by athreebook | Dec 20, 2018 | ಪ್ರವಾಸ ಕಥನ, ವನ್ಯ ಸಂರಕ್ಷಣೆ, ಸೈಕಲ್ ಸಾಹಸಗಳು
ಹೊಸ್ತಿಲಲ್ಲಿ ಮುಗ್ಗರಿಸಿದವ! ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ – ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ “ಸೈಕಲ್ಲೇರಿ ನಾನು ನೀವು ವನಕೆ...
by athreebook | Aug 28, 2018 | ಎತ್ತಿನ ಹೊಳೆ ಯೋಜನೆ, ಪ್ರವಾಸ ಕಥನ, ಬಿಸಿಲೆ, ವನ್ಯ ಸಂರಕ್ಷಣೆ
ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ ಪ್ರಾಥಮಿಕ ರಕ್ಷಣೆ ಮತ್ತು ಪೋಷಣೆಗೆ ಸ್ವಯಂಸೇವಕರು ತೊಡಗಿಸಿಕೊಂಡದ್ದು ಹೃದಸ್ಪರ್ಷಿಯಾಗಿತ್ತು. ಅದರಲ್ಲೂ ಮುಂದುವರಿದಂತೆ ನಿರಾಶ್ರಿತರ ಪೂರ್ವಸ್ಥಿತಿಸ್ಥಾಪನೆಯಲ್ಲೂ ಪ್ರಜಾಪ್ರತಿನಿಧಿಗಳು ಮತ್ತು ಸರಕಾರ ಬಹ್ವಂಶ...
by athreebook | Jun 28, 2018 | ಕಪ್ಪೆ ಶಿಬಿರಗಳು, ಪ್ರವಾಸ ಕಥನ, ವನ್ಯ ಸಂರಕ್ಷಣೆ
ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆಗಿದ್ದ ಜೀವನ ಜತೆಗಾತಿ ದೇವಕಿಗೆ “ನಿಟ್ಟೆ-ಬಿಟ್ಟೆ, ಕಾರುಕಳ್ಳ, ಗೋಳಿಬಜೆ…” ನನ್ನ ಮಾಮೂಲೀ ಹಾಸ್ಯ ಉದ್ಗಾರಗಳು. ಅವನ್ನು ಕಳೆದು, ಕುದುರೆಮುಖ...
by athreebook | Apr 1, 2018 | ಅಭಯಾರಣ್ಯ, ವನ್ಯ ಸಂರಕ್ಷಣೆ
ಕಾಡುಬಿದ್ದ ಕೃಷಿಭೂಮಿಗಳನ್ನು ಕಾಡಿಗೇ ಮರಳಿಸುವ ಯೋಜನೆಯ ಪ್ರಥಮ ಹೆಜ್ಜೆ ನಮ್ಮ `ಅಶೋಕವನ’ದ್ದು. (ಡಾ|ಕೃಷ್ಣಮೋಹನ್ ಮತ್ತು ನಾನು ಸ್ವಂತ ಹಣದಲ್ಲಿ ಕೊಂಡ ನೆಲ. ಹೆಚ್ಚಿನ ವಿವರಗಳಿಗೆ ನೋಡಿ: ಅಶೋಕವನ) ನನ್ನ ಪುಸ್ತಕದಂಗಡಿಯನ್ನು ಮುಚ್ಚಿದ ಮೇಲೆ, ಅದೇ ಬಿಸಿಲೆ ವಲಯದಲ್ಲಿ ಹೀಗೇ ಹಡಿಲುಬಿದ್ದ ಇನ್ನಷ್ಟು ಖಾಸಗಿ ಭೂಮಿಗಳನ್ನು, ಇನ್ನಷ್ಟು...
by athreebook | Oct 4, 2017 | ಅಶೋಕವನ, ಕಪ್ಪೆ ಶಿಬಿರಗಳು, ದಾಖಲೀಕರಣ, ಬಿಸಿಲೆ, ವನ್ಯ ಸಂರಕ್ಷಣೆ
ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ ಹೆಜ್ಜೆಯ ಜೀವ ಕಲಾಪದ ದಾಖಲೆ ಮಾತ್ರ ಆಯ್ತು. ವರ್ಷದ ಇತರ ಋತುಮಾನಗಳಲ್ಲಿ ಇದೇ ಕಪ್ಪೆಗಳ ವರ್ತನೆ ಏನು? ಅದಕ್ಕೂ ಮುಖ್ಯವಾಗಿ ಒಟ್ಟಾರೆ ಪ್ರಾಣಿಪರಿಸರವನ್ನು ಗಾಢವಾಗಿ ಪ್ರಭಾವಿಸುವ ಸಸ್ಯಪರಿಸರದ ತಿಳುವಳಿಕೆ...
by athreebook | Jun 20, 2017 | ಅಶೋಕವನ, ಕಪ್ಪೆ ಶಿಬಿರಗಳು, ಕುಮಾರ ಪರ್ವತ, ಬಿಸಿಲೆ, ವನ್ಯ ಸಂರಕ್ಷಣೆ
“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ….” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ...