by athreebook | Aug 16, 2012 | ಗೋವಾ, ಜಲಪಾತಗಳು, ದೂದ್ ಸಾಗರ್, ಪ್ರವಾಸ ಕಥನ
ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ ಇಟ್ಟುಕೊಂಡಿದ್ದರು. ಇವರಿಗೆ ‘ಬಾಟಲಿ-ಪುತ್ರ’ರಿಂದ ಒಳ್ಳೆಯ ಕರ (ಅಥವಾ ಮೇಲ್ಸಂಪಾದನೆ) ಸಂಗ್ರಹವಾಗುತ್ತದಂತೆ. ಕುಡಿಯುವ ಯೋಗ್ಯತೆ ಇಲ್ಲದ ನಮ್ಮನ್ನವರು ಕೀಳ್ಗಣ್ಣಲ್ಲಿ ಕಂಡರು. ಆದರೆ ಅಲ್ಲಿ ಸಹಜವಾಗಿ ವಿಕಸಿಸಿದ್ದ ಧಾಬಾ ಮಾತ್ರ...
by athreebook | Aug 9, 2012 | ಗೋವಾ, ಜಲಪಾತಗಳು, ದೂದ್ ಸಾಗರ್, ಪ್ರವಾಸ ಕಥನ
ಯೋಜನಾವಧಿಯಲ್ಲಿ ನೆನಪಿನ ಬೆರಗಿಗೆ (ನನ್ನದೇ) ಪುಸ್ತಕದಂಗಡಿಯಲ್ಲಿ ನಿಜದ ದಾರಿ ಹುಡುಕುತ್ತ ಸುಮಾರು ಭೂಪಟ, ಪ್ರವಾಸ ಕಥನದ ಪುಸ್ತಕಗಳನ್ನು ಮಗುಚಿ ಹಾಕಿದ್ದೆ. ಇಪ್ಪತ್ನಾಲ್ಕು ವರ್ಷದ ಮೇಲೂ ದೂದ್‌ಸಾಗರ್ ಬಳಿ ರೈಲ್ವೇ ಹಳಿ ಮಾತ್ರ ಕಾಣುತ್ತಿತ್ತು. ಅಸ್ಪಷ್ಟ ದಾರಿ ಸೂಚಕ ಗೀಟುಗಳು ದಕ್ಷಿಣದಲ್ಲಿ ಕಾಲೆಮ್‌ವರೆಗೂ ಉತ್ತರದಲ್ಲಿ...
by athreebook | Jul 19, 2012 | ಗೋವಾ, ಜಲಪಾತಗಳು, ದೂದ್ ಸಾಗರ್, ಪ್ರವಾಸ ಕಥನ
ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ ಬೆಟ್ಟ ಸಾಲಿನ ನೆತ್ತಿಯಿಂದ ಹಾಲಹೊಳೆ, ಹೌದು ಹೆಸರೇ ಹಾಗೆ – ದೂದ್ ಸಾಗರ್, ಅಕ್ಷರಶಃ ನೊರೆಯುಬ್ಬಿಸಿ ಧುಮುಗುಡುತ್ತಿತ್ತು. ಆ ಎತ್ತರದಿಂದ ನಮ್ಮ ಪಾದಮೂಲದವರೆಗೆ ಮತ್ತೂ ಕೆಳಕ್ಕೆ ಮಿಂದ ಬಂಡೆಯನ್ನೆ...
by athreebook | Jul 12, 2012 | ಪರ್ವತಾರೋಹಣ, ವನ್ಯ ಸಂರಕ್ಷಣೆ, ವಾಲಿಕುಂಜ
“ಉರ್ಣಿಗೆ ಹೋಗ್ತೀರಾ?” ನಿರೇನ್ ಕೇಳಿದರು. ನನ್ನ ಅಂಗಡಿಯ ‘ಲೌಕಿಕ ಬಂಧನಗಳು’ ಪೂರ್ಣ ಕಳಚದೇ ನನ್ನ ‘ಬಿಸಿಲೆಯ ವನವಾಸ’ ಸಮರ್ಪಕವಾಗದೆಂದು ಚಡಪಡಿಸುತ್ತಿದ್ದೆ. ಅಷ್ಟರಲ್ಲಿ ಮಳೆಗಾಲದ ನಿರೀಕ್ಷೆಗಳು ಸೇರಿ ಮಲೆ (ಸುತ್ತುವ) ಕಾಲಕ್ಕೆ ಇನ್ನು ಕನಿಷ್ಠ ಮೂರು ತಿಂಗಳ ವಿರಾಮ ಎನ್ನುವ ಸ್ಥಿತಿಗೆ ಮನಸ್ಸು ಮುದುಡುತ್ತಿತ್ತು. ವಾಲಿಕುಂಜದ...
by athreebook | Jul 5, 2012 | ಪರ್ವತಾರೋಹಣ, ವನ್ಯ ಸಂರಕ್ಷಣೆ, ವಾಲಿಕುಂಜ
ಕೇದಿಗೆ ಅರವಿಂದ ರಾವ್ ಕಬ್ಬಿನಾಲೆಯ ಅಳಿಯ. ಮತ್ತು ಅವರ ಅಲ್ಲಿನ ಬಳಗ ವಾಲಿಕುಂಜ ವಲಯದ ಘಟ್ಟಶ್ರೇಣಿಯನ್ನುತ್ತರಿಸಿ ಕೆರೆಕಟ್ಟೆವರೆಗೆ ನಡೆಸಿದ ಚಾರಣವನ್ನೂ ಈ ಹಿಂದೆಯೇ ನಿಮಗೆ ತಿಳಿಸಿದ್ದೇನೆ. ಅರವಿಂದ್ ೨೬-೧-೯೧ರ ಗಣರಾಜ್ಯೋತ್ಸವದ ರಜಾದಿನಕ್ಕೆ ಹಿಂಬಾಲಿಸುವ ಆದಿತ್ಯವಾರವನ್ನು ಸೇರಿಸಿ ಅಲ್ಲಿನವರೊಡನೆ ತನ್ನ ಆರೋಹಣದ ಮಿತ್ರರನ್ನೂ...
by athreebook | Jun 28, 2012 | ಪರ್ವತಾರೋಹಣ, ವನ್ಯ ಸಂರಕ್ಷಣೆ, ವಾಲಿಕುಂಜ
“ವಾಲೀ ಬಾ ಯುದ್ಧಕ್ಕೆ. . .” ರಣಘೋಷದೊಡನೆ ಎಷ್ಟು ಬಾರಿ ಸುಗ್ರೀವ ಏರಿ ಹೋದನೋ ಅಷ್ಟೂ ಸೋಲಾಗಿತ್ತು ಅವನಿಗೆ. ಆದರೆ ತ್ರಾಣದಲ್ಲಿ ವಾಲಿಯ ಗಜಸಹಸ್ರವೇನು ಶತಕೋಟಿಯನ್ನೂ ಮೀರುವ, ಆಯುಷ್ಯದಲ್ಲಿ ತ್ರೇತಾಯುಗದ ಕಪಿಕುಲ ಶ್ರೇಷ್ಠನನ್ನು ಯುಗ ನಾಲ್ಕರಿಂದ ಹಿಂದಿಕ್ಕಿದ ಈ ವಾಲಿಯ ಮೇಲೆ ನಾನು ಏರಿಹೋದ ಅಷ್ಟೂ ಬಾರಿ ನನಗೆ ಸೋಲಾಗಿಲ್ಲ....