ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’
ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ…) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ. ತಂಡ ನಾಲ್ಕು ಬೈಕೇರಿ, ಪಂಜ ತಲಪಿತ್ತು. ಮತ್ತೆ ಅಲ್ಲಿ ಇಲ್ಲಿ ವಿಚಾರಿಸುತ್ತ ಸುಮಾರು ಹನ್ನೊಂದು ಕಿಮೀ ಕಳೆದು, ಬಿಳಿಮಲೆಯಲ್ಲಿದ್ದ ಪುರುಷೋತ್ತಮರ ಮನೆ ಸೇರಿದ್ದು ಒಂದು ಆಕಸ್ಮಿಕ. ಪುರುಷೋತ್ತಮರು ಆ ದಿನಗಳಲ್ಲಿ ಮಂಗಳೂರು ವಿವಿ ನಿಲಯದಲ್ಲಿದ್ದರು (೧೯೮೭). ಹಾಗಾಗಿ ಅವರು ನಮಗೆ ಮನೆಯಲ್ಲಿ ಸಿಗಲಿಲ್ಲ. ನಾವು ಬೈಕು, ಜಿಗಣೆಗೆ ಬೆದರಿದ ಅಭಯ, ಜತೆಗೆ ದೇವಕಿಯನ್ನು ಪುರುಷೋತ್ತಮರ ತಾಯಿಗೊಪ್ಪಿಸಿ, ಕಾಡು ನುಗ್ಗಿದ್ದೆವು. ಸುಮಾರು ಎರಡು ಗಂಟೆಯ ಅವಧಿಯಲ್ಲಿ, ಶಿಖರ ವಲಯವನ್ನು ತಲಪಿ ಸುತ್ತಾಡಿ, ಬುತ್ತಿಯೂಟ ಮಾಡಿ ಮುಗಿಸಿದ್ದೆವು. ಅನಂತರ ಉತ್ಸಾಹದಲ್ಲಿ ಇಳಿಯುತ್ತ ಮಳೆ, ಮಂಜು, ಹುಲ್ಲು, ಪೊದರುಗಳ ಫಿತೂರಿಯಲ್ಲಿ ದಿಕ್ಕು ತಪ್ಪಿ ತಲಪಿದ್ದು ಎದುರು ಮೈಯ ಏರಿಮಲೆ, ಗುತ್ತಿಗಾರು. ಮತ್ತೆ ಬಾಡಿಗೆ ವಾಹನ ಹಿಡಿದು ಪಂಜಕ್ಕಾಗಿ ಬಿಳಿಮಲೆ ಸೇರಿ, ಮರಳಿದ ಪ್ರಕರಣ ಸುಖಾಂತ ಸಾಹಸವೇ ಅನ್ನಿಸಿತ್ತು.
ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾರನೇ ಅಧ್ಯಾಯ [ಪ್ರಸಕ್ತ ಅಧ್ಯಾಯದಲ್ಲಿ ಸುಳ್ಯದಲ್ಲಿ ನಡೆದ ಅವಿಭಜಿತ...
ಡಾಕ್ಟರುಗಳಿಂದಾದ ಪ್ರಮಾದಗಳು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತಾರು ``ನಾಳೆ ಎಂಬುದು ನಿನ್ನಿನ ಮನಸು,...
ಕನ್ನಡ ಕಾದಂಬರಿ ನೂರು ವರ್ಷ – ಉದ್ಯಮದ ದೃಷ್ಟಿಯಲ್ಲಿ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೈದನೇ ಅಧ್ಯಾಯ [ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಏರ್ಪಪಡಿಸಿದ್ದ ಕನ್ನಡ...
ಲೈಂಗಿಕ ಕಾರ್ಯಕರ್ತೆಯರ ನೋವಿಗೆ ಕಿವಿಯಾಗಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ಐದು ಕೆಲವು ವಿಷಯಗಳ ಬಗ್ಗೆ ನಾವು...
ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ
ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ...
ಗೋವಾ ಚಿತ್ರೋತ್ಸವ ಭಾಗ – ೩
ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ...
ಗೋವಾ ಚಿತ್ರೋತ್ಸವ ಭಾಗ – ೨
ಉಡ್ಲ್ಯಾಂಡ್ಸ್ನಲ್ಲಿ ಪುತ್ತಪ್ಪ ಬ್ಯಾರಿ! ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ...
ಗೋವಾ ಚಿತ್ರೋತ್ಸವ ಭಾಗ – ೧
ಮೂಡಿತು ಗರಿ ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ)...
ಯಕ್ಷೋಪಾಸನೆ
(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ...
ರಾಧಾಪ್ರಿಯ ಕೃಷ್ಣನಲ್ಲಿ ಲೀನ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಕನ್ನಡ ಜನಪ್ರಿಯ ಕಾದಂಬರಿಗಳನ್ನು ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾ...
ಬಿಳಿಹುಲಿಗೊಂದು ಬಾಲ
ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಟೀಚರಮ್ಮಂದಿರು ಆರಿಸಿಟ್ಟ ಪುಸ್ತಕಗಳನ್ನು ನಾನು ಬಿಲ್ಲು ಮಾಡುತ್ತಿದ್ದೆ. ಅವರು...
ಯಕ್ಷಗಾನ ಕಲಾರಂಗದ ಮೂರು ಬೈಠಕ್
ಪ್ರಿಯ ಮುರಳಿ ಕಡೇಕಾರರೇ, ಪದಾಧಿಕಾರಿಗಳ ಭಾರಕ್ಕೆ ಕುಸಿಯುವ, ಸ್ಥಾವರ ಕಟ್ಟುವ (ಕಛೇರಿ, ಸಭಾಭವನ ಇತ್ಯಾದಿ)...
ಕಾನನದೊಳಗಿಂದೆದ್ದು ಬಂದವನಾವನಿವಂ?
ಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ...
ದೇಹದಾನ
ನನ್ನ ತಂದೆ (ಜಿ.ಟಿ. ನಾರಾಯಣ ರಾವ್) ತಾಯಿಯರು (ಲಕ್ಷ್ಮಿ ದೇವಿ) ವೈದಿಕ ಸಂಸ್ಕಾರಗಳು ಮತ್ತು ಸಾಂಪ್ರದಾಯಿಕ ಆಚರಣೆಗಳು...
ಹೆಸರಿನಲ್ಲೇನಿದೆ…?
ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ...
ಬಿಳಿಹುಲಿಗೆ ಬಂತು ಬಣ್ಣ
೨೦೦೮ರ ಏಪ್ರಿಲ್ ತಿಂಗಳ ಒಂದು ದಿನ ಈ ಬಿಳೀಹುಲಿ ನನ್ನಂಗಡಿ ಹೊಕ್ಕಿತು. ಬೆಂಗಳೂರಿನ ವಿನಾಯಕ ಬುಕ್ ಡಿಸ್ಟ್ರಿಬ್ಯೂಟರ್ಸ್...
















ತುಂಬ ಉಪಯುಕ್ತ ಮಾಹಿತಿ.