ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್

ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್

“ದೋಣಿ ಸಾಗಲಿ ಮುಂದೆ ಹೋಗಲಿ, ೨೦೧೮ ಸೇರಲಿ…..” ಹಾಡುತ್ತ ಮೊನ್ನೆ (೩೧-೧೨-೨೦೧೭) ಮೂರು ಕಯಾಕ್‍ಗಳಲ್ಲಿ (ಫೈಬರ್ ಗ್ಲಾಸಿನ ಎರಡು ಪದರದ, ತೆಪ್ಪದಂಥ ದೋಣಿ) ನಾವು ಆರು ಮಂದಿ (ಪ್ರವೀಣ್, ಯಶಸ್, ಅನಿಲ್ ಶೇಟ್, ಶಿವಾನಂದ್, ದೇವಕಿ ಮತ್ತು ನಾನು) ಉಚ್ಚಿಲದ ತ್ರಿವೇಣಿ ಸಂಗಮದಲ್ಲಿ ಮನಸೋಯಿಚ್ಛೆ ವಿಹರಿಸಿ...
ಹಳೆಯಂಗಡಿಯ ಹೊಸ ಸಾಹಸ – ಸೈಕಲ್ ಸಂಘ

ಹಳೆಯಂಗಡಿಯ ಹೊಸ ಸಾಹಸ – ಸೈಕಲ್ ಸಂಘ

ಮಂಗಳೂರು ಕರಾವಳಿಯ ಚಳಿಗಾಲ ನಿಜದಲ್ಲಿ ಸೈಕಲ್ ಚಟುವಟಿಕೆಗಳಿಗೆ ಬಹಳ ಉತ್ತಮ ಕಾಲ. ಸಹಜವಾಗಿ ಅಂದು (೩೦-೧೨-೨೦೧೭) ಬೆಳಿಗ್ಗೆ ಎಂಟಕ್ಕೆ ಸೈಕಲ್ ಉಡುಪಿ ದಾರಿಯಲ್ಲಿ ಪೆಡಲೊತ್ತತೊಡಗಿದವ ಸುಮಾರು ೨೦ ಕಿಮೀ ಸವಾರಿಯನ್ನು ಒಂಬತ್ತಕ್ಕೆ ಸರಿಯಾಗಿ ವಿರಮಿಸಿದ ಸ್ಥಳ – ಹಳೆಯಂಗಡಿ ಸಪಪೂ ಕಾಲೇಜು ವಠಾರ. ಅಲ್ಲಿ ಮುಕ್ತ ವೇದಿಕೆಯ ಮೇಲೆ...
ಮೈಸೂರು ಸುತ್ತು, ನೆನಪನ್ನು ಹೊತ್ತು

ಮೈಸೂರು ಸುತ್ತು, ನೆನಪನ್ನು ಹೊತ್ತು

(ಚಕ್ರೇಶ್ವರ ಪರೀಕ್ಷಿತ ೧೪) ಮಂಗಳೂರಲ್ಲ, ಮೈಸೂರು ಯಾಕೆ? ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ...
ಕಬಿನಿಯಲ್ಲೊಂದು ಅಮೃತಮಥನ

ಕಬಿನಿಯಲ್ಲೊಂದು ಅಮೃತಮಥನ

ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು...
ಸೈಕಲ್ ಆಗಬೇಕು ಸರಳತೆಯ ಸಂಕೇತ

ಸೈಕಲ್ ಆಗಬೇಕು ಸರಳತೆಯ ಸಂಕೇತ

(ಚಕ್ರೇಶ್ವರ ಪರೀಕ್ಷಿತ ೧೨ ಅಥವಾ ದೈನಂದಿನ ಸೈಕಲ್ ಸರ್ಕೀಟಿನ ಹನ್ನೆರಡನೇ ಸಂಗ್ರಹ) ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ,...