by athreebook | Jul 3, 2014 | ಕುಮಾರ ಪರ್ವತ, ಪರ್ವತಾರೋಹಣ, ಪುಸ್ತಕ ವಿಮರ್ಶೆ, ಪುಸ್ತಕೋದ್ಯಮ, ಪ್ರವಾಸ ಕಥನ
ಕಳೆದ ತಿಂಗಳು ನನಗೊಂದು ಅನಿರೀಕ್ಷಿತ ದೂರವಾಣಿ ಕರೆ, “ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ನಿಮ್ಮ ಪುಸ್ತಕ – ಕುಮಾರ ಪರ್ವತದ ಸುತ್ತ ಮುತ್ತ, ಇದು ನಮ್ಮ ಸಂಘದ ೨೦೧೩ರ ಸಾಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನಕ್ಕೆ ಆಯ್ಕೆಯಾಗಿದೆ, ಅಭಿನಂದನೆಗಳು. ಜುಲೈ ಐದಕ್ಕೆ ವಿತರಣಾ ಸಮಾರಂಭ. ಅವಶ್ಯ...
by athreebook | Apr 24, 2014 | ಚಕ್ರವರ್ತಿಗಳು, ಪರ್ವತಾರೋಹಣ, ಪ್ರವಾಸ ಕಥನ
ಚಕ್ರವರ್ತಿಗಳು – ಸುತ್ತು ಇಪ್ಪತ್ಮೂರು ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೫ “ನಿಮ್ಮನ್ನೆಲ್ಲೋ ಕಂಡ ಹಾಗಿದೆಯಲ್ಲಾ” ಎಂಬ ದೇಶಾವರಿ ಪಾತಾಳಗರಡಿ ಬಿಟ್ಟು ನಿಮ್ಮ ಪ್ರವರ ಬಿಚ್ಚಿಸುವಲ್ಲಿ ನಿಸ್ಸೀಮ ಪರಮೇಶ್ವರ ಭಟ್ಟರು – ನಮ್ಮ ಆತಿಥೇಯರು! ವಾಸ್ತವದಲ್ಲಿ ನಾಗೋಡಿ ಕೊಲ್ಲೂರಿಗೂ ಆಚೆ ಭಟ್ಟರು ಹೋದವರೇ ಅಲ್ಲ. ಮತ್ತೆ...
by athreebook | Mar 13, 2014 | ಚಕ್ರವರ್ತಿಗಳು, ಪರ್ವತಾರೋಹಣ, ಪ್ರವಾಸ ಕಥನ
ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ನಾಲ್ಕು ಚಕ್ರವರ್ತಿಗಳು – ಸುತ್ತು ಹದಿನೇಳು ಕಲ್ಲು ಚೂರುಗಳ ಮೇಲಿನ ಉರುಡು, ಹಾವಂದಾರಿಯ ಸವಾರಿಸುಖ – ಅನುಭವಿಸಿದವನೇ ಬಲ್ಲ ಬೆಲ್ಲದ ಸವಿ!! ಸಡಿಲ ಕಲ್ಲುಗಳು ಮಗುಚಿದವು, ಪುಟ್ಟ ಕಲ್ಲುಗಳು ಆಚೀಚೆ ಸಿಡಿದು ಸರಿದು ಸಂದುಳಿಸಿ ಅಸ್ಥಿರತೆಯುಂಟು ಮಾಡಿ ಚಕ್ರ ನೆಲ ಕಚ್ಚಿ...
by athreebook | Jun 20, 2013 | ಕೊಡಚಾದ್ರಿ, ಚಕ್ರವರ್ತಿಗಳು, ಪರ್ವತಾರೋಹಣ, ಪ್ರವಾಸ ಕಥನ
(ಚಕ್ರವರ್ತಿಗಳು ಸುತ್ತು ಹನ್ನೊಂದು) ಕೊ ಎಂದರೆ ಕೈಕೊಟ್ಟ ಬಸ್ಸು – ಒಂದು [“ಬೆಟ್ಟ ಹತ್ತಬೇಕು ಏಕೆ?” “ಅದು ಅಲ್ಲಿ ಇರುವುದರಿಂದ! ನೀನೇರಬಲ್ಲೆಯಾ ನಾನೇರುವೆತ್ತರಕೆಂಬ ಸವಾಲು ಎಸೆದಿರುವುದರಿಂದ! ಪೃಥ್ವಿಯ ಮಾನದಂಡವಾಗಿ ಸೆಟೆದು ನಿಂತಿರುವುದರಿಂದ! ನಮ್ಮ ಕೆಚ್ಚು ಧೃತಿಗಳಿಗೆ ನಿಕಷವಾಗಿ ಒದಗುವುದರಿಂದ!”- ಸಂಪಾದಕೀಯ...
by athreebook | Jan 24, 2013 | ಜಲಪಾತಗಳು, ಪರ್ವತಾರೋಹಣ
ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ ಸೋಮೇಶ್ವರ ಕಾಡು ನುಗ್ಗಿತು. ಕುಗ್ರಾಮ ಮೂಲೆಯ ತಣ್ಣೀರಬೈಲು (ಸುಮಾರು ನಾಲ್ಕೂವರೆ ಕಿಮೀ) ಎಂಬ ಕೊನೆಯ ಒಕ್ಕಲು ಮನೆಯವರೆಗೆ ಹಳ್ಳಿಯ ಸಾಮಾನ್ಯ ಮಣ್ಣುದಾರಿಯಿತ್ತು. ಅನಂತರ ಸುಮಾರು ಒಂದೂವರೆ ಕಿಮೀಯಷ್ಟು ಕೂಪು...
by athreebook | Jan 17, 2013 | ಜಲಪಾತಗಳು, ಪರ್ವತಾರೋಹಣ
ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು. ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ...