by athreebook | Feb 27, 2021 | ಅಶೋಕವನ, ಪ್ರವಾಸ ಕಥನ, ಬಿಸಿಲೆ
[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ – ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ. (ಬಿಸಿಲೆಯಲ್ಲಿ ಹೊಸಬೆಳಕು) ಈಗ ಕಲ್ಪನೆಯು ರೂಪ ಪಡೆದು ‘ಮೊದಲ ಅಳು’ ಕೊಡುವವರೆಗಿನ ವಿಕಾಸದ ಕತೆ] ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ...
by athreebook | Feb 2, 2021 | ಅಶೋಕವನ, ಬಿಸಿಲೆ
ಸ್ವಾಗತ: “ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು...
by athreebook | Nov 25, 2020 | ಸೈಕಲ್ ದಿನಚರಿ, ಸೈಕಲ್ ಸಾಹಸಗಳು
ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ – ಬಜ್ಪೆ – (ಚಕ್ರೇಶ್ವರ ಪರೀಕ್ಷಿತ ೨೪ – ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ) ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ...
by athreebook | Nov 10, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
[‘ಭಾರತ ಅ-ಪೂರ್ವ ಕರಾವಳಿಯೋಟ’ – ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು ಬರೆದಿದ್ದೆ. ಅದರಲ್ಲಿ ನಾವು ಭೇಟಿ ಕೊಟ್ಟ ಪ್ರಾಕೃತಿಕ ವೈಶಿಷ್ಟ್ಯಗಳನ್ನಷ್ಟೇ ಲೆಕ್ಕಕ್ಕೆ ಹಿಡಿದು, ಸಂಬಂಧಿಸಿದ ಇಲಾಖೆಗಳಿಗೆ ಹೀಗೊಂದು ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸುವ ಕರ್ತವ್ಯವನ್ನು ನಿರ್ವಹಿಸಿದ್ದೆ....
by athreebook | Nov 6, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೬) ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ...
by athreebook | Oct 30, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೫) ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ “…ವಿಜಯವಾಡಾ ಇಲ್ಲಿಂದ ೬೪ ಕಿಮೀ ಮಾತ್ರ. ಅಲ್ಲಿ ಕಲ್ಕೂರರ ಇನ್ನೋರ್ವ ಗೆಳೆಯರ ಹೋಟೆಲ್ ನಮ್ಮನ್ನು ಕಾದಿದ್ದಂತೇ ನಾವಿಲ್ಲೇ ಉಳಿಯಬೇಕಾಯ್ತು….. ಒರಿಸ್ಸಾಕ್ಕೆ ಬಂದ ಮೇಲೆ ನಮ್ಮೂರಿನದೇ ವಾತಾವರಣ – ಬೆವರು...