ಯಮುನೋತ್ರಿ, ಗಂಗೋತ್ರಿ, ಗೋಮುಖ
ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು ಗಂಟೆಗಷ್ಟೇ ತೊಡಗುವುದು ಎಂದು ತಿಳಿದಿದ್ದೆವು. ಹಾಗಾಗಿ ಸಮಯದ ಉಳಿತಾಯವನ್ನು ಲಕ್ಷಿಸಿ, (೧೪-೫-೯೦) ಚಾರಣದ ಆವಶ್ಯಕತೆಗಳನ್ನಷ್ಟೇ ಬೆನ್ನಿಗೇರಿಸಿ, ಐದೂಕಾಲಕ್ಕೇ ನಡಿಗೆಗಿಳಿದಿದ್ದೆವು. ಸಾಮಾನ್ಯ ಯಾತ್ರಿಗಳು ಈ ಚಾರಣದ ಅಂಶವನ್ನು (ಒಟ್ಟು ಸುಮಾರು ೨೬ ಕಿಮೀ) ಎರಡು ದಿನಗಳಲ್ಲಿ ಪೂರೈಸುತ್ತಾರೆಂದು ಕೇಳಿದ್ದೆವು. ಆದರೆ ನಮ್ಮ ಯೋಜನೆ ಒಂದೇ ದಿನದ್ದು. ಹಿಂದಿನದಂತೇ ಯಮುನೆಯ ದಂಡೆಯಲ್ಲೇ ಉತ್ತರಮುಖಿಗಳಾಗಿ, ಕಾಣುತ್ತಿದ್ದ ಕಾಡಿನತ್ತ ಸಾಗಿದೆವು. ಕಾಲ್ದಾರಿ ಬಹಳ ಸ್ಪಷ್ಟವಿದ್ದುದರಿಂದ ಮಾರ್ಗದರ್ಶಿ ಅಥವಾ ನಕ್ಷೆಯ ಗೋಜಿಗೆ ಹೋಗಲಿಲ್ಲ. ನನ್ನ ನೆನಪಿನಂತೆ, ಆ ಕಾಲದಲ್ಲಿ ಕಾಲ್ದಾರಿ ಉದ್ದಕ್ಕೂ ಯಮುನೆಯನ್ನು ಎಡಕ್ಕೇ ಇಟ್ಟುಕೊಂಡಿತ್ತು. ಇಂದು ಗೂಗಲ್ಲಿನಲ್ಲಿ, ವಾಹನಯೋಗ್ಯ ಮಾರ್ಗ ಅತ್ತ ಹರಿದಿರುವುದರಿಂದ ಹೊಸ ಜಾಡುಗಳನ್ನೂ ಅಡ್ಡ ಸೇತುವೆಗಳನ್ನೂ ಕಾಣಬಹುದು.
ಕನ್ನಡ ಪ್ರಶಸ್ತಿ – ಸಂಭ್ರಮ, ಸಂಕಟ
ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ...
ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ
(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ) ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ...
ಸಂಬಂಧಗಳು ಸಂಭವಗಳು
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೩ ಕಾಲೇಜ್ ಸೇರುವ ಕಾಲಕ್ಕೆ...
ಅನನುಭವ ಎಡವಿತು, ಛಲ ಸಾಧಿಸಿತು!
(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ) ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು...
ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ
ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ...
ಉತ್ತರಕ್ರಿಯೆ!
ಅತ್ರಿ ಮುಚ್ಚುಗಡೆಯ ವಿಚಾರ ಸಾರ್ವಜನಿಕಕ್ಕೆ ಭಾರೀ ವಿಷಯವಾಗಬೇಕಿಲ್ಲ. ಆದರೆ ತಿಳಿಸುವ ಕರ್ತವ್ಯ ನನ್ನದು. ಸುಮಾರು ಮೂರು...
