ರೈಲ್ವೇಯಲ್ಲಿ ಪ್ರಭಾವ, ವಿಭಾವಗಳು

ರೈಲ್ವೇಯಲ್ಲಿ ಪ್ರಭಾವ, ವಿಭಾವಗಳು

(ಭಾರತ ಅ-ಪೂರ್ವ ಕರಾವಳಿಯೋಟ – ೨) ೧೯೯೬ರ ಏಪ್ರಿಲ್ ಹದಿನಾಲ್ಕರಂದು ಮೋಟಾರ್ ಬೈಕ್ ಏರದೇ ನಮ್ಮ ಬೈಕ್ ಮಹಾಯಾನ ಮೊದಲ್ಗೊಂಡಿತ್ತು. ಅಂದು ಬೆಳಿಗ್ಗೆ ಕಿಶೋರ್ ಮತ್ತು ನಾನು ಬೈಕುಗಳನ್ನು ಮಂಗಳೂರು ರೈಲ್ವೇ ನಿಲ್ದಾಣಕ್ಕೊಯ್ದು ಗೆಳೆಯ ಕಿಶನ್ ಬಂಗೇರಾರ (ಇವರು ನಿಲ್ದಾಣದ ಸ್ವಾಗತಕಾರ) ಸಹಾಯಕರಿಗೊಪ್ಪಿಸಿದೆವು. ಬೈಕ್ ಯಾನದ ನಾಲ್ವರ ರೈಲ್ವೇ ಪ್ರಯಾಣದ ಟಿಕೇಟ್ ಒಟ್ಟು ರೂ. ೧೪೨೦/-ಶುಲ್ಕ ಕೊಟ್ಟು (ಮೂರು ಅಟ್ಟಳಿಗೆ ಮಲಗು ಸೌಕರ್ಯದ ಮೂರನೇ ದರ್ಜೆ ಡಬ್ಬಿ) ತಿಂಗಳ ಮುಂಚೆಯೇ ಕಾಯ್ದಿರಿಸಿದ್ದಾಗಿತ್ತು. ಈಗ ಬೈಕುಗಳಿಗೆ ‘ಪ್ಯಾಕಿಂಗ್’ ಶಾಸ್ತ್ರ ಮಾಡಿಸಿ, ಪ್ರಯಾಣದ ಟಿಕೆಟ್ಟಿಗೆ ಲಗತ್ತಿಸಿದಂತೆ ಬ್ರೇಕ್ ವ್ಯಾನ್ ಶುಲ್ಕ ರೂ ೧೩೪೦ ಕೊಟ್ಟು ರಸೀದಿ ಮಾಡಿಸಿಕೊಂಡು ಬಂದೆವು. ಸಂಜೆಗೆ ಉಪಾಧ್ಯರು ಸಾಲಿಗ್ರಾಮದಿಂದ ನಮ್ಮ ಮನೆಗೇ ಬಂದು ಸೇರಿಕೊಂಡರು. ಬೇಗನೇ ಊಟದ ಶಾಸ್ತ್ರ ಮುಗಿಸಿ, ಕತ್ತಲ ಪರದೆ ಬೀಳುತ್ತಿದ್ದಂತೆ, ನಾವು ಮೂವರು ಗಂಟು ಗದಡಿ ಸಮೇತ ರಿಕ್ಷಾ ಏರಿ ರೈಲ್ವೇ ನಿಲ್ದಾಣ ಸೇರಿಕೊಂಡೆವು. ಕಿಶೋರ್ ಪ್ರತ್ಯೇಕವಾಗಿ ಬಂದರು. ಬೈಕುಗಳು ನಮಗೂ ಮೊದಲೇ ರೈಲೇರಿ ಕುಳಿತಿದ್ದವು.

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಮಾನ್ಯರೇ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪)...

read more