದಳು. ಧಾರಾಳ ನೀರು ಮತ್ತು ಗೆಳೆಯ ಡಾ| ಕೃಷ್ಣಮೋಹನ್ ಕಟ್ಟಿಕೊಟ್ಟಿದ್ದ ಪ್ರಥಮ ಚಿಕಿತ್ಸೆ ಕಟ್ಟಿನಿಂದ ಒಂದು ಗುಳಿಗೆಯಲ್ಲಿ ಸುಮಾರು ಸುಧಾರಿಸಿದಳು. ಹಾಗೆಂದು ಬೆಳಗ್ಗಿನ (೪-೫-೯೦) ನಮ್ಮ ದಿನಚರಿಗೇನೂ ಬದಲಾವಣೆ...