ದಿಡುಪೆ ದುರಂತದ ಪ್ರತ್ಯಕ್ಷದರ್ಶನ

ದಿಡುಪೆ ದುರಂತದ ಪ್ರತ್ಯಕ್ಷದರ್ಶನ

ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ – ಮುಕ್ಕಾಲು ಗಂಟೆಯಷ್ಟೇ ಬಂತು – ಮೇಘಸ್ಫೋಟದಂಥ ಮಳೆ. ಚಾರ್ಮಾಡಿಯಿಂದ ದಿಡುಪೆಯವರೆಗಿನ ವಲಯಕ್ಕಷ್ಟೇ ಮಿತಿಗೊಂಡ ಬಾನಬೋಗುಣಿ ಕವುಚಿದಂತಹ ಈ ನೀರು ನಡೆಸಿದ ಉತ್ಪಾತಗಳು ಸಾಮಾನ್ಯ ಲೆಕ್ಕಕ್ಕೆ ಸಿಗುವಂತದ್ದಲ್ಲ. ಅದರ ಸಣ್ಣ ನೋಟವಾದರೂ ನಮಗೊಂದು...
ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ

ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ

ಕೃಷ್ಣಪ್ರಕಾಶ ಉಳಿತ್ತಾಯರ ಮನೆ – ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ ಹಲವು ಸಾಧನಾಪಥಗಳಿರುವ ಉಳಾಯಿಬೆಟ್ಟು, ಪೆರ್ಮಂಕಿಯಲ್ಲಿದೆ. ಇದನ್ನು ನಾನು ಐದು ತಿಂಗಳ ಹಿಂದೆ ಸೈಕಲ್ ಸರ್ಕೀಟಿನಲ್ಲಿ ಹುಡುಕಿ ಹಿಡಿದದ್ದು ನಿಮಗೆ ತಿಳಿದೇ ಇದೆ (ಫೇಸ್ ಬುಕ್: ೧೭-೩-೧೯, ಸೈಕಲ್ ಸರ್ಕೀಟ್...
ಅವತರಿಸಿದ ಗೌರೀಶಂಕರ!

ಅವತರಿಸಿದ ಗೌರೀಶಂಕರ!

ಧಾಂ ಧೂಂ ಸುಂಟರಗಾಳಿ ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ ಅಬ್ಬರಸಂಗೀತ ನಮ್ಮ ನಿದ್ರೆಗೆಡಿಸಿತು. ನೇರ ಹಿತ್ತಿಲಿನಲ್ಲಿ ಬರಲಿದ್ದ ವಸತಿಸಮೂಹದ ಜಿಂಕ್ ಶೀಟ್ ಗೋಡೆ ರೋಮಾಂಚನದಲ್ಲಿ ಗಲಗಲಿಸಿತು, ರೆಂಬೆಕೊಂಬೆಗಳು ಅದರ ಬೆನ್ನ ಚಪ್ಪರಿಸಿ ಕಣಕಣಿಸಿದವು. ನಿಗೂಢತೆ...
ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ

ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ

‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್ ರಾಮರಾಜ ಮೊನ್ನೆ ಆದಿತ್ಯವಾರ ಸೈಕಲ್ಲಿನಲ್ಲಿ ಕೇವಲ ಬಿಸಿಲೆ ಘಾಟಿ ಏರುವ ಯೋಜನೆ ಸಂಘಟಿಸಿದ್ದರು. ಹಾಗೆ ಬೆಳೀಗ್ಗೆ ಮಂಗಳೂರಿನಿಂದ ನಾಲ್ಕು, ಉಡುಪಿಯಿಂದ ಒಂದು ಕಾರನ್ನೇರಿ ಹನ್ನೊಂದು ಸೈಕಲ್ ಮತ್ತು ಸವಾರರು...
ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು

ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು

ಎ.ಪಿ. ಗೌರೀಶಂಕರ ಇನ್ನಿಲ್ಲ – ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ ಸೋದರ ಮಾವ ಎ.ಪಿ. ಗೌರೀಶಂಕರ (ಶ್ರೀಶೈಲ) ಹಾಗೂ ನನ್ನ (ಅಭಯಾದ್ರಿ) ಮನೆಗಳು ಸ್ವತಂತ್ರವೇ ಇದ್ದರೂ ರೂಢಿಯಲ್ಲಿ ಒಂದೇ ವಠಾರ ಎಂಬಂತೇ ಇವೆ. ಎರಡೂ ಮನೆಗೆ ನಂದಿನಿ ಹಾಲು ತಂದು ಕೊಡುವ ಜವಾಬ್ದಾರಿ ನನ್ನದು....
ಕೊನೆಯ ಕೊಂಡಿ ಕಳಚಿತು

ಕೊನೆಯ ಕೊಂಡಿ ಕಳಚಿತು

ಎ.ಪಿ. ರಮಾನಾಥ ರಾವ್ – ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ (೧೬-೫-೧೯) ತನ್ನ ೮೨ರ ಹರಯದಲ್ಲಿ, ತೀರಿಹೋದರು. ಬಳಕೆಯ ಸರಳತೆಯಲ್ಲಿ – ‘ರಾಮನಾಥ’, ವಿದ್ಯಾ ದಿನಗಳಲ್ಲಿ ಬಯಸಿ, ಮದ್ರಾಸಿನ (ಇಂದಿನ ಚೆನ್ನೈ) ಪಶುವೈದ್ಯಕೀಯ ಕಾಲೇಜು ಸೇರಿದ್ದ. ಆದರೆ...
ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….

ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….

ಅದೊಂದು ಶುಕ್ರವಾರ “ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್” ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ “ಶೆರಿ, ಶಿರಿಯಾಕ್ಕೆ ಶಲೋ…” ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ...
ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ

ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ

‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ...
ನರಹರಿಯುವ ಬೆಟ್ಟಕ್ಕೆ…

ನರಹರಿಯುವ ಬೆಟ್ಟಕ್ಕೆ…

(ಸೈಕಲ್ ಸರ್ಕೀಟ್ – ೪೬೩) ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು (೨೪-೩-೨೦೧೯) ನನ್ನ ಸೈಕಲ್ ಸವಾರಿ ಒಂಟಿಯಲ್ಲ, ಮಂಗಳೂರು ಬೈಸಿಕಲಿಗರ ಸಂಘಕ್ಕೆ ಜಂಟಿ. ತಂಡದ ಲಕ್ಷ್ಯ – ಬಂಟ್ವಾಳದಾಚಿನ ನರಹರಿಪರ್ವತ. ದಿನದ ಬೆಳಕು ಹರಿಯುವ ಮುನ್ನ, ಮೊದಲ ಪಾದದಲ್ಲೇ ಕಂಬಳದ...
ಪರಿಸರ ವರ್ತಮಾನದ ತಲ್ಲಣಗಳು

ಪರಿಸರ ವರ್ತಮಾನದ ತಲ್ಲಣಗಳು

[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಆಕಾಶವಾಣಿ ಮಂಗಳೂರು ಜಂಟಿಯಾಗಿ ಆಯೋಜಿಸಿ ಸಂತ ಏಗ್ನೆಸ್ ಕಾಲೇಜಿನಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ, ನಾನು ಮಂಡಿಸಿದ ಆಶಯ ಭಾಷಣ.] ಮಿತ್ರರೇ, ನಾನು ಔಪಚಾರಿಕ ಭಾಷಣಕಾರನಲ್ಲ....