by athreebook | Nov 8, 2012 | ಚಕ್ರವರ್ತಿಗಳು, ಪರ್ವತಾರೋಹಣ
ಚಕ್ರವರ್ತಿಗಳು ಐದನೇ ಸುತ್ತು “ಪಾಣೇರು ಸಂಕ ಬ್ರಿಟಿಷರು ಕಟ್ಟಿಸಿದ್ದು. ನೂರಕ್ಕೂ ಮಿಕ್ಕು ವರ್ಷ ಹಳ್ತು. ಅದರ ಉಕ್ಕಿನ ತೊಲೆಗಳೇನು, ರಚನೆಯ ಕಥೆಗಳೆಷ್ಟು, ಅದು ಕಂಡ ಪ್ರವಾಹಗಳು ಎಂಥವು, ಅಪಘಾತಗಳ ವೈವಿಧ್ಯ, ವಾಹನ ಸಾಂದ್ರತೆ, ಜಗಳಗಳ ವಿವರ…” ತಡಿ.. ತಡೀರಿ! ಈ ಪುರಾಣ ಎಷ್ಟೋ ಓದಿದ್ದೇನೆ, ಕೊರತೆಯಾದರೆ ಎಲ್ಲಾದರೂ...
by athreebook | Oct 18, 2012 | ಇತರ ಸಾಹಸಗಳು, ಚಕ್ರವರ್ತಿಗಳು
(ಚಕ್ರವರ್ತಿಗಳು – ನಾಲ್ಕನೆಯ ಸುತ್ತು) ಹೊಸ ದಾರಿಯೊಂದರ ಅನಾವರಣಕ್ಕೆಂದೇ ಅದೊಂದು ಆದಿತ್ಯವಾರ (೨೪-೨-೧೯೮೫) ನಮ್ಮದೊಂದು ತಂಡ ಹೊರಟಿತ್ತು. ಮಂಗಳೂರಿನಿಂದ ಯೆಜ್ದಿಯಲ್ಲಿ ನಾನು ಮತ್ತು (ಮಂಗಳೂರು ವಿವಿನಿಲಯದ ಗಣಿತ ಪ್ರೊ|) ಸಂಪತ್ಕುಮಾರ್, ರಾಜದೂತದಲ್ಲಿ ಚಾರ್ಲ್ಸ್, ಬಜಾಜ್ ಸ್ಕೂಟರ್‌ನಲ್ಲಿ ರಾಮಮೋಹನ ಮತ್ತು ಇಲ್ಯಾಸ್....
by athreebook | Oct 4, 2012 | ಚಕ್ರವರ್ತಿಗಳು, ಜಲಪಾತಗಳು, ಪ್ರವಾಸ ಕಥನ
(ಚಕ್ರವರ್ತಿಗಳು ಮೂರನೆಯ ಸುತ್ತು – ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ) ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾಂತ ಆಗುಂಬೆಪೇಟೆಗೆ ಒನಕೆ ಅಬ್ಬಿ ಕವಲಿನಿಂದೇ ಒಂದೇ ಕಿಮೀ ಅಂತರ. ವಾತಾವರಣಕ್ಕೆ ಸಹಜವಾಗಿ ಮುದುರಿ ಕುಳಿತ ಕೆಲವು ಮನೆಗಳ ಸಾಲು, ನಡುವೆ ಒಂದೆರಡು ಅಂಗಡಿಯೇ ಊರು. [ಇಂದು ಆಗುಂಬೆಯ ಚಹರೆ ತೀವ್ರವಾಗಿ...
by athreebook | Sep 20, 2012 | ಚಕ್ರವರ್ತಿಗಳು, ಜಲಪಾತಗಳು, ಪ್ರವಾಸ ಕಥನ
(ಚಕ್ರವರ್ತಿಗಳು ಎರಡನೆಯ ಸುತ್ತು – ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ) ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು ಇಲ್ಲಿ ಭೇಟಿಯಾಗುತ್ತಾರೆ’ ಎನ್ನುವ ಸಣ್ಣ ನಾಮಫಲಕ ನನ್ನಂಗಡಿಯ ಹೊರ ಮೂಲೆಯಲ್ಲಿ ತುಂಬಾ ವರ್ಷಗಳವರೆಗೆ ಶೋಭಿಸುತ್ತಿತ್ತು. ಅದನ್ನು ನೋಡಿಯೇ ಪರ್ವತಾರೋಹಣದ ಕುರಿತು ವಿಚಾರಿಸಿದವರು,...
by athreebook | Sep 13, 2012 | ಅಶೋಕವನ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ
(ಮಂಡೂಕೋಪಖ್ಯಾನದ ಎರಡನೇ ಮತ್ತು ಅಂತಿಮ ಭಾಗ) ಆಗಸ್ಟ್ ಇಪ್ಪತ್ನಾಲ್ಕರ ಅಪರಾತ್ರಿ ಎರಡು ಗಂಟೆಯ ಸುಮಾರಿಗೇ ಬೆಂಗಳೂರಿನಲ್ಲೊಂದು ಕ್ವಾಲಿಸ್ ನಗರದ ವಿವಿಧ ಮೂಲೆಗಳಿಗೆ ಓಡಾಡಿ ಐದಾರು ಬಿಸಿಲೆ ‘ಯಾತ್ರಿ’ಗಳನ್ನು ಸಂಗ್ರಹಿಸಲು ತೊಡಗಿತ್ತು. ಮೂರೂವರೆ ಗಂಟೆಯ ಸುಮಾರಿಗದು ನಗರ ಬಿಟ್ಟದ್ದೂ ಆಗಿತ್ತು. ಹಾಗೇ ಇತ್ತ ಮಂಗಳೂರಿನಲ್ಲೊಂದು ಟೆಂಪೋ...
by athreebook | Sep 6, 2012 | ಅಶೋಕವನ, ಎತ್ತಿನ ಹೊಳೆ ಯೋಜನೆ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ…” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ)...