ಎಲ್ಲೋರಾ ದೌಲತ ಗಿರಿ

ಎಲ್ಲೋರಾ ದೌಲತ ಗಿರಿ

ವಿಜಯಪುರ – ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ, ಚಾಲುಕ್ಯರ ಆಡಳಿತದಲ್ಲಿ ಗಟ್ಟಿಯಾಗಿ ರೂಪು ಪಡೆದ ನಗರ. ಮುಘಲ್, ಬಹಮನೀ, ಆದಿಲ್ ಶಾಹೀ, ಹೈದರಾಬಾದ್ ನಿಜಾಂ, ಮರಾಠ, ಬ್ರಿಟಿಶ್…… ಆಡಳಿತಗಳ ಸುಳಿಗಳಲ್ಲಿ ಬೆಳೆದಿದೆ, ಬಳಲಿದೆ. ಅದರಲ್ಲಿ ಢಾಳಾಗಿ ಕಾಣುವ ಕೆಲವು ಸಾಕ್ಷಿಗಳನ್ನಾದರೂ ನೋಡಲು ನಾವು (೨೭-೪-೯೦ರ) ಬೆಳಗ್ಗೆ ಐದೂವರೆ ಗಂಟೆಗೇ ಹೊರಟೆವು. ಮುಂದೆ ಮೊಪೆಡ್ಡಿನಲ್ಲಿ ಜೋಶಿಯವರ ‘ಶಿಷ್ಯ’ ಸಿದ್ಧಣ್ಣ ಬಿರಾದಾರ್. ಹಿಂದೆ ಖಾಲೀ ಬೈಕುಗಳಲ್ಲಿ ನಾವಾರು. ಅಪೂರ್ಣಗೊಂಡ ಮಹಲ್ಲಿನ ಹನ್ನೆರಡು ಕಮಾನುಗಳು (ಬಾರಾ ಕಮಾನ್), ಒಂದು ಭಾರೀ ಬುರುಜು (ಉಪ್ಲಿ ಬುರ್ಜ್), ಕೋಟೆಯ ಹಲವು ಫಿರಂಗಿಗಳ ಸಾಂಗತ್ಯದಲ್ಲಿ ತೋಪುಗಳ ರಾಜ ಎಂದೇ ಖ್ಯಾತವಾದ ಮಾಲಿಕ್ ಎ ಮೈದಾನ್, ತಾಜ್ ಮಹಲ್ಲಿಗೆ ಪ್ರೇರಣೆಯಾದ ಇಬ್ರಾಹಿಂ ರೋಜಾ, ಜುಮ್ಮಾ ಮಸೀದಿ ಸುತ್ತಿದೆವು. ನೋಡದೇ ಬಿಟ್ಟರೆ ಬಿಜಾಪುರ ನೋಡಿದ್ದೇ ಸುಳ್ಳೆನ್ನುವ ಗೋಲ್ ಗುಂಬಜ್‍‍ಗಂತೂ ಅವಶ್ಯ ಹೋಗಿದ್ದೆವು. ಅಲ್ಲಿನ ಶಬ್ದ ಮಾಲಿನ್ಯಕ್ಕೆ ಮೌನವಾಗಿ ಕಿವಿಕೊಟ್ಟೆವು. ಎಡೆಯಲ್ಲೆಲ್ಲೋ ಹೋಟೆಲಿನಲ್ಲಿ ತಿಂಡಿ ಮಾಡಿಕೊಂಡೆವು. ವಿವಿಧ ರಾಜಾಡಳಿತಗಳ ಕಾಲದಲ್ಲಿ ನಿರ್ಮಾಣಗೊಂಡು ಬೇಸಗೆಯ ಉತ್ತುಂಗದಲ್ಲೂ ಭರ್ತಿ ನೀರಿದ್ದ ಭಾರೀ ಬಾವಿಗಳಿಗೆ ಪ್ರತಿನಿಧಿ ಎನ್ನುವಂತೆ ಒಂದನ್ನೂ (ತಾಸ್ ಬಾವಡೆ) ಕಂಡೆವು.

read more
ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೭ ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ...

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ

ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ

“ಪರ್ವತಾರೋಹಣ ವನ್ಯಸಂರಕ್ಷಣೆಗಳ ಬಗ್ಗೆ ಮಾತಾಡಿದ ತೀವ್ರತೆಯಲ್ಲಿ ನೀವು ಯಕ್ಷಗಾನವೋ ಇನ್ನೊಂದು ಕಲಾಪ್ರಕಾರದ ಬಗ್ಗೆಯೋ...

read more