ಹಂಪಿ, ದುರ್ಗ, ಜಯ ಮಂಗಳಂ

ಹಂಪಿ, ದುರ್ಗ, ಜಯ ಮಂಗಳಂ

ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ ಡಾರ್ಜಿಲಿಂಗ್, ಕಾನ್ಹಾಗಳಂತೆ ಕಾಶಿ, ಗಯಾಗಳನ್ನೂ ಪಟ್ಟಿ ಮಾಡಿ ನೋಡಿದ್ದೆ. ಅಲ್ಲಿ ದೇವ ಬಿಂಬದ ದರ್ಶನ, ಔಪಚಾರಿಕ ನಮನ, ತೀರ್ಥ ಪ್ರಸಾದಗಳಿಗೆ ನಾನು ಅಂಟಿಕೊಂಡದ್ದಿಲ್ಲ. ಉದಾಹರಣೆಗೆ, ತಿರುಮಲೆಯಲ್ಲಿ ಎರಡು ದಿನವಿದ್ದೂ ವೆಂಕಟ್ರಮಣನ ದರ್ಶನ ಮಾಡಲೇ ಇಲ್ಲ. ಆದರೆ ಎಲ್ಲೂ ಅವಾಗಿ ಒದಗಿದಾಗ ಭಾವ ತುಮುಲಗಳೇನೂ ಇಲ್ಲದೇ ತೀರ್ಥ, ಗಂಧ, ಹೂ, ತುಳಸಿ ಇತ್ಯಾದಿಗಳನ್ನು ವಸ್ತು ನಿಷ್ಠವಾಗಿ ಗ್ರಹಿಸುತ್ತ ಬಂದಿದ್ದೇನೆ. ತಿರುಪತಿಯ ಲಡ್ಡು, ಮಧೂರಿನ ಅಪ್ಪ, ಕಾಶ್ಮೀರದ ಖೀರು, ಅನ್ನಾವರಂನ ಸಪಾದಭಕ್ಷ್ಯ, ಕೃಷ್ಣಮಠದ ಮಡ್ಡಿ, ಶರವಿನ ಪಂಚಕಜ್ಜಾಯ, ಅನೇಕಾನೇಕ ದೇವಳಗಳ ಊಟ ಮುಂತಾದವನ್ನು ಮನಮೆಚ್ಚಿ ಸ್ವೀಕರಿಸಿದ್ದೇನೆ.

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…

‘ಬೋರೇಗೌಡ’ನ ಇನ್ನಷ್ಟು ನೆನಪುಗಳು!

‘ಬೋರೇಗೌಡ’ನ ಇನ್ನಷ್ಟು ನೆನಪುಗಳು!

(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ) ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ! ಬಾಲ್ಯದಲ್ಲಿ ನಾನು ಭಾರೀ...

read more
ಮರುಭೂಮಿಯಲ್ಲೊಂದು ಓಯಸಿಸ್!

ಮರುಭೂಮಿಯಲ್ಲೊಂದು ಓಯಸಿಸ್!

ಟೆಕ್ಕಿ ಗೆಳೆಯ ಸಂದೀಪ್ ಮಹಾರಾಷ್ಟ್ರದ ಯಾವುದೋ ಅನಾಮಧೇಯ ಹಳ್ಳಿಗಳಲ್ಲಿ ಸಂಶೋಧಕರೊಬ್ಬರಿಗೆ ಮೂಲ ಮಾಹಿತಿ ಸಂಗ್ರಾಹಕನಾಗಿ...

read more
ಬೋರೇಗೌಡ ಬೆಂಗಳೂರಿಗ್ಬಂದ

ಬೋರೇಗೌಡ ಬೆಂಗಳೂರಿಗ್ಬಂದ

(ನಂದಿಹೋಗಲಿರುವ ನಂದಿಯ ಎರಡನೇ ಭಾಗ) ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ -...

read more