ಕೋಟೆ ರೂಪವತಿಯ ಘುಂಗಟ್ ಸರಿಸಿ

ಕೋಟೆ ರೂಪವತಿಯ ಘುಂಗಟ್ ಸರಿಸಿ

ಅಂಗಡಿಯಲ್ಲಿ ಹಲವು ನಕ್ಷಾಪುಸ್ತಕಗಳಿಂದ ನಮ್ಮ ಸ್ವಾರ್ಥಾನುಕೂಲಿಯಾದ ಗೀಟುಗಳನ್ನು ಹೆಕ್ಕಿದ ಮಿಶ್ರಣವೇ ನನ್ನ ನಕಾಶೆ. ಆ ಲೆಕ್ಕದಲ್ಲಿ ನಮ್ಮ ಹೊಸದಿನದ (೧-೫-೯೦) ಲಕ್ಷ್ಯ – ರಾಣೀ ರೂಪಮತಿಯ ಅಮರ ಪ್ರೇಮ ಕತೆಗೂ ಸಾಕ್ಷಿಯಾದ ಮಾಂಡವಘಡ್ ಅಥವಾ ಮಾಂಡು. ಹಕ್ಕಿ ಹಾರಿದಂತೆ ಇದು ಮೇಲ್ಘಾಟಿನಿಂದ ಪಡುಬಡಗು ಅಥವಾ ವಾಯವ್ಯಕ್ಕಿತ್ತು. ನನ್ನ ದಾರಿಯ ಅಂದಾಜಿನಂತೆ ನಾನೂರು ಕಿಮೀಯ ಓಟ. ಸಾಲದ್ದಕ್ಕೆ ಮಾಂಡು ಕೋಟೆಯಲ್ಲಿನ ಊಟ, ವಾಸ್ತವ್ಯದ ಅನುಕೂಲಗಳೂ ಅಸ್ಪಷ್ಟವಿದ್ದವು. ಮೇಲ್ಘಾಟಿನ ಪರ್ವತ ಪ್ರದೇಶದ ದಾರಿಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಇದ್ದವಕ್ಕೂ ಸಮರ್ಥ ಮಾಹಿತಿದಾರರು ನಮಗೆ ವನಧಾಮದಲ್ಲಿ ಸಿಗಲಿಲ್ಲ. ನಾವು ವಿಚಾರಿಸಿದ ಒಂದಿಬ್ಬರು ಸರಳವಾಗಿ “ಅಸಾಧ್ಯ” ಎಂದುಬಿಟ್ಟರು. ಮತ್ತು ನೇರ ಉತ್ತರಕ್ಕೆ ಹೋಗುವ ಸುಮಾರು ಐವತ್ತರವತ್ತು ಕಿಮೀ ಬಳಸು ದಾರಿಯನ್ನೇ ಹೇಳಿದರು. ಕಾರಣ ಸರಳ – ನಾನು ಕಂಡುಕೊಂಡ ದಿಕ್ಕಿನಲ್ಲಿ ಇದ್ದರೂ ತೀರಾ ಕಚ್ಚಾದಾರಿಯಂತೆ. ಮತ್ತೆ ಹಾಗೆ ಹೋದರೂ ಅಡ್ಡಲಾಗುವ ಮೊದಲು ತಪತೀ, ಅ`ನಂತರ ನರ್ಮದಾ ನದಿಗಳನ್ನು ದಾಟಲು ಸೇತುವೆಗಳೇ ಇಲ್ಲವೆಂದರು. ನಮಗೋ ದಾರಿಯ ಉಳಿತಾಯದಂತೆ, ಬಳಸಂಬಟ್ಟೆ ಹಿಡಿದರೆ ಬೈಕುಗಳಿಗೆ ಪೆಟ್ರೋಲ್ ಕೊರತೆಯಾದೀತು ಎಂಬ ಹೆದರಿಕೆಯೂ ಇತ್ತು.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…