ದಿಲ್ಲಿಯಿಂದ ಡೆಹ್ರಾಡೂನಿಗೆ…

ದಿಲ್ಲಿಯಿಂದ ಡೆಹ್ರಾಡೂನಿಗೆ…

ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ ಉದ್ದಕ್ಕೂ ಯಮುನಾ ನದಿ ದೀರ್ಘ ಬಳಕುಗಳ ಸಾಂಗತ್ಯ ಕೊಡುತ್ತದೆ. ಮಾರ್ಗದ ಕಠೋರ ತಪೋನಿಷ್ಠೆಯನ್ನು ಮುರಿಯ ಬಂದ ಅಪ್ಸರೆಯಂತೆ ನಲಿದಿದೆ. ದಾರಿಗೆ ಈ ಅಲೌಕಿಕ ದೃಶ್ಯ ಅಗೋಚರವಾದ್ದರಿಂದ ಸುಮಾರು ಇನ್ನೂರು ಕಿಮೀ ಉದ್ದದ್ದ ದಿಲ್ಲಿಯ ಜಪವನ್ನೇ ನಾವು ಮಾಡಿಕೊಂಡಿದ್ದೆವು. ಸುಮಾರು ಮಧ್ಯಂತರದಲ್ಲಿದ್ದ ಏಕೈಕ ಬದಲಾವಣೆ ಮಥುರಾ. ಪುರಾಣ, ಇತಿಹಾಸಗಳಿಗೆ ಇಂದೂ ಈ ನೆಲದಲ್ಲಿ ಸಾಕಷ್ಟು ಪುರಾವೆಗಳು ಇವೆ. ಅವನ್ನು ವೈಚಾರಿಕವಾಗಿ ಗುರುತಿಸಿಕೊಳ್ಳುವ ಸಂತೋಷವೇ ನಿಜ ಸಂಸ್ಕೃತಿ. ಅದು ಬಿಟ್ಟು, ಅವನ್ನು ಯಾವುದೋ ಒಂದು ಕಾಲಘಟ್ಟಕ್ಕೆ ಸೀಮಿತಗೊಳಿಸಿ, ಇತಿಹಾಸವನ್ನು ತಿದ್ದುವ ಪ್ರಯತ್ನ ಮಾಡುವುದು ವಿಕೃತಿ. ನಮ್ಮೀ ಬೈಕ್ ಯಾನದಲ್ಲಿ ಬಾದಾಮಿಯಿಂದ ಆಗ್ರಾದವರೆಗಿನ ಐತಿಹಾಸಿಕ ರಚನೆಗಳಲ್ಲಿ ಹೆಚ್ಚಾಗಿ ಮೆರೆಯುವುದು – ವಿವಿಧ ಕಾಲಗಳ ವೈಯಕ್ತಿಕ ಮಹತ್ವಾಕಾಂಕ್ಷೆ ಮಾತ್ರ. ಅವರಲ್ಲಿ ಹೆಚ್ಚಿನವರಿಗೆ ಖಾಯಂ ಯಾವ ಮತಧರ್ಮದ ಸೋಂಕೂ ಇಲ್ಲ, ಜನಾಂಗ ಭಾಷೆಗಳ ದುರಭಿಮಾನವೂ ಇಲ್ಲ. ಇವನ್ನು ಗ್ರಹಿಸುವಲ್ಲಿ ಎಲ್ಲ ಕಾಲದಲ್ಲೂ ಇದ್ದಂತೆ ದೊಡ್ಡ ಅಡ್ಡಿ ವಿಚಾರಹೀನ ಆರಾಧಕರು ಮತ್ತು ಅವರನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ರಾಜಕಾರಣಿಗಳು.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

ರಾಷ್ಟ್ರೀಕೃತ ಬ್ಯಾಂಕ್ ಹೀಗೂ ಇರಬಹುದೇ? ಅಥವಾ ಕಾಣೆಯಾದ ಪಾವತಿಯ ಪತ್ತೇದಾರಿ ಕತ್ತೆ!

ರಾಷ್ಟ್ರೀಕೃತ ಬ್ಯಾಂಕ್ ಹೀಗೂ ಇರಬಹುದೇ? ಅಥವಾ ಕಾಣೆಯಾದ ಪಾವತಿಯ ಪತ್ತೇದಾರಿ ಕತ್ತೆ!

ಆರ್ಥಿಕ ವರ್ಷದ ಕೊನೆಯ ತರಾತುರಿಯಲ್ಲಿ ೨೩-೩-೧೧ರಂದು ಮೂಲ್ಕಿ ಕಾಲೇಜಿನ ಅಧ್ಯಾಪಕ ವೃಂದ ಕೆಲವು ಪುಸ್ತಕಗಳನ್ನು ಆಯ್ದು,...

read more