ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

ಯೋಜನಾ ಹಂತದಲ್ಲಿ ನಾನು ಸಿಕ್ಕ ನಕ್ಷೆಗಳಲ್ಲಿ ನನಗೆ ಬೇಕಾದ ಎರಡು ಸ್ಥಳಗಳ ನಡುವೆ ದಾರಿ ಎಂಬ ಗೀಟುಗಳಲ್ಲಿ ಹತ್ತಿರದವನ್ನು ಆಯ್ದುಕೊಳ್ಳುತ್ತಿದ್ದೆ. ಆಮೇಲೆ ಅದರ ಉದ್ದಕ್ಕೆ ನೂಲನ್ನು ಆದಷ್ಟು ನಿಖರವಾಗಿ ಬಳುಕಿಸಿಟ್ಟು, ಇಂಚುಪಟ್ಟಿಯಲ್ಲಿ ಅಳೆದು, ಕಿಮೀಗೆ ಪರಿವರ್ತಿಸಿ ಪ್ರಯಾಣದ ಅಂದಾಜುಗಳನ್ನು ಮಾಡುತ್ತಿದ್ದೆ. ಆದರೂ ವಾಸ್ತವ ಭಿನ್ನವಿರುವ ಅಪಾಯ ಸದಾ ಇರುತ್ತಿತ್ತು. ಹಾಗಾಗಿ ಆಯಾ ಸ್ಥಳಕ್ಕೆ ಹೋದಾಗ ನಾವು ಹಾಕಿಕೊಂಡ ದಾರಿಯ ಸ್ಥಿತಿಗತಿಗಳನ್ನು ಸ್ಥಳೀಯರಿಂದ ವಿಚಾರಿಸಿಕೊಂಡೇ ಮುಂದುವರಿಯುತ್ತಿದ್ದೆವು. ಅಂಥ ಸಂದರ್ಭಗಳಲ್ಲಿ ಸಮಗ್ರ ದೃಷ್ಟಿ ಇಟ್ಟುಕೊಂಡು, ನಿಖರವಾಗಿ ಅಂತರವನ್ನೋ ಪರ್ಯಾಯ ಉತ್ತಮ ದಾರಿಯನ್ನೋ ಹೇಳುವವರು ಸಿಗುತ್ತಿದ್ದದ್ದು ಬಹಳ ಕಡಿಮೆ.

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

127 ಗಂಟೆಗಳು!

127 ಗಂಟೆಗಳು!

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ....

read more