ತಪ್ಪಿದ ಬದರಿ ಮತ್ತು ಮಾರ್ಗ ಕ್ರಮಣ

ತಪ್ಪಿದ ಬದರಿ ಮತ್ತು ಮಾರ್ಗ ಕ್ರಮಣ

ಕೇದಾರ ನಾಥದ ‘ವಿಜಯ’ಕ್ಕೆ ನಾನು ಅನುಭವಿಸಿದ ನೋವು ಹೆಚ್ಚೇ ಆಗಿತ್ತು. ಹಾಗಾಗಿ ಮರುದಿನದ ಬದರೀ ಯಾನದ ಯೋಚನೆಯನ್ನು ನಾನು ಮತ್ತು ದೇವಕಿ ಕೈ ಬಿಟ್ಟೆವು. ಸೋನ್ ಪ್ರಯಾಗಿನಿಂದ ಬದರಿಗೆ ಹೋಗಿ ಮರಳುವಲ್ಲಿ ಕವಲೂರಾಗಿ ಸಿಗುವ ಊರು ಕರ್ಣಪ್ರಯಾಗ್. ಅಲ್ಲಿ ನಮಗೆ ಎರಡು ದಿನದ ವಿಶ್ರಾಂತಿ, ಇತರರು ಬದರೀನಾಥಕ್ಕೆ. (ಇಂದು ದಾರಿಯ ಸಾಧ್ಯತೆಗಳು ತುಂಬ ಬದಲಿವೆ, ಬಿಡಿ.) ತಂಡವಾದರೂ ಸಾಕಷ್ಟು ಸೋತಿದ್ದುದರಿಂದ ಬೆಳಿಗ್ಗೆ (೨೦-೫-೯೦) ಸುಮಾರು ಎಂಟು ಗಂಟೆಯ ಹೊತ್ತಿಗೆ ಎಲ್ಲರು ಒಟ್ಟಾಗಿಯೇ ಸೋನ್ ಪ್ರಯಾಗ್ ಬಿಟ್ಟೆವು. ರುದ್ರಪ್ರಯಾಗದಲ್ಲೊಂದು ಸೈನ್ಯದ ಆಸ್ಪತ್ರೆ ಕಾಣಿಸಿತು. ಅಲ್ಲಿ ವೈದ್ಯರಿನ್ನೂ ಬಂದಿರಲಿಲ್ಲ. ಹಿರಿಯ ಶುಶ್ರೂಷಕ ಸಹೃದಯತೆಯಲ್ಲೇ ನನ್ನ ಪರೀಕ್ಷೆ ಮಾಡಿದರು. ಮತ್ತೆ ತಾನು ಸೈನಿಕ ಆಸ್ಪತ್ರೆಯ ನಿಯಮಾನುಸಾರ ಸಾರ್ವಜನಿಕ ಚಿಕಿತ್ಸೆ ಕೊಡಲಾಗದ್ದಕ್ಕೆ ಮೊದಲು ಕ್ಷಮೆ ಯಾಚಿಸಿದರು. ಅನಂತರ “ಈಗಾಗಲೇ ನಿಮ್ಮಲ್ಲಿ ಇರುವ ನೋವು ಉಪಶಮನಕಾರಕ ನುಂಗಿ ಸುಧಾರಿಸಿಕೊಳ್ಳಿ. ಊರಿಗೆ ಹೋಗಿ ಅವಶ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ” ಎಂದು ಸಲಹೆಯನ್ನಷ್ಟೇ ಕೊಟ್ಟರು.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

ಕ್ಷೀರಪಥದಿಂದ ಕಾಳಿ ಪಾತ್ರೆಗೆ (ದೂದ್ ಸಾಗರ್ ಸರಣಿಯಲ್ಲಿ ಹನಿ ಮೂರು)

ಕ್ಷೀರಪಥದಿಂದ ಕಾಳಿ ಪಾತ್ರೆಗೆ (ದೂದ್ ಸಾಗರ್ ಸರಣಿಯಲ್ಲಿ ಹನಿ ಮೂರು)

ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ...

read more
ದೂದ್ ಸಾಗರ್ (ಹನಿ ಒಂದು – ಕೊಂಕಣ ರೈಲು ಕಂಡೀರಾ)

ದೂದ್ ಸಾಗರ್ (ಹನಿ ಒಂದು – ಕೊಂಕಣ ರೈಲು ಕಂಡೀರಾ)

ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ...

read more
ವಾಲಿಯ ವನವಾಸ ಇನ್ನು ನಿಷ್ಕಂಟಕ (ವಾಲಿಕುಂಜ ಸರಣಿಯ ಮೂರನೇ ಭಾಗ)

ವಾಲಿಯ ವನವಾಸ ಇನ್ನು ನಿಷ್ಕಂಟಕ (ವಾಲಿಕುಂಜ ಸರಣಿಯ ಮೂರನೇ ಭಾಗ)

“ಉರ್ಣಿಗೆ ಹೋಗ್ತೀರಾ?” ನಿರೇನ್ ಕೇಳಿದರು. ನನ್ನ ಅಂಗಡಿಯ ‘ಲೌಕಿಕ ಬಂಧನಗಳು’ ಪೂರ್ಣ ಕಳಚದೇ ನನ್ನ ‘ಬಿಸಿಲೆಯ ವನವಾಸ’...

read more
ಅಜ್ಜಿಕುಂಜದ ವಿಹಾರ (ವಾಲಿಕುಂಜ ಸರಣಿಯ ಎರಡನೇ ಭಾಗ)

ಅಜ್ಜಿಕುಂಜದ ವಿಹಾರ (ವಾಲಿಕುಂಜ ಸರಣಿಯ ಎರಡನೇ ಭಾಗ)

ಕೇದಿಗೆ ಅರವಿಂದ ರಾವ್ ಕಬ್ಬಿನಾಲೆಯ ಅಳಿಯ. ಮತ್ತು ಅವರ ಅಲ್ಲಿನ ಬಳಗ ವಾಲಿಕುಂಜ ವಲಯದ ಘಟ್ಟಶ್ರೇಣಿಯನ್ನುತ್ತರಿಸಿ...

read more