by athreebook | Apr 29, 2016 | ಅಶೋಕವನ, ಪ್ರವಾಸ ಕಥನ, ಬಿಸಿಲೆ
ಅಖಂಡ ಕೆರೆಮಣೆ ಧ್ಯಾನದ ಗೆಳೆಯ ವೆಂಕಟ್ರಮಣ ಉಪಾಧ್ಯ (ನೋಡಿ:ಉಪಾಧ್ಯ ಹೆರೆಮಣೆ ೨೦೧೫) ಆಶ್ಚರ್ಯಕರವಾಗಿ “ಬಿಸಿಲೆಗೆ ಹೋಪನಾ” ಅಂತ ಕರೆ ಕೊಟ್ಟ ಮೇಲೆ ಹೇಗೆ ಹೇಳಲಿ ಇಲ್ಲ? ಹಾಗೆಂದು ಒಪ್ಪಿಗೆ ಕೊಟ್ಟರೆ, ಅವರ `ಅಷ್ಟಗ್ರಹ ಕೂಟ’ದ ಹೊಂದಾಣಿಕೆಯಲ್ಲಿ ನಾನು ಅನುಮೋದಿಸಿದ ದಿನಗಳ ಕುರಿತು ಉಂಟು, ಇಲ್ಲಗಳ ಸಂತೆ ಮುಗಿದದ್ದೇ ಇಲ್ಲ! ಎಲ್ಲಾ...
by athreebook | Jul 20, 2015 | ಅಶೋಕವನ, ಕಪ್ಪೆ ಶಿಬಿರಗಳು, ಬಿಸಿಲೆ, ಸೈಕಲ್ ಸಾಹಸಗಳು
(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ) ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ “ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆ” ನನ್ನ ಸಮಾಧಾನ....
by athreebook | Mar 27, 2014 | ಅಶೋಕವನ, ಎತ್ತಿನ ಹೊಳೆ ಯೋಜನೆ, ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಬಿಸಿಲೆ, ವನ್ಯ ಸಂರಕ್ಷಣೆ
ಅಭಿವೃದ್ಧಿ ಎಂದರೆ ಇರುವುದನ್ನು ಹೆಚ್ಚಿಸುವುದು. ಆದರೆ ನಿಜನೆಲದ ಯಜಮಾನಿಕೆ ವಹಿಸಿದ (ಕೇಂದ್ರ ಅಥವಾ ರಾಜ್ಯ) ಸರಕಾರಗಳು ಯೋಜನೆಗಳನ್ನು ಹೊಸೆಯುವಾಗ ಇರುವುದು ಏನು ಮತ್ತು ಎಷ್ಟು ಎಂದು ತಿಳಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇರುವುದು ನಾಶವಾಗುತ್ತಿದೆ, ಬರುವುದು ಕ್ಷಣಿಕ ಮತ್ತು ದುರ್ಬಲವಾಗುತ್ತಿದೆ. ಆಡಳಿತ ಕೊಡಬೇಕಾದವರು...
by athreebook | Jul 18, 2013 | ಅಶೋಕವನ, ಎತ್ತಿನ ಹೊಳೆ ಯೋಜನೆ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ
[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ] “ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ...
by athreebook | Sep 13, 2012 | ಅಶೋಕವನ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ
(ಮಂಡೂಕೋಪಖ್ಯಾನದ ಎರಡನೇ ಮತ್ತು ಅಂತಿಮ ಭಾಗ) ಆಗಸ್ಟ್ ಇಪ್ಪತ್ನಾಲ್ಕರ ಅಪರಾತ್ರಿ ಎರಡು ಗಂಟೆಯ ಸುಮಾರಿಗೇ ಬೆಂಗಳೂರಿನಲ್ಲೊಂದು ಕ್ವಾಲಿಸ್ ನಗರದ ವಿವಿಧ ಮೂಲೆಗಳಿಗೆ ಓಡಾಡಿ ಐದಾರು ಬಿಸಿಲೆ ‘ಯಾತ್ರಿ’ಗಳನ್ನು ಸಂಗ್ರಹಿಸಲು ತೊಡಗಿತ್ತು. ಮೂರೂವರೆ ಗಂಟೆಯ ಸುಮಾರಿಗದು ನಗರ ಬಿಟ್ಟದ್ದೂ ಆಗಿತ್ತು. ಹಾಗೇ ಇತ್ತ ಮಂಗಳೂರಿನಲ್ಲೊಂದು ಟೆಂಪೋ...
by athreebook | Sep 6, 2012 | ಅಶೋಕವನ, ಎತ್ತಿನ ಹೊಳೆ ಯೋಜನೆ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ…” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ)...