ಜೈಪುರಕ್ಕೆ ಜೈ ಆಗ್ರಾವೂ ಸೈ

ಜೈಪುರಕ್ಕೆ ಜೈ ಆಗ್ರಾವೂ ಸೈ

‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ ಕೋಟೆಯನ್ನು ಬೆಳಿಗ್ಗೆ ನೋಡಿ ಬರುವ ಉತ್ಸಾಹದಲ್ಲಿ ತಿಂಡಿ ತಿಂದಿರಲಿಲ್ಲ. ವಾಪಾಸು ಬಂದು ಮುಂದಿನ ಪ್ರಯಾಣಕ್ಕಿಳಿಯುವಾಗ ಮಾತ್ರ (೧೦.೪೫), ಒಂದೆರಡಲ್ಲ ಮೂರ್ನಾಲ್ಕು ಗಂಟೆಗಳೇ ತಡವಾಗಿತ್ತು. ಮೊದಲು ಸಿಕ್ಕ ಧಾಬಾಕ್ಕೇ ನುಗ್ಗಿದೆವು. ಅವನಲ್ಲಿ ಪೂರ್ವ ಸಿದ್ಧತೆಗಳೇನೂ ಇರಲಿಲ್ಲ. ಹಾಗಾಗಿ ನಾವು ಹಳಸಲು ಎಣ್ಣೇಲಿ ಕರಿದ ಪೂರಿ, ಜಿಡ್ಡು ಬಸಿಯುವ ಪರೋಟಾ ಬಿಟ್ಟು, ರೊಟ್ಟಿ, ಮೊಸರು, ಉಪ್ಪಿನ ಕಾಯಿ ಕೇಳಿದೆವು. “ಬನ್ಜಾಯೆಗಾ” (ಮಾಡ್ಕೊಡಾಣಾ) ಎಂದ. ಆದರೆ ಪುಣ್ಯಾತ್ಮ ಮಾಡಿದ್ದು ಅವನದೇ ಕ್ರಮದಲ್ಲಿ. ಹಿಟ್ಟನ್ನು ಕಲೆಸುವಾಗಲೇ ಧಂಡಿಯಾಗಿ ಎಣ್ಣೆ ಸುರಿದುಬಿಟ್ಟ. ಒಂದೊಂದು ಇಂಚು ದಪ್ಪಕ್ಕೆ ಲಟ್ಟಿಸಿ, ಅದೇನು ತವಾವೋ ಚಪ್ಪಟೆ ಬಾಣಲೆಯೋ ಎನ್ನುವಂತೆ ಎಣ್ಣೇ ಸ್ನಾನ ಮಾಡಿಸಿಯೇ ಕೊಟ್ಟ. ಲೇಟ್ ಫೀ ಪೇಡ್ ಬಿರೇಕ್ ಫಾಸ್ಟ್‍ಗೆ, ಅಡ್ವಾನ್ಸ್ಡ್ ಲಂಚೂ ಸೇರಿಸಿ, ಒಬ್ಬೊಬ್ಬರೂ ಕನಿಷ್ಠ ಆರೆಂಟು ರೊಟ್ಟಿಯಾದರೂ ಹೊಡೀಬೇಕು ಅಂದು ಕೊಂಡಿದ್ದೆವು.

read more
ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

(ಧಾರಾವಾಹಿಯ ಮೊದಲ ಭಾಗ) ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ?...

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

127 ಗಂಟೆಗಳು!

127 ಗಂಟೆಗಳು!

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ....

read more