by athreebook | Jun 28, 2018 | ಕಪ್ಪೆ ಶಿಬಿರಗಳು, ಪ್ರವಾಸ ಕಥನ, ವನ್ಯ ಸಂರಕ್ಷಣೆ
ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆಗಿದ್ದ ಜೀವನ ಜತೆಗಾತಿ ದೇವಕಿಗೆ “ನಿಟ್ಟೆ-ಬಿಟ್ಟೆ, ಕಾರುಕಳ್ಳ, ಗೋಳಿಬಜೆ…” ನನ್ನ ಮಾಮೂಲೀ ಹಾಸ್ಯ ಉದ್ಗಾರಗಳು. ಅವನ್ನು ಕಳೆದು, ಕುದುರೆಮುಖ...
by athreebook | Apr 30, 2018 | ಕಯಾಕ್, ಜಲಮುಖೀ ಹುಡುಕಾಟಗಳು, ದೋಣಿಯಾನ, ಪರಿಸರ ಸಂರಕ್ಷಣೆ
ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ “ಅದರ ಬಳಕೆ ಮಾತ್ರ ಕಡಿಮೆ” ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ ‘ಆದಿತ್ಯವಾರ (೨೯-೪-೧೮) ಕೂಳೂರು –...
by athreebook | Apr 15, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೨೩) ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ ಛಲ ಬಿಡದ ತ್ರಿವಿಕ್ರಮನಂತೆ ಸರ್ಕೀಟಿಗೆ ಸಜ್ಜುಗೊಂಡು ನಾನು ಸೈಕಲ್ ಕೊಟ್ಟಿಗೆಗೆ ಹೋದೆ. ಸೈಕಲ್ ಕತ್ತಲ ಮೂಲೆಯಲ್ಲಿ ಶೀರ್ಷಾಸನ ಮಾಡಿತ್ತು. ದೀಪ ಹಾಕಿ, ಕೀಲೆಣ್ಣೇ ಬಿಟ್ಟು ಸಮಾಧಾನಿಸಿದೆ. ಹೊರಗೆ ಆಕಾಶರಾಯ ಉತ್ತರಿಸಿದ “ಟ-ಠ-ಡ-ಢ-ಣ!” ಅರ್ಥವಾಗಲಿಲ್ವಾ –...
by athreebook | Apr 8, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೨೨) ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ ಸೈಕಲ್ ತತ್ತ್ವಜ್ಞಾನ: ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ,...
by athreebook | Mar 25, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೭) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್...
by athreebook | Feb 25, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಮೈಸೂರು, ಯಕ್ಷಗಾನ, ವೈಚಾರಿಕ, ವ್ಯಕ್ತಿಚಿತ್ರಗಳು
೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ...