ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು

ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು

ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. ಹೊಸದಾರಿ ಗಿಡ್ಡವಾದ್ದರಿಂದ ಏರುವ ಕೋನದಲ್ಲಿ ಏನೂ ವ್ಯತ್ಯಾಸವಾಗಿರಲಿಲ್ಲ. ಆದರೆ ಹರಹು, ತಿರುವಿನ ಬಳುಕು, ಸಂಧಿಸ್ಥಾನದ ಡಾಮರ್, ಮುಂದುವರಿದು ಕಾಂಕ್ರೀಟ್ ಹಾಸು ನಿರೀಕ್ಷೆಯಂತೆ ಅದ್ಭುತವಾಗಿಯೇ ಇದೆ.

read more
ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ - ಒಡಿಶಾದ ಒಡಲೊಳಗೆ (೧) ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ...

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

ಬೋರೇಗೌಡ ಬೆಂಗಳೂರಿಗ್ಬಂದ

ಬೋರೇಗೌಡ ಬೆಂಗಳೂರಿಗ್ಬಂದ

(ನಂದಿಹೋಗಲಿರುವ ನಂದಿಯ ಎರಡನೇ ಭಾಗ) ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ -...

read more
ನಂದಿಹೋಗಲಿರುವ ನಂದಿ – ಖ್ಯಾತ ಗಿರಿಧಾಮದ ವಿಭಿನ್ನ ಕತೆ!!

ನಂದಿಹೋಗಲಿರುವ ನಂದಿ – ಖ್ಯಾತ ಗಿರಿಧಾಮದ ವಿಭಿನ್ನ ಕತೆ!!

ಅಭಯನಿಗೀಗ ಕತೆ ಹೇಳುವ ವೃತ್ತಿ. ನಟರಾಜನಿಂದ ತೊಡಗಿ, ಝಣ ಝಣ ಲಕ್ಷ್ಮೀಪುತ್ರನಿಗೆ, ಕಟಿಪಿಟಿ ನಟೀಮಣಿಗೆ, ಕಾವ್ಯಶ್ರೀಗೆ,...

read more