ಮೆಟ್ರೋದಲ್ಲಿ ಕಾಣೆಯಾದ ಮೂವರು!
ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು.ಮತ್ತೆ ನಿರ್ವಿಘ್ನವಾಗಿ…. ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ. ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ.
ಅಸಾಧ್ಯ ಅಮೆದಿಕ್ಕೆಲ್
(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ) ಉತ್ತರನ ಸಾಹಸ! ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ...
ಊರೆಂದರೆ ಬರಿಯ ಮಣ್ಣಲ್ಲ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ - ೩ ನಮ್ಮೂರು, ಮಂಗಳೂರ ಸೆರಗ...
ಪ್ರೀತಿ ಬಂಧ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ - ೨ ಪ್ರೀತಿಬಂಧಗಳ ಬಗೆ ಸಂಬಂಧಗಳ ಅಳವನ್ನು...
ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು
(ಚಕ್ರೇಶ್ವರ ಪರೀಕ್ಷಿತ ೧೧) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್...
ಕಾಕರಾಜ! ನಿನ್ನ ಧ್ವನಿಯು ಎಷ್ಟು ಚಂದ!!
“ನಮಸ್ಕಾರಾ ಸಾರ್, ನಾನು ಮೈಸೂರಿಂದಾ, ಪುಸ್ತಕ ಸಂವಹನದಿಂದಾ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯಾನೂ ಹೌದು....
ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ
ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ....
ಸವಾಲಿನ ಬೆಂಬತ್ತಿ ಕೌಂಡಿಕಾನ
“ಹೌದಯ್ಯಾ ನೀವು ಆ ಕಾಡಿಗೆ ಹೋಗುವುದೇ ಆದರೆ ಈ ರೇಸಿಗೆ ಹೋಗುವ ಬೈಕಿನವರು ಹಾಕಿಕೊಳ್ಳುವ, ಸರೀ ಕಿವಿ ಮುಚ್ಚುವ...
“ನಂಬಿಕೆಗಳನ್ನು ಕೆಣಕಬೇಡಿ!”
ಪ್ರೊ| ಎಂ ರಾಮಚಂದ್ರ ಕಾರ್ಕಳ, ಹಲವು ಖ್ಯಾತ ವಿದ್ವಾಂಸರುಗಳ ಪ್ರಿಯ ಶಿಷ್ಯ, ನನ್ನ ತಂದೆಯನ್ನು ಪರೋಕ್ಷವಾಗಿ ತನ್ನ...
ಗುಹಾವಿವಾದಕ್ಕೆ ಮಂಗಳ ?
ಪತ್ರಿಕೆಯ ಬರಹಗಳ ಬಗ್ಗೆ (ನೇರ ಲೇಖಕನಿಗೂ) ಪ್ರತಿಕ್ರಿಯಿಸುವವರೇ ಕಡಿಮೆ. ಹಾಗೆ ಬರೆದದ್ದೆಲ್ಲ ಸ್ವೀಕಾರವಾಗುವುದು,...
ಸಾಹಸೀ ಸುಂದರ ಅನುಭವ
ನೆಲ್ಲಿತಟ್ಟುತೀರ್ಥ ಘಟ್ಟ ಕೊರೆಯುವ ಆವೇಶ ಕಳಚಿದ pious-ವಿನಿ ಇಲ್ಲಿ ಆದೂರು ವಲಯದ ದಟ್ಟಾರಣ್ಯ ಪೊರೆವ ಮಂದಗಾಮಿನಿ....
ಜಾಂಬ್ರಿ – ಕೆದಕಿದ ಕಣಜದ ಗೂಡು
ಎಪ್ಪತ್ತನೇ ದಶಕದ ಕೊನೆಯ ಭಾಗ ಹೀಗೇ ಒಂದು ದಿನ ಮುಚ್ಚೂರು ಬಳಿಯ ನೆಲ್ಲಿತೀರ್ಥ ಗುಹೆ ನೋಡಲು ನಾಲ್ಕು ಮಿತ್ರರು...
ಗಡಾನ್ ಹತ್ರೀ ಗಡಾಯಿ ಕಲ್ಲು
(ಕುದ್ರೆಯ ನೆರಳಲ್ಲೊರಗಿದ ಕರಿರಾಯ ಭಾಗ 3) ಕಳೆದ ಶತಮಾನದ ಅಪರ ಭಾಗದ ಕಥೆಯಿದು. ಅಂದರೆ ಸನ್ ಸಾವಿರದೊಂಬೈನೂರಾ...
ಬಿರುಮಳೆಗೆ ಜಗ್ಗದ ಕರಿರಾಯ
(ಕುದುರೆಯ ನೆರಳಲ್ಲೊರಗಿದ ಆನೆ ೨) ಬೆಳ್ತಂಗಡಿಯ ದಿಗಂತದಲ್ಲಿ, ಬಂಗಾಡಿ - ಕಿಲ್ಲೂರು ಕೊಳ್ಳದ ಬಾಗಿಲಲ್ಲಿ ನಿಂತ ಏಕಶಿಲಾ...
ಕುದುರೆಯ ನೆರಳಲ್ಲೊರಗಿದ ಆನೆ ೧. ಜಮಾಲಾಬಾದ್
೧೯೬೬ರ ಸುಮಾರಿಗೆ ನಾನಿನ್ನೂ ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ. ನನ್ನ ತಂದೆ, ತನ್ನ ಕಾಲೇಜಿನ ಎನ್ಸಿಸಿ...
ಸಾಹಸ ಪ್ರೇಮ
ನಂದಿಬೆಟ್ಟ ನೂರಾರು ಅಡಿ ಎತ್ತರದ ಬೋಳು ಬಂಡೆ. ಟಿಪ್ಪುಸುಲ್ತಾನ್ ಅದರ ಒಂದಂಚಿನಲ್ಲಿ ಅಪರಾಧಿಗಳನ್ನು ನಿಲ್ಲಿಸಿ...
ಅವರಿಲ್ಲದ ಚಾವಡಿ…
ಜೂನ್ ೨೦೦೯ರ ಚರ್ಚೆಗೊಂದು ಚಾವಡಿ ಬಂದ ಕ್ಷಣವೇ ಮಗುಚಿಹಾಕಿ ಮಿತ್ರ ನರೇಂದ್ರ ಪೈ ಅವರಿಗೆ ದೂರವಾಣಿಸಿ ಅಭಿನಂದಿಸಿದೆ;...
















I went through your (better say "our") travelogue with utmost enthusiasm as it brought to my mind vivid scenes and…