ಹನುಮಾನ್ ಚಟ್ಟಿಯ ದುಂಧುಭಿ ವಧ!!

ಹನುಮಾನ್ ಚಟ್ಟಿಯ ದುಂಧುಭಿ ವಧ!!

ಕಾಗೆ ಹಾರಿದಂತೆ ಡೆಹ್ರಾಡೂನ್ – ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ – ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. ಎರಡೂ ಮುಕ್ಕಾಲು ಗಂಟೆಗೆ ನಾವು ಮಸ್ಸೂರಿ ಮುಟ್ಟುತ್ತಿದ್ದಂತೆ ಆಕಾಶವೇ ಹರಿದು ಬಿದ್ದಂತೆ ಭಾರೀ ಮಳೆ ಬಂತು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಮುದ್ರಣಾಲಯದ ಶೆಡ್ಡು ಖಾಲಿಯಾಗಿ ತೆರೆದುಕೊಂಡಿತ್ತು! ಸಕಾಲಕ್ಕೆ ಒಳ ಸೇರಿದ್ದಕ್ಕೆ ಉರಿ ಬಿಸಿಲ ನಾಡಿನ ವ್ಯವಸ್ಥೆಯಲ್ಲೇ ಇದ್ದ ನಾವೂ ನಮ್ಮ ಗಂಟು ಮೂಟೆಗಳೂ ಬಚಾವಾದವು.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ

ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ

ಹಣ್ಣು ಬಂದಿದೆ, ಕೊಳ್ಳಿರೋ: ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೀಗ ಹತ್ತು ಮೀರಿದ ಹರಯ, ಸಾವಿರಕ್ಕೂ ಮಿಕ್ಕ ಪ್ರದರ್ಶನಗಳ...

read more
ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್

ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್

ಜಿಟಿಎನ್ ಅವರ ಬಗ್ಗೆ ನಾನೀಗ ಏಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಅವರ ಬಗ್ಗೆ ಇತರರೊಡನೆ ಮಾತನಾಡುವಾಗ, ಅವರ...

read more
ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ…

ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ…

ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ - ಶೋಧವನ್ನು...

read more