ಡಾ| ಕಾಕುಂಜೆ ಗೋಪಾಲ ಕೃಷ್ಣ ಭಟ್ (ಅಡ್ಡಹೊಳೆ ಆಸುಪಾಸು ಭಾಗ ಎರಡು)
ಕಳೆದ ಬಾರಿ ಉಲ್ಲಾಸ ಕಾರಂತರನ್ನು ಸಣ್ಣದಾಗಿ ಅಭಿನಂದಿಸಿ, ಅವರು ಪ್ರತಿನಿಧಿಸುವ ವನ್ಯಾಭಿಯಾನವನ್ನೇ ವಿಸ್ತರಿಸಿದ್ದೆ....
ಪದ್ಮಶ್ರೀ ಉಲ್ಲಾಸ ಕಾರಂತ
“ಅಂವ ಶಾಲೆಗೇ ಹೋಗಲಿಲ್ಲ! ಆದರೂ ಎಸ್ಸೆಲ್ಸಿ ಪಾಸು ಮಾಡಿ, ಎಂಜಿನಿಯರೂ ಆದ. ಮತ್ತೆ ಒಳ್ಳೇ ಕಾರ್ಖಾನೆ ಕೆಲಸ ಇದ್ದರೂ...
ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!
ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ)...
ದೇಶಕಾಲದ್ದು ಕೊನೆಯಲ್ಲ; ವಿರಾಮ!
೨೦೧೧ರ ಅಕ್ಟೋಬರ್ ಮೊದಲವಾರದಲ್ಲಿ ನಾನು ಅಂತರ್ಜಾಲದಲ್ಲಿ ಮಿಂಚಂಚೆ ತನಿಖೆ ನಡೆಸಿದ್ದಂತೆ ಎಡಪಕ್ಕದ ‘ದೇಶಕಾಲ’ದ ಹಸಿರು...
ಪಾಂಡರಮಕ್ಕಿ ಜಾಡಿನಲ್ಲಿ
[ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಎರಡು] ಉಪೋಪ ಕಥೆಗಳ ‘ಕಾಟದಲ್ಲಿ’ ಭಗವತಿ ನೇಚರ್ ಕ್ಯಾಂಪ್...
ಕುಮಾರವ್ಯಾಸ ನೃತ್ಯ ಭಾರತ
[ಕುಬ್ಜ ಚಿತ್ರಕ್ಕೆ ತೋರದ ಚೌಕಟ್ಟು] ಅದೊ೦ದು ಮಧ್ಯಾಹ್ನ ಅ೦ಗಡಿ ಬಾಗಿಲಡಿಯಲ್ಲಿ ತೂರಿದ್ದ ಕರೆಯೋಲೆ ಸಿಕ್ಕಿತು -...
ಭಗವತಿ, ಕರಡಿಬೆಟ್ಟ…
ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಒಂದು ಹದಿನಾಲ್ಕು ಜನ ಸರಬುರ ಹೆಜ್ಜೆ ಹಾಕುವುದಷ್ಟೇ ಸದ್ದು. ತೆಳು...
ದಾಸಜನದ ನೆಪದಲ್ಲಿ ಮತ್ತಷ್ಟು ಜವಳಿ ನೆನಪುಗಳು
ದಾಸಜನ ಕೆನರಾ ಕಾಲೇಜಿನ ಸಹಯೋಗದಲ್ಲಿ ಮೊನ್ನೆ (೩-೧೨-೧೧) ಸಂಜೆ ಜವಳಿಯವರಿಗೆ ಶ್ರದ್ಧಾಂಜಲಿ ಸಭೆ ಮಾಡಿತ್ತು. ನಾನು...
ಜವಳಿ ಪರವಶ!
[ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ...
ನೆನಪಿನ ಪುಟ ಸೇರಿದ ಶಿಲಾಯುಗದ ‘ಪಾಂಡವರಕಲ್ಲು’
ಪೀಠಿಕೆ ಪ್ರಾಕೃತಿಕ ಶೋಧನೆಗಳ ಅಲೆದಾಟದಲ್ಲಿ ನಾನು ಕೆಲವು (ಐತಿಹಾಸಿಕವೂ ಸೇರಿದಂತೆ) ಮಹತ್ವದ ರಚನೆಗಳನ್ನು...
















I don't think the title of your article matches the content lol. Just kidding, mainly because I had some doubts…