ಮೆಟ್ರೋದಲ್ಲಿ ಕಾಣೆಯಾದ ಮೂವರು!
ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು.ಮತ್ತೆ ನಿರ್ವಿಘ್ನವಾಗಿ…. ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ. ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ.
ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ - ಒಡಿಶಾದ ಒಡಲೊಳಗೆ (೧) ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ...
ಬಿಸಿಲೆಯಲ್ಲಿ ಪ್ರೇಮ ಪರ್ವ
“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ....” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು...
ನಾಳೆ ಇನ್ನೂ ಇದೆ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೪೨ ಇನ್ನು ಹೇಳುವುದು ಹೆಚ್ಚೇನೂ...
ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೪೧ ೨೦೧೬ ಆಗಸ್ಟ್ ೨೮, ನನ್ನ ಜೇನ್ ಏರ್...
ಸುದರ್ಶನೋಪಖ್ಯಾನ
‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು...
ಸಹಕಾರದಲ್ಲಿ ಒಂದು ಪ್ರಯೋಗ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೊಂದು ಅಧ್ಯಾಯ ಇಪ್ಪತ್ತಾರು ಮಡಿಕೇರಿಯ ಸರಕಾರೀ ಕಾಲೇಜು...
ಸುಬ್ಬಪ್ಪನ ದಯೆ
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು...
ಬಾಳಿಗೊದಗಿದ ಬೆಳಕು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತು ಅಧ್ಯಾಯ ಇಪ್ಪತ್ಮೂರು ಅಂದು ನಾನೊಬ್ಬ ಅತ್ಯಂತ ‘ಅರ್ಹ...
ಕೊಡಚಾದ್ರಿಯ ಸುತ್ತ ಮುತ್ತ
(ಚಕ್ರವರ್ತಿಗಳು ಸುತ್ತು ಹನ್ನೊಂದು) ಕೊ ಎಂದರೆ ಕೈಕೊಟ್ಟ ಬಸ್ಸು - ಒಂದು [“ಬೆಟ್ಟ ಹತ್ತಬೇಕು ಏಕೆ?” “ಅದು ಅಲ್ಲಿ...
ಕಡಲ ತಡಿಯ ಕೊಡಲಿಗೊರವರೊಡನೆ ಕಂಡ ಬೆಡಗು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು ಅಧ್ಯಾಯ ಇಪ್ಪತ್ತೊಂದು ನನ್ನ ಕ್ರಿಶ್ಚಿಯನ್ ಕಾಲೇಜ್...
ಕಥನಾಂತೇ ಗೋವಿಂದಾನೆ ಗೋವಿಂದಾ…
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಆರು) ತಿರುಪತಿಗೆ ನಾನು, ದೇವಕಿಯಾದರೋ ಮುಕ್ತ ಮನಸ್ಸಿನ ಕುತೂಹಲ ಒಂದನ್ನೇ...
ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ್ಸ್)...
ಇಂದು ಎನಗೆ ಶ್ರೀ ಗೋವಿಂದಾ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಐದು) ಹೊಸಬರಿಗಾಗಿ ತಿರುಮಲದ ದೇವದರ್ಶನದ ಕುರಿತು ಒಂದೆರಡು ಪೀಠಿಕೆ ಮಾತು...
ಚಂದ್ರನ ನೈಸರ್ಗಿಕ ಪರಿಸ್ಥಿತಿ
(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ) ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ...
ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು) ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ...
ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ
ಮಲೆಗಳಲ್ಲಿ ಮದುಮಗಳು - ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು...
















I don't think the title of your article matches the content lol. Just kidding, mainly because I had some doubts…